Advertisement

ಟರ್ಕಿ ದೇಶದಲ್ಲಿದೆ ಕನಸಿನ ನಗರಿ

06:27 PM Apr 21, 2021 | Team Udayavani |

ಟರ್ಕಿ ದೇಶ ಎಂದಾಗ ಪ್ರಸಿದ್ಧ ಪ್ರವಾಸಿ ಸ್ಥಳ, ಹಾಲಿಡೇ ಡೆಸ್ಟಿನೇಶನ್‌ ಬೀಚ ಇಸ್ತಾಂಬು ಲ್‌ನ ಗ್ರ್ಯಾಂಡ್‌ ಬಜಾ ರ್‌,  ಸ್ಪೈಸ್‌ ಬಜಾರ್‌, ಕ್ರೂಸ ಯಾನ, ಊಟ ತಿಂಡಿ ಎಲ್ಲ ನೆನಪಾಗುವುದು ಸಹಜ. ಆದರೆ ವಿಶಾಲ ಮನಸಿನಿಂದ ಕಣ್ತೆರೆದು ನೋಡಿದರೆ ಅಸಂಖ್ಯಾತ ಅದ್ಭುತ ಮತ್ತು ಐತಿಹಾಸಿಕ ಸ್ಥಳಗಳನ್ನು ಕಾಣಬಹುದು. ಈ ದೇಶದ ಭೌಗೋಳಿಕ ವಿಶೇಷವೆಂದರೆ ಎರಡು ಖಂಡದಲ್ಲಿ ಹರಡಿದೆ. ಶೇ.97ರಷ್ಟು ಏಷ್ಯಾ ಖಂಡದಲ್ಲಿ, ಉಳಿದ ಶೇ. 3ರಷ್ಟು ಯುರೋಪ್‌ನಲ್ಲಿದೆ.

Advertisement

ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾ ದಂತಹ ಸ್ಥಳ  ಈ ದೇಶದಲ್ಲಿರುವ ಕೆಪಡೋಕಿಯದ ಗೋರೆಮೆ. 1985ರಲ್ಲಿ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೋ ಘೋಷಿಸಿದೆ.

ನಾವು ಇಸ್ತಾಂಬು ಲ್‌ ಸರ್ವಿಸ್‌ ಅಪಾರ್ಟ್‌ಮೆಂಟ್‌ ನ ಲ್ಲಿ ಸಾಮಗ್ರಿಗಳನ್ನಿಟ್ಟು ಇಸ್ತಾಂಬುಲ್‌ ನಗರವೆಲ್ಲ ತಿರುಗಾಡಿ ಬಳಿಕ ಹೊರಟಿದ್ದು ಕೆಪೆಡೋಕಿಯದ ಗೋರೆಮೆ ನೋಡಲು. ಇಸ್ತಾಂಬುಲ್‌ನಲ್ಲಿ ಎರಡು ವಿಮಾನ ನಿಲ್ದಾಣವಿದೆ. ಯಾವುದೇ ವಿಮಾನ ನಿಲ್ದಾಣ ದಿಂದ ಹೊರಟರೂ ಒಂದುವರೆ ಗಂಟೆಯಲ್ಲಿ ಕೈಸೇರಿ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ 40 ಕಿ.ಮೀ. ರಸೆೆ¤ ಮೂಲಕ ಗೋರೆಮೆ ತಲುಪಬ ಹುದು. (ಬಸ್‌, ರೈಲು ಸೌಲ ಭ್ಯ ವೂ ಇದ್ದು ಇದ ರ ಲ್ಲಿ ಹೋದ ರೆ ಹೆಚ್ಚು ಸಮಯ ಬೇಕಾಗುವುದು.) ಗೋರೆಮೆಯಲ್ಲಿ ಗುಹೆಯ ರೆಸಾರ್ಟ್‌ ಬಹಳ ಪ್ರಸಿದ್ಧಿ. ಇಲ್ಲಿ ತಂಗಿದ್ದು ಒಂದು ಅವಿಸ್ಮರಣೀಯ ಅನುಭವ.

ಇಲ್ಲಿ ಜಾಲ್ವಾಮುಖೀ ವಿಸ್ಫೋಟದ ಅನಂತರ ಪರ್ವತ ಶಿಖರಗಳಾಗಿವೆ. ಈ ಶಿಖರಗಳು ಸವೆದು ಈಗಿರುವ ಕಲ್ಲಿನ ಆಕೃತಿ ಪಡೆದಿವೆ. ಈ ಸಂಪೂರ್ಣ ಪ್ರದೇಶವನ್ನು ಗೋರೆಮೆ ನ್ಯಾಷನಲ್‌ ಪಾರ್ಕ್‌ ಎನ್ನುತ್ತಾರೆ. ಅಲ್ಲಿಯ ಶಿಖರಗಳ ಸವೆತದ ಅನಂತರ ಫೇರಿ ಚಿಮಣಿ (fairy chimney) ಆಕಾರಗಳನ್ನು ಪಡೆದಿವೆ ಎನ್ನಲಾಗುತ್ತದೆ.

ಸಂಪೂರ್ಣ ನಗರ ಗುಹೆಗಳಿಂದ ತುಂಬಿದ್ದು, ಮನೆ, ಹೊಟೇಲ…, ಅಂಗಡಿ, ರೆಸ್ಟೋರೆಂಟ್‌

Advertisement

ಎಲ್ಲವೂ ಗುಹೆಗಳಲ್ಲಿವೆ.

3ನೇ ಪುಟಕ್ಕೆ  ಕಲ್ಲಿನಿಂದ ಕಡಿದು ತಯಾರಿಸಿದ ಚರ್ಚ್‌ಗಳೂ ಇವೆ. ನದಿಗಳು, ಹರಿಯುವ ತೊರೆಗಳು, ಕಲ್ಲಿನ ಆಕಾರಗಳನ್ನು ನೋಡಿದಾಗ ಕತೆಗಳಲ್ಲಿ ಓದಿರುವ ಕನಸಿನ ನಗರದಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ  ಇದೊಂದು  ಕನಸಿನ ನಗರಿ ಎನ್ನಬಹುದು.

ಗೈಡೆಡ್‌ ಟೂರ್‌ ಬಳಸುವುದು ಉತ್ತಮ ಆಯ್ಕೆ. ಇಲ್ಲಿಯ ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಸ್ವಾರಸ್ಯ ಮತ್ತು ವಿವರಗಳಿವೆ. ಹೀಗಾಗಿ ಈ ಎಲ್ಲ ವಿವರ ತಿಳಿದುಕೊಳ್ಳದೆ ಪ್ರದೇಶದ ವಿಹಾರ ಮಾಡಿದರೆ ನೀರಸವೆನಿಸುವುದು.

ಇಲ್ಲಿನ ಪ್ರವಾಸದಲ್ಲಿ  ಕೆಂಪು, ಹಸುರು, ನೀಲಿ ಎಂಬು ದಾಗಿ ಮೂರು ವಿಧಗಳನ್ನು ಉಲ್ಲೇಖ ಮಾಡಲಾಗುತ್ತದೆ.

ಕೆಂಪು ಪ್ರವಾಸ

ಇದರಲ್ಲಿ ಕೆಪೆಡೋಕಿಯದ ಮುಖ್ಯ ಸ್ಥಳಗಳನ್ನು ನೋಡಬಹುದು. ಉಚಿಸಾರ ಕೇಸಲ, ಓಪನ್‌ ಏರ್‌ ಮ್ಯೂಸಿಯಂ, ರಮ್‌ ವ್ಯಾಲಿ, ಡೆವರೆಂಟ್‌ ವ್ಯಾಲಿ, ಮಡಿಕೆ ಕಲಿಕಾ ಕೇಂದ್ರ…ಇತ್ಯಾದಿ.

ಹಸುರು ಪ್ರವಾಸ

ಇದು ನಗರದಾಚೆಗೆ ಹರಡಿಕೊಂಡ ಪ್ರದೇಶದ ದರ್ಶನ ಮಾಡಿಸುತ್ತದೆ. ಗೊರೆಮೆ ಪೆನೋರಮ, ಭೂಗತ ನಗರ, ರೆಡ ವ್ಯಾಲಿ, ಸೆಲಿಮ್‌ ಮೊನೆಸ್ಟ್ರಿ ಇತ್ಯಾದಿ.

ನೀಲಿ ವಿಹಾರ

ಇದನ್ನು  ನೋಡದಿದ್ದರೂ ಕೆಂಪು ಮತ್ತು ಹಸುರು ವಿಹಾರವನ್ನು ತಪ್ಪದೇ ನೋಡಬೇಕು.

 

ಬಹಳಷ್ಟು ವಿಚಾರಗಳ ನ್ನು ಹುಟ್ಟುಹಾಕುವ ಆಕಾರಗಳ ರಚನೆಯಿದು. ವಿಜ್ಞಾನಿಗಳು, ಆರ್ಕಿಯಾಲಜಿಸ್ಟಗಳು ಕುತೂಹಲ ಕೆರಳಿಸುವ ನೈಸರ್ಗಿಕವಾಗಿ ರಚಿಸಲ್ಪಟ್ಟ ಆಕಾರಗಳು, ಅದಾವುದೋ ಮಾಯಾನಗರಿಯಂತೆ ಭಾಸ ವಾಗುತ್ತದೆ. ಕಲ್ಲಿನ ಆಕಾರಗಳು ಚಿಮಣಿ ಯಂತಿರುವುದರಿಂದ ಫೇರಿ ಚಿಮಣಿಯೆಂದು ಹೇಳಿದ್ದಾರೆ ಎನ್ನುವ ಉಲ್ಲೇಖವಿದೆ.

 

ಗೊರೆಮೆ ನಗರದ ಪೆನಾರಾಮಿಕ್‌ ದೃಶ್ಯ ಇಲ್ಲಿಂದ ಕಾಣಸಿಗುವುದು. ಸಾವಿರಾರು ವರ್ಷ ಗಳ ಸವೆತದಿಂದ ರೂಪುಗೊಂಡ ಪ್ರಕೃತಿಯ ಸ್ವರೂ ಪ ವನ್ನು ಕಾಣಬಹುದು.

ಇದು ಕೆಪೆಡೂಕಿಯದ ಎತ್ತರದ ಪ್ರದೇಶ. ರಕ್ಷಣಾ ಪ್ರದೇಶದ ಮುಖ್ಯ ಕೆಂದ್ರವಾಗಿತ್ತು ಎಂದಿ¨ªಾರೆ. ಗುಹೆಯೊಳಗೆ ಕಡಿದು ಜನರ ವಾಸಕ್ಕೆ ಮಾಡಿರುವ ಇಲ್ಲಿಯ ದೃಶ್ಯ ರುದ್ರ ರಮಣೀಯ.

ಅತ್ಯಂತ ಕುತೂಹಲಕಾರಿ ಮತ್ತು ಪ್ರಮುಖ, ಆಕರ್ಷಕ ವಿಷಯ ಹೊಂದಿದ ಸ್ಥಳ. ಅರಬ ಮತ್ತು ಬೈಜ ರಿ ಟೈ ನ್‌ನ ಯುದ್ಧದ ಕಾಲದಲ್ಲಿ ಇಲ್ಲಿಯ ಜನರು ತಮ್ಮ ರಕ್ಷಣೆಗಾಗಿ 7 ಮತ್ತು 8ನೇ ಶತ ಮಾ ನ ದಲ್ಲಿ ಇದನ್ನು ನಿರ್ಮಿ ಸಿ ದ್ದರು ಎಂಬ ಉಲ್ಲೇ ಖ ವಿದೆ.  8 ಮಳಿಗೆಯ ಈ ಭೂಗತ ನಗರದೊಳ ಗೆ 20,000 ಜನರಿಗೆ ನೆಲೆಸಲು ಅನುಕೂಲವಾಗಿದ್ದು ಸ್ನಾನಗೃಹ, ಮಳೆ ನೀರಿನ ಶೇಖರಣೆಗೆ,  ವಾಸಕ್ಕೆ ಅನುಕೂಲವಾಗುವ ಎಲ್ಲ ವ್ಯವಸ್ಥೆ ಹೊಂದಿದೆ. ಪ್ರವಾಸಿಗರಿಗೆ ಕೇವಲ 5 ಮಹಡಿಯವರಗೆ ನೋಡಲು ಅವಕಾಶವಿದೆ. ಈ ಪುರಾತನ ಭೂಗತ ನಗರದ ಮೇಲೆ ಹೊಸ ನಗರ ಅಂದ ರೆ ಈಗಿನ ಜನ ಜೀವನವಿದೆ.

 

ಇಲ್ಲಿಯ ಮರಳು ಕಲ್ಲಿನಲ್ಲಿರುವ ಖನಿಜಗಳು ಗುಲಾಬಿ ಬಣ್ಣ ಹೊಂದಿವೆ. ದಿನವೆಲ್ಲ ಇಲ್ಲಿಯ ಬಣ್ಣ ಗುಲಾಬಿಯಾಗಿ ಕಾಣುವುದು, ಇದರ ಅಂದ ಸೂರ್ಯಾಸ್ತದ ಸಮಯದಲ್ಲಿ ಇನ್ನೂ ಇಮ್ಮಡಿಯಾಗುವುದು. monk valley, devrent valley, red valley.

ಹೀಗೆ ಬಹಳಷ್ಟು valley  ಗಳಿವೆ. ನೋಡುವ, ಅರಿಯುವ ಹಲ ವಾರು ವಿಚಾರಗಳಿವೆ. ಅಕ್ಷರದಲ್ಲಿ ಬರೆಯುವುದು ಬಹಳ ಕಷ್ಟವೆ. ಒಮ್ಮೆ ಕಣ್ಣಿನಲ್ಲಿ ನೋಡಿ ಮನದಣಿಯೇ ಆನಂದಿಸುವ, ನೋಡಿದ ಅನಂತರ ಮೆಲಕು ಹಾಕಬೇಕೆನಿಸುವ ಅದ್ಭುತ  ಸ್ಥಳವಿದು.

ಡಾ| ವಾಣಿ ಸಂದೀಪ, ಸೌದಿ ಅರೇಬಿಯ

Advertisement

Udayavani is now on Telegram. Click here to join our channel and stay updated with the latest news.

Next