Advertisement
ಇದರಿಂದ ಪಶ್ಚಿಮ ಅರುಣಾಚಲ ಪ್ರದೇಶ ಮತ್ತು ಚೀನಾ ಗಡಿಗೆ ಸಂಪರ್ಕ ಮತ್ತಷ್ಟು ಹತ್ತಿರವಾಗಲಿದ್ದು, ಚೀನಾ ವಿರುದ್ಧ ತ್ವರಿತ ಸೈನಿಕ ಜಮಾವಣೆಗೆ, ವ್ಯೂಹಾತ್ಮಕ ದೃಷ್ಟಿಯಿಂದಲೂ ನೆರವಾಗಲಿದೆ. ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಈ ಸುರಂಗ ನಿರ್ಮಾಣವಾಗಲಿದ್ದು, 2 ಸುರಂಗಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 475 ಮೀ ಮತ್ತು 1790 ಮೀ. ಉದ್ದದ 2 ಸುರಂಗಗಳು ಇರಲಿದ್ದು, 12.37 ಕಿ.ಮೀ. ದೂರ ಇರಲಿದೆ. ಇದರಿಂದ ರಾ.ಹೆ.ರಿಯ ಬೊಮಿªಲಾ-ತವಾಂಗ್ ನಡುವಿನ ದೂರ 10 ಕಿ.ಮೀ. ದೂರ ಕಡಿತಗೊಳ್ಳಲಿದೆ. ಈ ದಾರಿ ಅತ್ಯಂತ ದುರ್ಗಮವಾಗಿದ್ದು, ಸುರಂಗ ನಿರ್ಮಾಣದಿಂದ ಸರ್ವಋತು ರಸ್ತೆ ಲಭ್ಯವಾಗಲಿದೆ. ಈಗಾಗಲೇ ಸುರಂಗದ ತಾಂತ್ರಿಕ ಸರ್ವೇ ಮುಗಿದಿದ್ದು, ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಾಗಿದೆ. ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ. Advertisement
ಸೆಲಾ ಪಾಸ್‌ಗೆ ಸುರಂಗ: ಚೀನಾ ಗಡಿ ಇನ್ನಷ್ಟು ಹತ್ತಿರ
07:00 AM Jul 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.