Advertisement
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ದ್ದೀರಿ. ಏನು ಅನಿಸಿತು?– ತುಂಬಾ ಸಂತೋಷವಾಗಿದೆ. ನನ್ನ ಶ್ರಮಕ್ಕೆ ದೇವರು ಪ್ರಶಸ್ತಿ ಕರುಣಿಸಿದ್ದಾರೆ. ಹಳ್ಳಿಯ ಮೂಲೆ ಯಲ್ಲಿ ಕೃಷಿ ಮಾಡಿ ಬದುಕಿದ ನಾನು ದೇಶದ ಅತ್ಯುನ್ನತ ಪ್ರಶಸ್ತಿ ಸಿಗುತ್ತದೆ ಎಂದು ಊಹಿಸಿರಲೇ ಇಲ್ಲ.
ಮಧ್ಯಾಹ್ನ ನನಗೆ ಫೋನ್ ಬಂತು. ಹಿಂದಿಯಲ್ಲೋ ಇಂಗ್ಲಿಷ್‌ನಲ್ಲೋ ಮಾತ ನಾಡಿದರು. ನನಗೆ ಅರ್ಥವಾಗಲಿಲ್ಲ. ಮಧ್ಯಾಹ್ನ ಒಂದು ಗಂಟೆಗೆ ವಿಟ್ಲದ ಕೃಷಿ ಇಲಾಖೆ ಅಧಿಕಾರಿಗಳು ಪ್ರಶಸ್ತಿಯ ಮಾಹಿತಿ ನೀಡಿದರು. ಯಾವಾಗ ದಿಲ್ಲಿಗೆ ತೆರಳುತ್ತೀರಿ?
ಯಾವಾಗ ಅಂತ ಗೊತ್ತಿಲ್ಲ. ದಿನ ಮತ್ತು ಸಮಯ ತಿಳಿಸುತ್ತೇವೆ, ದಿಲ್ಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಬೇಕೆಂದು ಹೇಳಿದ್ದಾರೆ. ಏನೂ ತಿಳಿಯದ ನನಗೆ ಅಲ್ಲಿಗೆ ಹೋಗಿ ಪ್ರಶಸ್ತಿ ಪಡೆಯುವಂತಹ ಭಾಗ್ಯ ಸಿಕ್ಕಿದೆ. ದೇವರ ಅನುಗ್ರಹ.
Related Articles
ಹೌದು, ನೆನಪಿದೆ. ಕೃಷಿಭೂಮಿಯಲ್ಲಿ ಓಡಾಡಿದ್ದು, ಸುರಂಗವನ್ನು ತೋರಿಸಿದ್ದು ಎಲ್ಲವೂ ನೆನಪಿದೆ. ಕಷ್ಟಪಟ್ಟು ದುಡಿದಿದ್ದೆ. ಮನೆಯವರೂ ಸಹಕರಿಸುತ್ತಿದ್ದರು. ವಿದ್ಯೆಯಿಲ್ಲದೇ ಇದ್ದರೂ ವಿದ್ಯಾವಂತರನ್ನು ಸಂಪರ್ಕಿಸಲು ಇದೆಲ್ಲ ಕಾರಣವಾಗಿದೆ.
Advertisement
ಹಾಗಾದರೆ ಈಗ ನಿಮ್ಮ ಶ್ರಮ ಸಾರ್ಥಕವಾಯಿತು ಅಲ್ಲವೇ?ನಿಜ. ನನಗೆ ಬೇರೇನೂ ಹೇಳಲು ಬರುವುದಿಲ್ಲ. ಖುಷಿ ಯಂತೂ ಆಗಿದೆ. ಇಲಾಖೆಯವರು ತಿಳಿಸಿದ ಮೇಲೆ ಫೋನ್ ಕರೆಗಳು ನಿರಂತರವಾಗಿ ಬರುತ್ತಿವೆ. ಎಲ್ಲರ ಪ್ರೀತಿಗೆ ಸಂತೋಷವಾಗುತ್ತಿದೆ. ಮಧ್ಯಾಹ್ನ ತನಕ ಕೂಲಿ ಕೆಲಸ. ಬಳಿಕ ಮನೆಗೆ ಬಂದು ಸುರಂಗ ತೋಡುತ್ತಿದ್ದೆ. ರಾತ್ರಿ 12ರ ವರೆಗೂ ಒಬ್ಬನೇ ದುಡಿಯುತ್ತಿದ್ದೆ. ಜತೆಗೆ ಗುಡ್ಡವನ್ನು ಸಮತಟ್ಟಾಗಿಸಿ, ಸಾಧ್ಯವಾದಷ್ಟು ಅಡಿಕೆ ಸಸಿಯನ್ನು ನೆಡುತ್ತಿದ್ದೆ. ಈ ಅಡಿಕೆ ಸಸಿಗಳು ಕೆಲಸಕ್ಕೆ ಹೋಗುತ್ತಿದ್ದ ಮನೆಯವರ ತೋಟದಲ್ಲಿ ಬಿದ್ದು ಹುಟ್ಟಿದ ಸಸಿಗಳು. ಈ ಜಾಗದ ಅಭಿವೃದ್ಧಿಗೆ ಯಾವುದೇ ಸಾಲ ಮಾಡಲಿಲ್ಲ. ಸರಕಾರದ ಸವಲತ್ತುಗಳನ್ನೂ ಪಡೆಯಲಿಲ್ಲ. ಉಳಿಕೆಯಾಗುವಂತೆ ಯೋಜನೆ ರೂಪಿಸಿ, ಕಾರ್ಯನಿರ್ವಹಿಸುತ್ತಿದ್ದೆ.
-ಮಹಾಲಿಂಗ ನಾಯ್ಕ ಅಮೈ - ಉದಯಶಂಕರ್ ನೀರ್ಪಾಜೆ