Advertisement

ತುಮಕೂರು: ಸೋಂಕಿತರ ಸಂಖ್ಯೆ 50ಕ್ಕೇರಿಕೆ

07:01 AM Jun 21, 2020 | Lakshmi GovindaRaj |

ತುಮಕೂರು: ಜಿಲ್ಲೆಯಲ್ಲಿ ಶನಿವಾರ ನಾಲ್ವರಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ನಾಗೇಂದ್ರಪ್ಪ ತಿಳಿಸಿದ್ದಾರೆ. ತುಮಕೂರು  ನಗರದಲ್ಲಿ ಒಂದು, ಗ್ರಾಮಾಂತರದಲ್ಲಿ ಎರಡು ಪ್ರಕರಣ ಹಾಗೂ ತಿಪಟೂರಿನಲ್ಲಿ ಒಂದು ಪ್ರಕರಣ ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿದೆ.

Advertisement

ಟಿಎಂಕೆ 47 ತುಮಕೂರು ತಾಲೂಕಿನ 52 ವರ್ಷದ ಮಹಿಳೆಗೆ ಕೋವಿಡ್‌ 19 ಪಾಸಿಟಿವ್‌  ಬಂದಿದ್ದು ಇವರು ನೆಲಮಂಗಲದ ಸೋಂಕಿತನೊಬ್ಬನ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಇವರನ್ನು ತುಮಕೂರಿನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಟಿಎಂಕೆ 48 ತಿಪಟೂರು ನಗರದ 65 ವರ್ಷದ ಮಹಿಳೆ ತಮಿಳುನಾಡಿಗೆ ಹೋಗಿ  ಬಂದಿದ್ದು ಕೋವಿಡ್‌ 19 ಪಾಸಿಟಿವ್‌ ಬಂದಿದೆ.

ಟಿಎಂಕೆ 49 ತುಮಕೂರು ಗ್ರಾಮಾಂತರದ 26 ವರ್ಷದ ಯುವಕನಿಗೆ ಕೋವಿಡ್‌ 19 ದೃಢಪಟ್ಟಿದೆ. ಟಿಎಂಕೆ 50 ತುಮಕೂರು ನಗರದ 25 ವರ್ಷದ ಯುವಕನಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿದೆ. ಈತ ಹೊರದೇಶದಿಂದ ಬಂದಿದ್ದು ತುಮಕೂರು  ನಗರದಲ್ಲಿ ಕ್ವಾರಂಟೈನ್‌ ನಲ್ಲಿದ್ದರು ಶನಿವಾರ ಕೋವಿಡ್‌ 19 ಪಾಸಿಟಿವ್‌ ಇರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next