Advertisement

ತುಮಕೂರು: 30 ಸಾವಿರ ಹೆಕ್ಟೇರ್‌ ಅರಣ್ಯ ಹೆಚ್ಚಳ

06:46 AM Jun 05, 2020 | Lakshmi GovindaRaj |

ತುಮಕೂರು: ಎಲ್ಲಾ ಕಡೆ ಅರಣ್ಯ ಸಂಪತ್ತು ನಾಶವಾಗುತ್ತಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ ಹೆಚ್ಚಳವಾಗಿರು ವುದುರಾಜ್ಯ ಅರಣ್ಯ ಇಲಾಖೆ ನಡೆಸಿರುವ ಸ್ಯಾಟಲೈಟ್‌ ಸಮೀಕ್ಷೆಯಲ್ಲಿ  ಕಂಡು ಬಂದಿದೆ. ಪರಿಸರ ರಕ್ಷಣೆಗೆ ಸರ್ಕಾರ ಮೊದಲಿಂದಲೂ  ಒತ್ತು ನೀಡುತ್ತಲೇ ಬಂದಿದೆ. ಆದರೆ ಕೆಲವು ಅರಣ್ಯ ಭಕ್ಷಕರು ಪರಿಸರ ರಕ್ಷಣೆಯ ಅರಿವಿಲ್ಲದೇ ಅರಣ್ಯ ನಾಶಕ್ಕೆ ಮುಂದಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ಜಿಲ್ಲೆಯಲ್ಲಿ 30  ಸಾವಿರ ಹೆಕ್ಟೇರ್‌ ಅರಣ್ಯ  ಪ್ರದೇಶ ಹೆಚ್ಚಳವಾಗಿರುವುದು ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

Advertisement

ಅರಣ್ಯ ಪ್ರದೇಶದ ಮಾಹಿತಿ: ಜಿಲ್ಲೆಯಲ್ಲಿ ಈಗ ಇರುವ ಅರಣ್ಯ ಪ್ರದೇಶದ ಅಂಕಿ ಅಂಶ ಪ್ರಕಾರ ಮೀಸಲು ಅರಣ್ಯ 80,969.45 ಹೆಕ್ಟೇರ್‌, ಗ್ರಾಮ ಅರಣ್ಯ 2973.50, ರಕ್ಷಿತ ಅರಣ್ಯ 3966.35, ಸೆಕ್ಷನ್‌-4 12466.14, ಡೀಮ್ಡ್ ಫಾರೆಸ್ಟ್‌ 12571.69,  ಒಟ್ಟು 112947.13 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ಸಂಪತ್ತು ಇದೆ.

ಕಾಡು ಪ್ರಾಣಿಗಳ ಸಂತತಿ ಹೆಚ್ಚಳ: ಅರಣ್ಯ ಪ್ರದೇಶದಲ್ಲಿ ಮರಗಿಡಗಳು ದಟ್ಟವಾಗಿ ಬೆಳೆ ದಿರುವುದರಿಂದ ಅರಣ್ಯ ಪ್ರಾಣಿಗಳ ಸಂತತಿ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಚಿರತೆ, ಕರಡಿ, ಜಿಂಕೆ, ನವಿಲು ಸೇರಿದಂತೆ ಅನೇಕ ಕಾಡು ಪ್ರಾಣಿಗಳು ತಮ್ಮ  ಸಂತತಿ ಹೆಚ್ಚಿಸಿ ಕೊಂಡಿವೆ. ಇದರಿಂದ ಅರಣ್ಯ ಸಂಪತ್ತಿನೊಂದಿಗೆ ವನ್ಯ ಜೀವಿ ಸಂಪತ್ತೂ ಹೆಚ್ಚಳವಾಗಿರುವುದು ಜಿಲ್ಲೆಯ ಜನರಿಗೆ ಸಂತಸದ ಸಂಗತಿಯಾಗಿದೆ.

ಗಿಡ ಬೆಳೆಸಲು ಆಸಕ್ತಿ: ಅರಣ್ಯ ಪ್ರದೇಶ ತನ್ನ ವಿಸ್ತೀರ್ಣ ಹೆಚ್ಚಿಸಿಕೊಳ್ಳಲು  ಅರಣ್ಯದಿಂದ ಮನೆಗಳಿಗೆ ಸೌದೆ ತರುವುದು ನಿಂತಿದೆ. ಸರ್ಕಾರ ಹಳ್ಳಿ ಹಳ್ಳಿಗೆ ಗ್ಯಾಸ್‌ ನೀಡಿರುವುದ ರಿಂದ ಅಡುಗೆ ಮಾಡಲು ಗ್ಯಾಸ್‌ ಬಳಸು ತ್ತಿದ್ದಾರೆ. ಅರಣ್ಯ ರಕ್ಷಕರು ಮರಕಡಿಯದಂತೆ ಗಮನ ಹರಿಸುತ್ತಿದ್ದಾರೆ. ಜೊತೆಗೆ ರೈತರು  ಅರಣ್ಯ  ಕೃಷಿ ಮಾಡಲು ಹೆಚ್ಚು ಆಸಕ್ತಿ ತೋರು ತ್ತಿರುವುದು ಮತ್ತು ಜನರಲ್ಲಿಯೇ ಮರ ಬೆಳೆಸ ಬೇಕು ಎನ್ನುವ ಆಸಕ್ತಿ ಮೂಡುತ್ತಿರುವುದು ಅರಣ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಜಾಗೃತಿ ಅಗತ್ಯ: ಒಟ್ಟಾರೆ ಪ್ರತಿ ವರ್ಷ ವಿಶ್ವ ಪರಿಸರ ದಿನದಂದು ಅರಣ್ಯ ಬೆಳೆಸುವುದರ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಜನ ಇದನ್ನು ಅರಿತು ಮುಂದೆ ಉತ್ತಮ ಪರಿಸರ ನಿರ್ಮಾಣವಾಗಲು ಪ್ರತಿಯೊಬ್ಬರು ಕನಿಷ್ಠ  ಒಂದು ಮರ ಬೆಳೆಸಿ ಪರಿಸರ ಉಳಿಸಿ ಎನ್ನುವುದೇ ಉದಯವಾಣಿ ಕಾಳಜಿಯಾಗಿದೆ.

Advertisement

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿ ವಿತರಣೆ: ತುಮಕೂರು ಪ್ರಾದೇಶಿಕ ಅರಣ್ಯ ವಿಭಾಗದ ವಿವಿಧ ಸಸ್ಯಕ್ಷೇತ್ರಗಳಲ್ಲಿ 2019-20ನೇ ಸಾಲಿನಲ್ಲಿ ತೇಗ, ಸಿಲ್ವರ್‌ಓಕ್‌, ಮಹಾಘನಿ, ಶ್ರೀಗಂಧ, ಹಲಸು, ಬೆಟ್ಟನೆಲ್ಲಿ, ಹೆಬ್ಬೇವು,  ಜಂಬುನೇರಳೆ, ಹೊನ್ನೆ, ಬೀಟೆ, ಹುಣಸೆ, ಬೇವು ಇತ್ಯಾದಿ 13.921 ಲಕ್ಷ ಸಸಿಗಳನ್ನು ವಿತರಣೆಗಾಗಿ ಬೆಳೆಸಲಾಗಿದ್ದು, ಈ ಸಸಿಗಳನ್ನು 2020ನೇ ಮಳೆಗಾಲದಲ್ಲಿ ಸಾರ್ವಜನಿಕರಿಗೆ, ರೈತರಿಗೆ ವಿತರಿಸಲಾಗುತ್ತದೆ. ಫ‌ಲಾನುಭವಿಗಳು  ಸಂಬಂಧಪಟ್ಟ ತಾಲೂಕಿನಲ್ಲಿ ಪ್ರಾದೇಶಿಕ ಅರಣ್ಯ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ದಾಖಲಾತಿಗಳೊಂದಿಗೆ ಸಂಪರ್ಕಿಸುವಂತೆ ಉಪ ಅರಣ್ಯ ಸಂರûಾಣಾಧಿಕಾರಿ ಎಚ್‌.ಸಿ. ಗಿರೀಶ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೃಷಿ ಅರಣ್ಯಕ್ಕೆ ಒತ್ತು ನೀಡಲಾಗಿದೆ. ಈವರೆಗೆ ಕೋಲಾರದಲ್ಲಿ ಶ್ರೀಗಂಧ ಸಸಿ ಬೆಳೆಸಿ ರೈತರಿಗೆ ನೀಡಲಾಗುತ್ತಿತ್ತು. ಈ ಬಾರಿ ನಮ್ಮ ಜಿಲ್ಲೆಯಲ್ಲಿಯೂ 3.50 ಲಕ್ಷ ಶ್ರೀಗಂಧ ಸಸಿಗಳನ್ನು ಬೆಳೆಸಿ ರೈತರಿಗೆ ನೀಡಲಾಗಿದೆ. 
-ಎಚ್‌.ಸಿ.ಗಿರೀಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ತುಮಕೂರು

* ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next