ಮುಂಬಯಿ: 2018ರಲ್ಲಿ ಬಂದಿದ್ದ ಹಾರಾರ್ ‘ತುಂಬಾಡ್ʼ (Tumbbad) ಸಿನಿಮಾ ಸೆ.13 ರಂದು ರೀ- ರಿಲೀಸ್ ಆಗಿದೆ. ಸಿನಿಮಾದ ಟಿಕೆಟ್ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ.
ಯಾವ ದೊಡ್ಡ ಕಲಾವಿದರು, ಸ್ಟಾರ್ ಕಾಸ್ಟ್ ಇಲ್ಲದೆಯೇ ರಿಲೀಸ್ ಆದ ‘ತುಂಬಾಡ್ʼ ತನ್ನ ಕಥೆ ಹಾಗೂ ಅಮೋಘ ದೃಶ್ಯಾವಳಿಯಿಂದ ಪ್ರೇಕ್ಷಕರ ಮನಗೆದ್ದಿತ್ತು. ನಿಧಾನವಾಗಿ ಥಿಯೇಟರ್ ನತ್ತ ಜನ ಬರುವಾಗಲೇ ಸಿನಿಮಾ ಮಾಯಾವಾಗಿತ್ತು. ಆದರೆ ಸಿನಿಮಾದ ಬಗ್ಗೆ ಅನೇಕರು ಪಾಸಿಟಿವ್ ಆಗಿ ಮಾತನಾಡಿದ್ದರು.
ಬಂಗಾರದ ನಾಣ್ಯಕ್ಕಾಗಿ ಜೀವ ಪಣಕ್ಕಿಟ್ಟು ಸಾಹಸಕ್ಕೆ ಹೊರಡುವ ಹಾರಾರ್ – ಥ್ರಿಲ್ಲರ್ ‘ತುಂಬಾಡ್ʼ ಸಿನಿಮಾದ ತಯಾರಿಗೆ 6 ವರ್ಷ ಬೇಕಾಗಿತ್ತು. ಮಹಾರಾಷ್ಟ್ರದ ಹೊರವಲಯದಲ್ಲಿ ಚಿತ್ರೀಕರಣಗೊಂಡ ಸಿನಿಮಾ ನೈಜ ಘಟನೆಯಂತೆ ಮೂಡಿಬಂದಿದೆ.
ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಾಕಿದ ಹಣವನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಆ ವರ್ಷ ಆಸ್ಕರ್ ಗಾಗಿ ಭಾರತದಿಂದ ‘ತುಂಬಾಡ್ʼ ಸಿನಿಮಾವನ್ನು ಕಳುಹಿಸಬೇಕೆನ್ನುವ ಕೂಗು ಕೇಳಿ ಬಂದಿತ್ತು.
ತನ್ನ ಕಥೆ ಹಾಗೂ ಭೀತಿ ಹುಟ್ಟಿಸುವ ದೃಶ್ಯಗಳು ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ನೈಜ ಅನುಭವವನ್ನು ನೀಡಿತು. ಬಹು ಜನರ ಅಪೇಕ್ಷೆಯ ಮೇರೆಗೆ ಸಿನಿಮಾವನ್ನು ಸೆ.13(ಶುಕ್ರವಾರ) ರೀ- ರಿಲೀಸ್ ಮಾಡಲಾಗಿದೆ. ಮೊದಲ ದಿನವೇ ಸಿನಿಮಾ 2 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.
ಈ ಬೆನ್ನಲ್ಲೇ ಸಿನಿಮಾದ ಸೀಕ್ವೆಲ್ ಅನೌನ್ಸ್ ಮಾಡಲಾಗಿದೆ. ಶೋಹುಂ ಶಾ(Sohum Shah) ನಟಿಸಿ ನಿರ್ಮಿಸಿದ್ದ ‘ತುಂಬಾಡ್ʼ -2 (Tumbbad 2)ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.
ರಾಹಿ ಅನಿಲ್ ಬರವೆ ಸಿನಿಮಾವನ್ನು ನಿರ್ದೇಶಕ ಮಾಡಿದ್ದರು. ಎರಡನೇ ಭಾಗವನ್ನು ಅವರೇ ನಿರ್ದೇಶನ ಮಾಡಲಿದ್ದಾರೆ.
ವಿನಾಯಕ್ ಅವರ ಪುತ್ರ ಪಾಂಡುರಂಗ ರಾವ್ ಅಳುತ್ತಿರುವ ದೃಶ್ಯವನ್ನು ತೋರಿಸಲಾಗಿದ್ದು, ಹಿನ್ನೆಲೆ ಧ್ವನಿಯಲ್ಲಿ ಪ್ರಳಯ್ ಆಯೇಗಾ.. ಎಂದು ಸೀಕ್ವೆಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶೀಘ್ರದಲ್ಲಿ ಸಿನಿಮಾ ಬರಲಿದೆ ಎಂದು ಬರೆಯಲಾಗಿದೆ.
2021ರಲ್ಲೇ ಶೋಹುಂ ಶಾ ‘ತುಂಬಾಡ್ʼ -2 ಬಗ್ಗೆ ಮಾತನಾಡಿದ್ದರು. ಸೀಕ್ವೆಲ್ ಅಥವಾ ಪ್ರೀಕ್ವೆಲ್ ಬರುವುದು ಪಕ್ಕಾ ಎಂದು ಹೇಳಿದ್ದರು.
ಶೋಹುಂ ಶಾ ,ಜ್ಯೋತಿ ಮಲ್ಶೆ,ಧುಂಡಿರಾಜ್ ಪ್ರಭಾಕರ್,ರೋಂಜಿನಿ ಚಕ್ರವರ್ತಿ, ರುದ್ರ ಸೋನಿ ‘ತುಂಬಾಡ್ʼನಲ್ಲಿ ನಟಿಸಿದ್ದರು.