Advertisement

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ : ನಾಲ್ವರ ದುರ್ಮರಣ

07:54 PM Oct 17, 2021 | Team Udayavani |

ತುಮಕೂರು: ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಮುಖಾಮುಖೀ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿ ನಾಲ್ವರು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಗರದ ಹೊರವಲಯದ ಸಿದ್ದಾರ್ಥ ನಗರದ ಬಳಿ ಭಾನುವಾರ ಮುಂಜಾನೆ ನಡೆದಿದೆ.

Advertisement

ಮೃತಪಟ್ಟವರನ್ನು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹೂ ಮಾರುವ ಕವಿತಾ (39), ದರ್ಶನ್‌ (22) ಹಾಗೂ ತುರುವೇಕೆರೆ ಪಟ್ಟಣ ವಾಸಿಗಳಾದ ಕೃಷ್ಣಮೂರ್ತಿ (25) ಹಾಗೂ ದಿವಾಕರ್‌ (25) ಎಂದು ಗುರುತಿಸಲಾಗಿದೆ.

ದರ್ಶನ್‌ ಕ್ಯಾಬ್‌ ವಾಹನದ ಚಾಲಕನಾಗಿದ್ದು, ಈತ ಚಿಕ್ಕನಾಯಕನಹಳ್ಳಿಯಿಂದ ತುಮಕೂರಿನ ಮಾರುಕಟ್ಟೆಗೆ ಪ್ರತಿನಿತ್ಯ ಹೂ, ತರಕಾರಿ ಕೊಂಡು ಮತ್ತೆ ಊರಿಗೆ ತೆರಳುತ್ತಿದ್ದ. ತುರುವೇಕೆರೆ ಮೂಲದವರಾದ ಕೃಷ್ಣಮೂರ್ತಿ ಪ್ರತಿನಿತ್ಯ ತುಮಕೂರಿನ ಮಾರುಕಟ್ಟೆಗೆ ಬಂದು ಹೂವು ಖರೀದಿಸಿ ತುರುವೇಕೆರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಭಾನುವಾರ ತುರುವೇಕೆರೆ ಮೂಲದ ಇಬ್ಬರಿಗೆ ಬಸ್‌ ಸಿಗದೆ ತಡವಾಗಿದೆ. ಹಾಗಾಗಿ ದರ್ಶನ್‌ಗೆ ದೂರವಾಣಿ ಕರೆ ಮಾಡಿ ತಾವೂ ವಾಹನದಲ್ಲೇ ಬರುವುದಾಗಿ ತಿಳಿಸಿದ್ದಾರೆ. ಮಾರುಕಟ್ಟೆಯಿಂದ ದರ್ಶನ್‌ನ ವಾಹನದಲ್ಲಿ ಹೂವು, ತರಕಾರಿ ತುಂಬಿಕೊಂಡು ಊರಿನತ್ತ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 206ರ ಸಿದ್ದಾರ್ಥ ನಗರದ ಬಳಿ ಶಿವಮೊಗ್ಗ ಕಡೆಯಿಂದ ಬೆಂಗಳೂರಿನತ್ತ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್‌ ಮುಖಾಮುಖೀಯಾಗಿ ಡಿಕ್ಕಿ ಹೊಡೆದಿದ್ದರಿಂದ ಕ್ಯಾಬ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ. ಬಸ್‌ ಚಾಲಕ ಸೇರಿ ಇಬ್ಬರಿಗೆ ಪೆಟ್ಟಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 326 ಹೊಸ ಪ್ರಕರಣ ಪತ್ತೆ | 380 ಸೋಂಕಿತರು ಗುಣಮುಖ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next