Advertisement
ರವೀಂದ್ರ ಕಲಾ ಕ್ಷೇತ್ರದಲ್ಲಿ ಬೆಂಗಳೂರಿನ ತುಳುವೆರೆ ಚಾವಡಿ ಸಂಘಟನೆಯ 25ನೇ ವರ್ಷದ ಬೆಳ್ಳಿ ಹಬ್ಬ (ಬೊಳ್ಳಿ ಪರ್ಬ) ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಮಕ್ಕಳ ಪದ ಸಾಹಿತ್ಯ ಕೃತಿ “ಜೋಕುಲೆ ಉಜ್ಜಾಲ್’ ಪುಸ್ತಕ ಬಿಡುಗಡೆ ಮಾಡಲಾಯಿತು. ಕೆ. ಇ. ರಾಧಾಕೃಷ್ಣ ಬರೆದಿರುವ ‘ಸತ್ಯಪ್ಪೆ ಬಾಲೆಲು’ ತುಳು ಕತೆಯ ಆಡಿಯೋ ಬಿಡುಗಡೆ ಮಾಡಲಾಯಿತು.
ಖ್ಯಾತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು, ಹಿರಿಯ ತುಳು ಸಾಹಿತಿ ಕುಶಲಾಕ್ಷಿ ವಿ. ಕಣ್ವತೀರ್ಥ, ಸ್ಫೂರ್ತಿ ಭಿನ್ನ ಸಾಮರ್ಥ್ಯದ ಶಾಲೆಯ ಪ್ರಕಾಶ್ ಜೆ ಶೆಟ್ಟಿಗಾರ್ ಇವರಿಗೆ ತುಳುನಾಡª ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಸಾಹಿತಿ ಡಿ.ಕೆ.ಚೌಟ ಸ್ಮರರ್ಣಾಥ ತುಳು ಸಾಹಿತಿ ಉಗ್ರಪ್ಪ ಪೂಜಾರಿಯವರಿಗೆ ಮತ್ತು ತುಳು ಪರ ಹೋರಾಟಗಾರ ಡಾ| ಉದಯ ಧರ್ಮಸ್ಥಳ ಸ್ಮರರ್ಣಾಥವಾಗಿ ತುಳು ಸೇವೆಗಾಗಿ ಯುವ ಪ್ರತಿಭೆ ಸತೀಶ್ ಗೆ ಪ್ರಶಸ್ತಿ ನೀಡಲಾಯಿತು. ವಿಶೇಷ ಚೇತನರಾದ ಉಲ್ಲಾಸ್ ಯು. ನಾಯಕ್, ಲಿಖಿತ ಮತ್ತು ಶ್ರಾವ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಿಕ್ಷಣ ತಜ್ಞ ಪ್ರೊ| ಕೆ.ಇ.ರಾಧಾಕೃಷ್ಣ, ತುಳುವೆರೆ ಚಾವಡಿ ಸಂಘದ ಅಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಉಮೇಶ್ ಪೂಂಜ, ವಸಂತ್ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು.
ಮಂಗಳೂರಿನ ತಂಡರ್ ಕಿಡ್ಸ್ ತಂಡದಿಂದ ಪದರಂಗಿತ, ವಂದನಾ ರೈ ಕಾರ್ಕಳ ಇವರಿಂದ ಪದ ನೃತ್ಯರೂಪಕ ಜರಗಿತು.