Advertisement

ತುಳುಕೂಟ ಐರೋಲಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ 

02:22 PM Feb 18, 2018 | |

ನವಿ ಮುಂಬಯಿ: ಮಹಿಳೆಯರು ಕೌಟುಂಬಿಕವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅರಸಿನ ಕುಂಕುಮದಂತಹ ಆಚರಣೆ ಮಹಿಳೆಯರಲ್ಲಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಅರಸಿನ ಕುಂಕುಮವು ಆರೋಗ್ಯ ಭಾಗ್ಯ ದೊಂದಿಗೆ ಮಹಿಳೆಯರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತುಳುಕೂಟ ಐರೋಲಿಯ ಕಳೆದ ಹಲವು ವರ್ಷಗಳಿಂದ ಅರಸಿನ ಕುಂಕುಮದಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಗಮನ ಸೆಳೆಯುತ್ತಿದೆ. ಸಂಸ್ಥೆಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಇವರ ನೇತೃತ್ವದಲ್ಲಿ ಸಂಸ್ಥೆಯು ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದು ಅಭಿನಂದನೀಯವಾಗಿ ಎಂದು ನಗರ ಸೇವಕಿ ವಿನಯಾ ಮಡ್ವಿ 
ನುಡಿದರು.

Advertisement

ತುಳುಕೂಟ ಐರೋಲಿ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ಐರೋಲಿಯ ಹೆಗ್ಗಡೆ ಭವನದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಇವರು, ಮಹಿಳೆಯರು ಸಮಾಜ ಸೇವೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ತಮ್ಮ ಪ್ರತಿಭೆಯನ್ನು ಪ್ರಚುರಪಡಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಮಹಿಳೆಯರು ನೋಡಿಕೊಳ್ಳಬೇಕು. ಸಂಸ್ಥೆಯ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.

ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ ಇವರು ಮಾತನಾಡಿ, ಅರಸಿನ ಕುಂಕುಮ ಆಚರಣೆಯ ನಮ್ಮ ಸಂಪ್ರದಾಯವಾಗದಿದ್ದರೂ ಕೂಡ ನಾವು ಅದನ್ನು ನಮ್ಮ ಆಚರಣೆಯಾಗಿ ಅನುಸರಿಸುತ್ತಿವುದು ತುಳುವರ ಔದಾರ್ಯ ವಾಗಿದೆ. ಮಹಿಳೆಯರು ಒಗ್ಗಟ್ಟಿನಿಂದ ಇದ್ದರೆ ಏನನ್ನೂ ಸಾಧಿಸಲು ಸಾಧ್ಯವಾಗುತ್ತದೆ ಎಂಬುವುದಕ್ಕೆ ಇಂದಿನ ಅರಸಿನ ಕುಂಕುಮ ಕಾರ್ಯಕ್ರಮ ಸಾಕ್ಷಿಯಾಗಿದೆ. ತುಳುಕೂಟ ಸಂಸ್ಥೆಯೊಂದಿಗೆ ಕಳೆದೆರಡು ವರ್ಷಗಳಿಂದ ನನ್ನಿಂದಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದೇನೆ ಎಂದರು.

ಇನ್ನೂ ಮುಂದೆಯೂ ಸಂಸ್ಥೆಗೆ ನನ್ನ ಪ್ರೋತ್ಸಾಹ, ಸಹಕಾರ ಇದೆ ಎಂದರು. ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಮಹಿಳಾಧ್ಯಕ್ಷೆ ಆಶಾಲತಾ ಶೆಟ್ಟಿ ಇವರು ಮಾತನಾಡಿ, ತುಳು ಕೂಟದೊಂದಿಗೆ ಮೂಕಾಂಬಿಕಾ ದೇವಾಲಯದ ನಂಟು ಮಹತ್ತರದ್ದಾಗಿದೆ. ಮೂಕಾಂಬಿಕೆಯ ಆಶೀರ್ವಾದ ಈ ಸಂಸ್ಥೆಯ ಮೇಲೆ ಸದಾಯಿದೆ. ತುಳುಕೂಟದ ಪ್ರಗತಿಗೆ ನಮ್ಮೆಲ್ಲರ ಸಹಕಾರ ಸದಾಯಿದೆ ಎಂದರು.

ಶ್ರೀ ಶನೀಶ್ವರ ಮಂದಿರ ನೆರೂಲ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ವಿ. ಪೂಜಾರಿ ಮಾತನಾಡಿ ಶುಭಹಾರೈಸಿದರು. ತುಳುಕೂಟದ ಸದಸ್ಯೆ ಹಾಗೂ ಚಿಣ್ಣರ ಬಿಂಬ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮುಖ್ಯಸ್ಥೆ ಗೀತಾ ಹೇರಳ ಅವರು ಅರಸಿನ ಕುಂಕುಮದ ಮಹತ್ವವನ್ನು ವಿವರಿಸಿದರು.  ವೇದಿಕೆಯಲ್ಲಿ ಸುಭಾಷಿಣಿ ಸತೀಶ್‌ ಶೆಟ್ಟಿ, ಶರ್ಮಿಳಾ ನಾಗೇಶ್‌ ಶೆಟ್ಟಿ, ದಾಕ್ಷಾಯಣಿ ಗಂಗಾಧರ ಬಂಗೇರ, ಶೈಲಶ್ರೀ ಅಮರನಾಥ್‌ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.

Advertisement

ತುಳುಕೂಟದ ಸದಸ್ಯೆಯರು ಗಳಾದ ಲಲಿತಾ ಪಿ. ಕೋಟ್ಯಾನ್‌ ಅತಿಥಿಗಳನ್ನು ಪರಿಚಯಿಸಿದರು. ಸುಭಾಷಿಣಿ ಎಚ್‌. ಶೆಟ್ಟಿ ಸ್ವಾಗತಿಸಿದರು. ಮೋಹಿನಿ ಆರ್‌. ಶೆಟ್ಟಿ ವಂದಿಸಿದರು. ಅಶ್ವಿ‌ನಿ ಗೌಡ, ಲಾವಣ್ಯ ರಾವ್‌ ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಷ್ಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು.  ಗೀತಾ ಎಚ್‌. ಪೂಜಾರಿ, ಗಿರಿಜಾ ಪೂಜಾರಿ, ಸಂಗೀತಾ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next