Advertisement

ಮೋಕೆದ ಸಿಂಗಾರಿ ಖ್ಯಾತಿಯ ಸೀತಾರಾಮ್ ಕುಲಾಲ್ ಇನ್ನಿಲ್ಲ

09:35 AM Jul 29, 2019 | keerthan |

ಮಂಗಳೂರು: ಮೋಕೆದ ಸಿಂಗಾರಿ….ಪಕ್ಕಿಲು ಮೂಜಿ.. ಹೀಗೆ ತುಳು ಭಾಷೆಯ ಎವರ್ ಗ್ರೀನ್ ಹಾಡುಗಳ ರಚನೆಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಸೀತಾರಾಮ್ ಕುಲಾಲ್ (78) ರವಿವಾರ ನಿಧನರಾದರು.

Advertisement

ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಸೀತಾರಾಮ್‌ ಕುಲಾಲ್‌ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕುಲಾಲ್‌ ಅವರು ರಚಿಸಿರುವ ಮೋಕೆದ ಸಿಂಗಾರಿ,  ಪಕ್ಕಿಲು ಮೂಜಿ ಒಂಜೇ ಗೂಡ್‌ ಡ್‌, ಬ್ರಹ್ಮನ ಬರವು ಮಾಜಂದೆ ಪೋಂಡಾ, ಡಿಂಗಿರಿ ಮಾಮ ಡಿಂಗಿರಿ ಮಾಮ, ಪರಶುರಾಮನ ಕುಡರಿಗ್‌ ಪುಟಿನ ತುಳುನಾಡ್‌, ಅಪ್ಪೆ ಮನಸ್‌ ಬಂಗಾರ ಮುಂತಾದ ಹಾಡುಗಳು ತುಳು ಚಿತ್ರರಂಗದ ಎವರ್‌ ಗ್ರೀನ್‌ ಹಾಡುಗಳು ಎಂದೆನಿಸಿಕೊಂಡಿವೆ.

ʼಪಗೆತ ಪುಗೆʼ, ʼಉಡಲ್ದ ತುಡರ್‌ʼ, ʼಕಾಸ್‌ ದಾಲ್‌ ಕಂಡನಿʼ ಮುಂತಾದ ಚಿತ್ರಗಳಿಗೆ ಸಾಹಿತ್ಯ ಬರೆದಿದ್ದ ಸೀತಾರಾಮ ಕುಲಾಲರು ʼಮಣ್ಣ್ ದ ಮಗಲ್‌ ಅಬ್ಬಕ್ಕʼ ಮತ್ತು ʼ ಧರ್ಮೊಗು ಧರ್ಮದ ಸವಾಲ್‌ʼ ಕೃತಿಗಳನ್ನು ರಚಿಸಿದ್ದರು.

ರಂಗಕಲಾ ಭೂಷಣʼ, ತುಳು ರತ್ನ, ಪೆರ್ಮೆದ ತುಳುವೆ, ತುಳು ಸಿರಿ, ತುಳು ಸಾಹಿತ್ಯ ರತ್ನಾಕರ, ತೌಳವ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದ ಕುಲಾಲರು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next