Advertisement

ತುಳುನಾಡಿನಲ್ಲಿ ತುಳು ಫಲಕ ಅಭಿಯಾನ ಆರಂಭವಾಗಲಿ: ದಯಾನಂದ ಕತ್ತಲ್‌ಸಾರ್‌

06:19 PM Aug 19, 2020 | sudhir |

ಬಜಪೆ: ಇಲ್ಲಿನ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆ ಬದಿಯ ಫಲಕ, ಬಸ್‌ ನಿಲ್ದಾಣ, ಮಾರುಕಟ್ಟೆ, ಸಾರ್ವಜನಿಕ ವಲಯದ ಫಲಕಗಳು ಕನ್ನಡದ ಕೆಳಗೆ ತುಳು ಭಾಷೆಯಲ್ಲಿ ಬರೆಯುವ ಮೂಲಕ ತುಳು ಅಭಿಮಾನದ ಜತೆಗೆ ತುಳು ಅಭಿಯಾನವನ್ನು ಅರಂಭಿಸಲು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಅವರು ಬಜಪೆ ಗ್ರಾ.ಪಂ.ಗೆ ಭೇಟಿ ನೀಡಿ, ಪಿಡಿಒ ಸಾಯೀಶ್‌ ಚೌಟ್‌ ಅವರೊಂದಿಗೆ ಸಮಾಲೋಚಿಸಿದರು.

Advertisement

ಈ ಸಂದರ್ಭ ದಯಾನಂದ ಕತ್ತಲ್‌ಸಾರ್‌ ಮಾತನಾಡಿ, ತುಳು ಭಾಷೆಗೆ ಸ್ವಂತ ಲಿಪಿಯಿದೆ. ತುಳುನಾಡಿನ ಮಠಾಧೀಶರುಗಳು ಸಹಿ ತುಳುವಿನಲ್ಲಿದೆ. ತುಳುವಿನ ಬಗ್ಗೆ ಹಲವಾರು ಮಂದಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಯ ರಸ್ತೆ, ಬೀದಿಗಳ ನಾಮಫಲಕ, ಸಂಸ್ಥೆಗಳ ಹೆಸರುಗಳು ಆಂಗ್ಲ, ಕನ್ನಡ ಜತೆಗೆ ತುಳು ಭಾಷೆಯಲ್ಲಿರಬೇಕಿದೆ. ತುಳು ಅಭಿಮಾನವನ್ನು ಬೆಳಸಲು ಬಜಪೆ ಗ್ರಾ.ಪಂ.ನಿಂದ ತುಳು ಅಭಿಯಾನ ಆರಂಭವಾಗಲಿ. ಯುವ ತುಳುನಾಡ್‌ ಮತ್ತು ಜೈ ತುಳುನಾಡ್‌ನ‌ ಸದಸ್ಯರು ಫಲಕವನ್ನು ತುಳು ಲಿಪಿಯಲ್ಲಿ ಬರೆಯಲು ಸಿದ್ಧರಿದ್ದಾರೆ. ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತುಳು ಲಿಪಿಯಲ್ಲಿ ಫಲಕವನ್ನು ಬರೆಯುವ ಮೂಲಕ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗುವುದು ಎಂದರು.

ದಯಾನಂದ ಕತ್ತಲ್‌ಸಾರ್‌ ಅವರನ್ನು ಬಜಪೆ ಗ್ರಾ.ಪಂ.ವತಿಯಿಂದ ಪಿಡಿಒ ಸಾಯೀಶ್‌ ಚೌಟ ಅಭಿನಂದಿಸಿದರು. ಉದ್ಯಮಿ ಕೃಷ್ಣ ಕಲ್ಲೋಡಿ, ವಕೀಲ ವಿನೋಧರ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next