Advertisement

‘ತುಳು ಅಭಿವೃದ್ಧಿ  ಪ್ರಾಧಿಕಾರ ಸ್ಥಾಪನೆ ತುಳುನಾಡೋಚ್ಚಯದ ಧ್ಯೇಯವಾಗಲಿ’

11:44 AM Oct 20, 2017 | |

ಮಹಾನಗರ: ಪಿಲಿಕುಳದ ತುಳು ಸಂಸ್ಕೃತಿ ಗ್ರಾಮದಲ್ಲಿ ಡಿ. 23,24 ರಂದು ನಡೆಯುವ ತುಳುನಾಡೋಚ್ಚಯ-2017ರ ವಿವಿಧ ಸಮಿತಿಗಳ ಸಂಚಾಲಕರ ಆಯ್ಕೆ ಸಭೆಯು ತುಳುನಾಡ ರಕ್ಷಣ ವೇದಿಕೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಮಾತನಾಡಿ, ತುಳುನಾಡಿಗೆ, ತುಳು ಭಾಷೆಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಬೇಕೆಂದೂ, ಕರ್ನಾಟಕದಲ್ಲಿ ತುಳು ಭಾಷೆಗೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸಬೇಕೆಂದೂ, ಈ ನಿಟ್ಟಿನಲ್ಲಿ ತುಳುನಾಡೋಚ್ಚಯದ ಧ್ಯೇಯೋದ್ದೇಶವಿರಬೇಕು ಎಂದರು.

ಪ್ರಧಾನ ಸಂಚಾಲಕ ಮತ್ತು ತುಳುನಾಡ ರಕ್ಷಣ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್‌ ಶೆಟ್ಟಿ ಜಪ್ಪು ಮಾತನಾಡಿ, ಇದು ತುಳುನಾಡಿನ ಸಮಸ್ತ ಜಾತಿ, ಮತ, ಭಾಷೆಯವರ ಸಮ್ಮೇಳನವಾಗಬೇಕು ಹಾಗೂ ಈ ನಾಡಿನ ಸೌಹಾರ್ದದ ಪ್ರತೀಕವಾಗಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಶಮೀನಾ ಆಳ್ವ ಮೂಲ್ಕಿ ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಪ್ರಸ್ತಾವಿಸಿದರು. ಆನಂದ ಅಮೀನ್‌ ಅಡ್ಯಾರ್‌, ದಿನೇಶ್‌ ಕಾಮತ್‌ ಬೆಂಗಳೂರು, ಅಬ್ದುಲ್‌ ರಶೀದ್‌, ಪ್ರಶಾಂತ್‌ ಭಟ್‌ ಕಡಬ, ಜಿ.ವಿ.ಎಸ್‌.ಉಳ್ಳಾಲ್‌, ಸಿರಾಜ್‌ ಅಡ್ಕರೆ, ನಿಶಾದ್‌ ಎಮ್ಮೆಕೆರೆ, ಶ್ರೀಕಾಂತ್‌ ಸಾಲ್ಯಾನ್‌ ಕುದ್ರೋಳಿ ಬೆಂಗ್ರೆ, ಭೂಷಣ್‌ ಕುಲಾಲ್‌, ಆರ್‌.ಕೆ. ಗಂಗಾಧರ ಅತ್ತಾವರ್‌, ಹರೀಶ್‌ ಕುಮಾರ್‌ ಶೆಟ್ಟಿ, ಶೈಝ್, ರಕ್ಷಿತ್‌ ಕೆ., ಪಿ.ನೇಮು ಕೊಟ್ಟಾರಿ, ಕಡಬ ದಿನೇಶ್‌ ರೈ, ಶಿವ್‌ ಶೆಟ್ಟಿ, ಪ್ರಜ್ವಲ್‌ ಆಳ್ವ, ಮೋಹನ್‌ ದಾಸ್‌ ರೈ, ಭಾರತಿ ಬಿ. ರೈ, ಗೀತಾ ಜೆ. ಹೆಗ್ಡೆ, ಜ್ಯೋತಿ ಜೈನ್‌, ರೇಶ್ಮಾ ಎಸ್‌. ಉಳ್ಳಾಲ್‌, ಕಾಂತಿ ಶೆಟ್ಟಿ ಮೊದಲಾದವರನ್ನು ವಿವಿಧ ಸಮಿತಿಗಳ ಸಂಚಾಲಕರನ್ನಾಗಿ ಆಯ್ಕೆಮಾಡಲಾಯಿತು.

ಸಮಿತಿಯ ಕಾರ್ಯಾಲಯವು ಮಾರ್ನಮಿಕಟ್ಟೆಯಲ್ಲಿ ನ.1ರಂದು ಸಂಜೆ 4.20ಕ್ಕೆ ಉದ್ಘಾಟನೆಗೊಳ್ಳಲಿದೆ. ಡಾ| ರಾಜೇಶ್‌ ಆಳ್ವ ಸ್ವಾಗತಿಸಿ, ಭಾಸ್ಕರ ಕುಂಬ್ಳೆ ವಂದಿಸಿದರು. ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next