Advertisement

ತುಳುನಾಡಿನಲ್ಲಿ ತುಳುಭಾಷೆ ಬೆಳಯಬೇಕು: ಉಮಾನಾಥ ಕೋಟ್ಯಾನ್‌

10:22 AM Aug 22, 2020 | sudhir |

ಬಜಪೆ: ಇಲ್ಲಿನ ಶ್ರೀ ವಿಜಯ ವಿಠ್ಠಲ ಭಜನ ಮಂದಿರದ ಬಳಿಯ ಬಸ್‌ ತಂಗುದಾಣಕ್ಕೆ ಕನ್ನಡದ ಜತೆ ತುಳು ಲಿಪಿಯಲ್ಲಿ ಫಲಕವನ್ನು ಬರೆಯಲಾಗಿದೆ. ತುಳುನಾಡಿನಲ್ಲಿ ಪ್ರತಿಯೊಬ್ಬರ ಭಾಷೆ ತುಳು. ತುಳು ಭಾಷೆ ಬೆಳೆಯಬೇಕು. ಬಜಪೆಯಲ್ಲಿ ಪ್ರಥಮವಾಗಿ ಬಸ್‌ ತಂಗುದಾಣದ ಫಲಕವನ್ನು ತುಳುಲಿಪಿಯಲ್ಲಿ ಬರೆಯಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

Advertisement

ತಾ.ಪಂ. 1.5 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾದ ಈ ಬಸ್‌ ತಂಗುದಾಣವನ್ನು ತಾಲೂಕು ಪಂಚಾಯತ್‌ ಸದಸ್ಯೆ ಉಷಾ ಸುವರ್ಣ ಉದ್ಘಾಟಿಸಿದರು.

ಜಿ.ಪಂ. ಸದಸ್ಯೆ ವಸಂತಿ ಕಿಶೋರ್‌, ಜಿ.ಪಂ. ಮಾಜಿ ಉಪಾಧ್ಯಕ್ಷ ರಿತೇಶ್‌ ಶೆಟ್ಟಿ , ಬಜಪೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ರೋಝಿ ಮಥಾಯಸ್‌, ಉಪಾಧ್ಯಕ್ಷ ಮಹಮ್ಮದ್‌ ಶರೀಫ್‌, ಗ್ರಾ.ಪಂ. ಮಾಜಿ ಸದಸ್ಯರು, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸುಧಾಕರ ಕಾಮತ್‌, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಸುವರ್ಣ, ಉದ್ಯಮಿಗಳಾದ ವರಪ್ರಸಾದ ಶೆಟ್ಟಿ , ಪ್ರಕಾಶ್‌ ಸಿಮ್ಸ್‌ನ್‌,ಕೃಷ್ಣ ಕಲ್ಲೋಡಿ, ತಾ.ಪಂ. ಮಾಜಿ ಸದಸ್ಯ ಜೋಕಿಂ ಡಿ’ಕೋಸ್ತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next