ಮಂಜೇಶ್ವರ: ಹೊಸಂಗಡಿ ಸಮೀಪದ ದುರ್ಗಿಪಳ್ಳದಲ್ಲಿ ತುಳು ಅಕಾಡೆಮಿಯ ನೂತನ ತುಳು ಭವನ ನಿರ್ಮಾಣಕ್ಕೆ ಕಳೆದ ಬುಧವಾರ ರಾಜ್ಯ ವಿಧಾನ ಸಭಾ ನಾಯಕ ರಾಮಕೃಷ್ಣನ್ ಶಿಲಾನ್ಯಾಸ ನೆರವೇರಿಸಿದ್ದರು.
ನೀಲ ನಕಾಶೆ ಬ್ಯಾನರ್ಗೆ ಹಾನಿ
ತುಳು ಅಕಾಡೆಮಿಯ ತುಳು ಭವನಕ್ಕಾಗಿ ಕಡಂಬಾರ್ ಗ್ರಾಮದ ದುರ್ಗಿಪಳ್ಳದಲ್ಲಿ ಒಂದು ಎಕರೆ ಸ್ಥಳವನ್ನು ಸರಕಾರ ಮಂಜೂರು ಮಾಡಿತ್ತು. ಆದರೆ ರವಿವಾರ ರಾತ್ರಿ ತುಳು ಭವನ ನಿರ್ಮಾಣ ಪರಿಸರದಲ್ಲಿ ಸ್ಥಾಪಿಸಲಾಗಿದ್ದ ತುಳು ಭವನದ ನೀಲನಕಾಶೆಯ ಬ್ಯಾನರ್ನ್ನು ಸಮಾಜದ್ರೋಹಿಗಳು ಹರಿದು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಬಟ್ಟೆಯಲ್ಲಿ ತಯಾರಿಸಿದ ಬ್ಯಾನರ್ ಕೂಡ ಹರಿದು ಹಾಕಲಾಗಿದೆ. ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ಒಂದು ಚೂರಿ ಪತ್ತೆಯಾಗಿದ್ದು ಅಪರಾಧಿಗಳನ್ನು ಪತ್ತೆಯಾಗಿದೆ. ಇದಲ್ಲದೆ ಸ್ಥಳದಲ್ಲಿ ಕೆಲವು ಕಿಡಿಗೇಡಿಗಳು ಮಾಲಿನ್ಯಗಳನ್ನು ಕೂಡ ನಿಕ್ಷೇಪಿಸುತ್ತಿದ್ದಾರೆ. ಸಮಾಜ ದ್ರೋಹಿಗಳನ್ನು ಮಟ್ಟ ಹಾಕಲು ಪೊಲೀಸರು ತಯಾರಾಗಬೇಕೆಂದು ಅಕಾಡೆಮಿ ಕಾರ್ಯದರ್ಶಿಗಳು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.