Advertisement
ಅರಿಶಿನಕುಂಟೆಯಿಂದ ವೀರಾಪುರ ಮಾರ್ಗಕ್ಕೆ ಹೋಗುವ ವೃತ್ತದ ಎಡಬದಿಯಲ್ಲಿರುವ ಇಂಥ ಬಾವಿ ಇದ್ದು, ಸಂಬಂಧಿಸಿದವರು ಇತ್ತ ಕಡೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸುಮಾರು ವರ್ಷಗಳ ಹಿಂದೆ ಈ ಕೊಳವೆ ಬಾವಿ ಕೊರೆಸಿದ್ದು ಈವರೆಗೂ ಅದಕ್ಕೆ ಸೂಕ್ತ ಮುಚ್ಚಳಿಕೆ ಅಳವಡಿಸಿದೇ ಬೇಜವಾಬ್ದಾರಿತನ ತೋರಿದ್ದಾರೆ.
ಪೈಪ್ ಬಾಯೆ¤ರೆದು ನಿಂತಿದೆ. ಇದೇ ರಸ್ತೆಯಲ್ಲಿ ಶಾಲೆಯಿದ್ದು ಪ್ರತಿ ನಿತ್ಯ ವಿದ್ಯಾರ್ಥಿಗಳು ಕೊಳವೆ ಬಾವಿ ಪಕ್ಕದಲ್ಲೇ ಹಾದುಹೋಗುತ್ತಾರೆ. ಆಕಸ್ಮಾತ್ ಚಿಕ್ಕಮಕ್ಕಳು ಬಗ್ಗಿ ನೋಡಲು ಹೋಗಿ ಏನಾದರೂ ಅನಾಹುತ ಸಂಭವಿಸಿದ್ರೆ ಯಾರು ಹೊಣೆ ಎಂಬ ಪ್ರಶ್ನೆ ತಲೆದೂರಿದೆ. ತೆರವುಗೊಳಿಸಿ: ರಸ್ತೆಯ ಬದಿಯಲ್ಲೇ ಬಾಯ್ತೆರೆದಿರುವ ಕೊಳವೆ ಬಾವಿ ಕೇಸಿಂಗ್ ಪೈಪ್‌ಗೆ ಸಂಬಂಧ ಪಟ್ಟವರು ಮುಚ್ಚಳ ಹಾಕುವುದನ್ನು
ಮರೆತಿದ್ದಾರೆ. ಗ್ರಾಪಂ ಈ ಕೇಸಿಂಗ್ ಪೈಪ್ ಮುಚ್ಚುವ ಕೆಲಸಕ್ಕೂ ಮುಂದಾಗಿಲ್ಲ. ರಾತ್ರಿ ವೇಳೆ ಪಾದಾಚಾರಿಗಳು ಎಡವಿಬಿದ್ದಿರುವ ನಿದರ್ಶನ ಗಳು ಇವೆ. ಇಂತಹ ಪರಿಸ್ಥಿತಿ ಇರುವ ಈ ಕೇಸಿಂಗ್ ಪೈಪ ಮುಚ್ಚುವ ಗೋಜಿಗೆ ಮುಂದಾಗದಿರುವುದು ಜನರ ಅತಂಕಕ್ಕೆ ಕಾರಣವಾಗಿದೆ.
Related Articles
Advertisement
ಅವಘಡ: ಈಗಾಗಲೇ ರಾಜ್ಯದಲ್ಲಿ ಹಲವಾರು ಕಡೆ ಇಂತಹ ಅನೇಕ ಕೊರೆಸಿದ ಕೊಳವೆ ಬಾವಿಗಳಲ್ಲಿ ಬಿದ್ದು ಅದೆಷ್ಟೋ ಮಕ್ಕಳು ಪ್ರಾಣ ತೆತ್ತಿದ್ದಾರೆ. ಇದಕ್ಕಾಗಿ ಸರ್ಕಾರ ಕೂಡ ಕೋಟಿ ಗಟ್ಟಲೆ ಹಣ ವ್ಯಯಿಸಿದರೂ ಮಕ್ಕಳನ್ನು ಬದುಕಿಸಿಕೊಳ್ಳಲಾಗಿಲ್ಲ. ಮಾದಿಗೊಂಡನಹಳ್ಳಿ ಗ್ರಾಪಂ ಅಧಿಕಾರಿಗಳು ಬಾಯ್ತೆರೆದಿರುವ ಕೊಳವೆ ಬಾವಿ ಕೇಸಿಂಗ್ ಪೈಪ್ ಮುಚ್ಚುವ ಮೂಲಕ ಮುಂದಾಗಬಹುದಾದ ಅನಾಹುತ ತಪ್ಪಿಸಬೇಕಿದೆ.
ಬಲಿಗೆ ಕಾದಿವೆ ತೆರೆದ ಕೊಳವೆ ಬಾವಿ:ಜಿಲ್ಲೆಯಾದ್ಯಂತ ಬಲಿ ಪಡೆಯಲೆಂದೇ ಅಲ್ಲಲ್ಲಿ ಕೊಳವೆ ಬಾವಿಗಳು ಬಾಯಿ ತೆರದು ಕುಳಿತಿವೆ. ಸರ್ಕಾರವೇ ಕೊರೆಸಿದ ಬೋರ ವೆಲ್‌ಗಳೇ
ಬಾಯ್ತೆರೆದು ಕುಳಿತಿವೆ ಎಂದರೆ ಇಲ್ಲಿನ ಆಡಳಿತ ಪರಿಸ್ಥಿತಿ ಹೇಗಿರಬೇಡ ? ಕೊಳವೆಬಾವಿಗೆ ಮಕ್ಕಳು ಬಿದ್ದು ಸುದ್ದಿಯಾದಾಗ ಜಿಲ್ಲಾಡಳಿತ ಸುತ್ತೂಲೆ ಹೊರಡಿಸಿ ಮೈಮರೆಯುತ್ತದೆ. ಅನೇಕ ಕೊಳವೆ ಬಾವಿ ಇಂದಿಗೂ ಮುಚ್ಚಿಲ್ಲ. ಜಿಲ್ಲಾಡಳಿತ, ಜಿ.ಪಂ ಸುತ್ತೂಲೆ ಹೊರಡಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸುತ್ತದೆ. ಇದರ ಪ್ರತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ ತಮ್ಮ ಕೆಲಸವಾಯಿತೆಂದು ಭಾವಿಸುತ್ತದೆ. ತೆರೆದ ಕೊಳವೆ ಬಾವಿ ಮುಚ್ಚಿಸುವಂತೆ ಸೂಚಿಸುವ ಕನಿಷ್ಠ ಪ್ರಯತ್ನ ಮಾಡುತ್ತಿಲ್ಲ ಅರಿಶಿನಕುಂಟೆ ಗ್ರಾಮದಲ್ಲಿ ವಿಫಲರಾಗಿರುವ ಕೊಳವೆ ಬಾಯಿಕೇ ಸಿಂಗ್ ಪೈಪ್ ಬಾಯ್ತರೆದಿದ್ದು ಅದನ್ನು ಮುಚ್ಚುವ ಗೋಜಿಗೆ ಗ್ರಾಪಂ ಮುಂದಾಗಿಲ್ಲ. ರಾತ್ರಿ ವೇಳೆಕತ್ತಲು ಅವರಿಸುತ್ತದೆ. ಅದೆಷ್ಟೋ ಮಂದಿ ಪಾದಚಾರಿಗಳು ಎಡವಿ ಬಿದ್ದಿರುವ ಘಟನೆ ನೆಡೆದಿದೆ. ಗ್ರಾಪಂ ಆಡಳಿತಕೂಡಲೇ ಬಾಯ್ತರೆದಕೊಳವೆ ಬಾವಿ ಮುಚ್ಚಬೇಕಿದೆ.
-ವೀರಭದ್ರಪ್ಪ, ಅರಿಶಿನಕುಂಟೆ ಗ್ರಾಮಸ್ಥ -ಕೆ.ಎಸ್.ಮಂಜುನಾಥ್, ಕುದೂರು