ತಿರುಪತಿ: ಸರ್ವ ದರ್ಶನ ಟೋಕನ್‌ಗಳ ವಿತರಣೆಯನ್ನು ನ.1ರಿಂದ ಪುನರಾರಂಭಿಸಲು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ನಿರ್ಧರಿಸಿದೆ.
ಈ ವರ್ಷ ಎ. 12ರಿಂದ ಸರ್ವದರ್ಶನ ಟೋಕನ್‌ಗಳ ವಿತರಣೆಯನ್ನು ಟಿಟಿಡಿ ನಿಲ್ಲಿಸಿತ್ತು. ಉಚಿತ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಇದನ್ನು ಪುನಾರಂಭಿಸಲು ಇತ್ತೀಚೆಗಿನ ಟಿಟಿಡಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ತಿರುಪತಿಯ ಭೂದೇವಿ ಕಾಂಪ್ಲೆಕ್ಸ್, ಶ್ರೀನಿವಾಸಂ ಮತ್ತು ರೈಲು ನಿಲ್ದಾಣದ ಹಿಂಭಾಗದ ಎರಡನೇ ಚೌಲಿóಯಲ್ಲಿ ಸರ್ವದರ್ಶನ ಟೋಕನ್ ವಿತರಿಸಲಾಗುತ್ತದೆ. ಶನಿವಾರ, ರವಿವಾರ, ಸೋಮವಾರ ಮತ್ತು ಬುಧವಾರಗಳಂದು 20,000ದಿಂದ 25,000 ಟೋಕನ್‌ಗಳನ್ನು ವಿತರಿಸಲಾಗುವುದು.
ಮಂಗಳವಾರ, ಗುರುವಾರ ಮತ್ತು ಶುಕ್ರವಾರ 15,000 ಟೋಕನ್ ವಿತರಿಸಲಾಗುವುದು ಎಂದು ಟಿಟಿಡಿ ಇಒ ಎ.ವಿ. ಧರ್ಮಾರೆಡ್ಡಿ ತಿಳಿಸಿದ್ದಾರೆ.
ಉಚಿತ ದರ್ಶನದ ಭಕ್ತರ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಐಪಿ ದರ್ಶನದ ಸಮಯವನ್ನು ಪ್ರಾಯೋಗಿಕವಾಗಿ ಡಿ.1ರಿಂದ ಬೆಳಗ್ಗೆ 8 ಗಂಟೆಗೆ ಆರಂಭಿಸಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.