Advertisement
ಶ್ರೀಜಾ ಅಕುಲಾ ಸ್ವೀಡನ್‌ನ ಕ್ರಿಸ್ಟಿನಾ ಕಾಲ್ಬರ್ಗ್ ವಿರುದ್ಧ 4-0 ಅಂತರದ ಗೆಲುವು ಸಾಧಿಸಿದರು (11-4, 11-9, 11-7, 11-8). ಮೊದಲ ಸೆಟ್‌ನಲ್ಲಿ ಶ್ರೀಜಾ ಸ್ವಲ್ಪ ಸಮಸ್ಯೆ ಎದುರಿಸಿದರು. ಆದರೂ ಇದನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ಮಣಿಕಾ ಬಾತ್ರಾ ಗ್ರೇಟ್ ಬ್ರಿಟನ್‌ನ 103ನೇ ರ್‍ಯಾಂಕಿಂಗ್ ಆಟಗಾರ್ತಿ ಅನ್ನಾ ಹರ್ಸಿ ವಿರುದ್ಧ 4-1ರಿಂದ ಗೆದ್ದು ಬಂದರು (11-8, 12-10, 11-9, 9-11, 11-5). ಆತಿಥೇಯ ಫ್ರಾನ್ಸ್‌ನ ಭಾರತೀಯ ಮೂಲದ ಆಟಗಾರ್ತಿ ಪ್ರತಿಕಾ ಪಾವಡೆ ವಿರುದ್ಧ ಮಣಿಕಾ ಮುಂದಿನ ಸುತ್ತಿನ ಪಂದ್ಯ ಆಡಲಿದ್ದಾರೆ.
42 ವರ್ಷದ, ಈ ಒಲಿಂಪಿಕ್ಸ್‌ನಲ್ಲಿ ಧ್ವಜಧಾರಿಯ ಗೌರವ ಸಂಪಾದಿಸಿದ್ದ ಅಚಂತ ಶರತ್ ಕಮಲ್ ತಮಗಿಂತ 86 ಸ್ಥಾನದಷ್ಟು ಕೆಳ ಕ್ರಮಾಂಕದ ಆಟಗಾರ, ಸ್ಲೊವೇನಿಯಾದ ಡೆನಿ ಕೊಝುಲ್ ವಿರುದ್ಧ 2-4 ಅಂತರದ ಸೋಲನುಭವಿಸಿದರು (12-10, 9-11, 6-11, 7-11, 11-8, 10-12). 53 ನಿಮಿಷಗಳಲ್ಲಿ ಶರತ್ ಶರಣಾಗತಿ ಸಾರಿದರು. ಇದರೊಂದಿಗೆ ಅಚಂತ ಶರತ್ ಕಮಲ್ ಅವರ ಒಲಿಂಪಿಕ್ಸ್ ಸಿಂಗಲ್ಸ್ ಅಭಿಯಾನ ದುರಂತದಲ್ಲಿ ಕೊನೆಗೊಂಡಿತು.