Advertisement

ಸುನಾಮಿ ಪತ್ರ: ಪಾಕ್‌ಗೆ ನಡುಕ 

06:25 AM Nov 07, 2017 | Team Udayavani |

ಹೊಸದಿಲ್ಲಿ: ಸದ್ಯದಲ್ಲೇ ಸುನಾಮಿ ಅಪ್ಪಳಿಸಲಿದೆ ಎಂದು ಕೇರಳದ ವ್ಯಕ್ತಿಯೊಬ್ಬ ಪ್ರಧಾನಿ ಮೋದಿಗೆ ಇತ್ತೀಚೆಗೆ ಬರೆದಿದ್ದ ಪತ್ರವೊಂದು ಪಾಕಿಸ್ಥಾನ ಸರಕಾರದ ನಿದ್ದೆಗೆಡಿಸಿದ ಕುತೂಹಲದ ಪ್ರಕರಣ ಜರುಗಿದೆ. 

Advertisement

ಕೇರಳದ ಬಿಕೆ ರಿಸರ್ಚ್‌ ಅಸೋಸಿಯೇಷನ್‌ನ ನಿರ್ದೇಶಕ ಎಂದು ಹೇಳಿಕೊಂಡ ಬಾಬು ಕಲಾಯಿಲ್‌ ಎಂಬ ವ್ಯಕ್ತಿಯೊಬ್ಬ ಸೆ.20ರಂದು ಮೋದಿಯವರಿಗೆ ಪತ್ರ ಬರೆದು, ಡಿ.31ರೊಳಗೆ ಹಿಂದೂ ಮಹಾಸಾಗರದಲ್ಲಿ ಮಹಾ ಭೂಕಂಪವೊಂದು ಸಂಭವಿಸಲಿದ್ದು, ಪರಿಣಾಮ ದೈತ್ಯ ಸುನಾಮಿ ಏಳಲಿದೆ. ಇದರ ದುಷ್ಪರಿಣಾಮ ಭಾರತ, ಪಾಕಿಸ್ಥಾನ, ಚೀನ ದೇಶಗಳ ಮೇಲೆ ಆಗಲಿದೆ. ಇದನ್ನು ತನ್ನಲ್ಲಿರುವ ಅತೀಂದ್ರಿಯ ಶಕ್ತಿಯಿಂದ ಆ.20ರಂದು ಕಂಡುಕೊಂಡಿದ್ದಾಗಿ ತಿಳಿಸಿದ್ದ. 

ಈ ಪತ್ರವನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಇದು, ಗಡಿ ದಾಟಿ ಪಾಕಿಸ್ಥಾನಕ್ಕೂ ಹೋಗಿ,ಅಲ್ಲಿನ ಸರಕಾರ ಗಕ್ಕನೆ ಎದ್ದು ಕುಳಿತುಕೊಳ್ಳುವಂತೆ ಮಾಡಿದೆ. ಈ ಬಗ್ಗೆ ಮೊದಲು ಎಚ್ಚೆತ್ತುಕೊಂಡ ಪಾಕಿಸ್ತಾನದ ಐಎಸ್‌ಐ, ಪ್ರಧಾನಿ ಕಾರ್ಯಾಲಯದ ಅಧೀನದಲ್ಲಿರುವ ಇಆರ್‌ಆರ್‌ಎನ ಉಪಾಧ್ಯಕ್ಷರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದರನ್ವಯ, ನ.1ರಂದು ಉಪಾಧ್ಯಕ್ಷರು ತಮ್ಮ ಅಧೀನ ಅಧಿಕಾರಿಗಳಿಗೆ ತುರ್ತು ಸಂದೇಶ ರವಾನಿಸಿ, ಮುನ್ನೆಚ್ಚರಿಕಾ ಕ್ರಮ ಜರಗಿಸಲು ಸೂಚಿಸಿದ್ದಾರೆ.

ತನ್ನ ಹಾಗೂ ತನ್ನ ಆಪ್ತ ಮಿತ್ರ ಚೀನಕ್ಕೂ ಗಂಡಾಂತರ ಕಾದಿದೆ ಎಂದು ಪಾಕಿಸ್ಥಾನ ಕಂಗಾಲಾಯಿತೋ ಏನೋ! ಆದರೂ, ಪತ್ರ ಬರೆದ ಬಾಬು ಯಾವ ಮಟ್ಟದ ತಲ್ಲಣ ನಿರೀಕ್ಷಿಸಿದ್ದರೋ ಆ ತಲ್ಲಣ ನೆರೆಯ ದೇಶದಲ್ಲಿ ಉಂಟಾಗಿರುವುದು ವಿಪರ್ಯಾಸ!

Advertisement

Udayavani is now on Telegram. Click here to join our channel and stay updated with the latest news.

Next