Advertisement
ನಂತರ ಮಾತನಾಡಿದ ಸಚಿವರು, ಅಂಕೋಲಾದ ಕರಿ ಈಶಾಡ ಮಾವಿನ ಹಣ್ಣು ಇಲ್ಲಿಯ ಮಣ್ಣಿನ ವಿಶೇಷ ಗುಣ ಹೊಂದಿದೆ. ಇಲ್ಲಿ ಬೆಳೆಯುವ ಕರಿ ಈಶಾಡದ ಸವಿ ಎಲ್ಲಿಯೂ ಸಿಗುವುದಿಲ್ಲ. ಕರಿ ಈಶಾಡ ಮತ್ತು ಬೇರೆ ಬೇರೆ ಜಾತಿಯ ಮಾವಿನ ಹಣ್ಣಿಗೆ ಸೂಕ್ತ ಮಾರುಕಟ್ಟೆ ಸಿಗಬೇಕು. ತಾಲೂಕಿನಾದ್ಯಂತ ಹೇರಳವಾಗಿ ಬೆಳೆಯುವ ವಿವಿಧ ಜಾತಿಯ ಅನೇಕ ಮಾವಿನ ಹಣ್ಣುಗಳನ್ನು ಕೆಡದಂತೆ ರಕ್ಷಿಸಲು ಶೀತಲಿಕರಣ ಘಟಕದ ವ್ಯವಸ್ಥೆಯಾಗಬೇಕಿದೆ ಎಂದರು.
Related Articles
Advertisement
ಹನುಮಂತ ಗೌಡ ವಿಶೇಷವಾಗಿ ತಯಾರಿಸಿದ ಮಾವಿನ ಹಣ್ಣಿನ ಹಾರವನ್ನು ಶಿವರಾಮ ಹೆಬ್ಟಾರರಿಗೆ ಹಾಕಿ ಸ್ವಾಗತಿಸಿದರು. ಬೆಳೆಗಾರರ ಸಮಿತಿ ಕಾರ್ಯದರ್ಶಿ ರಾಮಚಂದ್ರ ಹೆಗಡೆ ನಿರೂಪಿಸಿದರು. ರಾಘು ಕಾಕರಮಠ ವಂದಿಸಿದರು.
ಮಾವು ಮೇಳದಲ್ಲಿ ಅಂಕೋಲೆಯ ಪ್ರಸಿದ್ಧ ಕರಿ ಈಶಾಡು ಹಣ್ಣಿನ ಜೊತೆಗೆ ಆಪೂಸ್, ಚಾಲ್ತಿ, ನೀಲಂ, ರತ್ನಾಗಿರಿ ಆಪೂಸ್, ತೋತಾಪುರಿ ಸೇರಿದಂತೆ ವಿವಿಧ ಜಾತಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿದ್ದವು. ಕಸಿ ಮಾಡಿದ ಮಾವಿನ ಗಿಡಗಳು ಮಾರಾಟವಾದವು. ಮಾವಿನ ಉಪ ಉತ್ಪನ್ನಗಳಾದ ಮಾವಿನ ಉಪ್ಪಿನ ಕಾಯಿ, ಮಾವಿನ ಹುಳಿ, ಹಪ್ಪಳ ಮತ್ತಿತರ ಉತ್ಪನ್ನಗಳು ಗಮನ ಸೆಳೆದವು.