Advertisement

ನಮ್ಮ ವಿದೇಶಾಂಗ ಸಚಿವರದ್ದು ವ್ಯರ್ಥ ಪ್ರಯತ್ನ: ಟ್ರಂಪ್‌

07:00 AM Oct 03, 2017 | |

ವಾಷಿಂಗ್ಟನ್‌: “ನಮ್ಮ ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್ಸನ್‌ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಜತೆ ಸಂಧಾನ ಮಾತುಕತೆ ನಡೆಸಲು ಯತ್ನಿಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ.’ ಹೀಗೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲೇವಡಿ ಮಾಡಿದ್ದಾರೆ. 

Advertisement

ಹೀಗಾಗಿ, ಉತ್ತರ ಕೊರಿಯಾ ಜತೆ ಮಾತುಕತೆ ನಡೆಸಲು ಅಮೆರಿಕ ವಿದೇಶಾಂಗ ಸಚಿವರಿಗೆ ಮನಸ್ಸಿದ್ದರೂ, ಅಧ್ಯಕ್ಷ ರಿಗೆ ಆ ಬಗ್ಗೆ ಒಲವು ಇಲ್ಲವೆಂದು ಸ್ಪಷ್ಟವಾಗಿದೆ. ಆ ದೇಶದ ವಿರುದ್ಧ ಕ್ರಮ ಕೈಗೊಳ್ಳಲು ಹಿಂದಿನ ಅಧ್ಯಕ್ಷರಾದ ಬಿಲ್‌ ಕ್ಲಿಂಟನ್‌, ಜಾರ್ಜ್‌ ಡಬ್ಲೂé ಬುಷ್‌ ಮತ್ತು ಒಬಾಮ ವಿಫ‌ಲರಾಗಿದ್ದರು. ಆದರೆ ತಾನು ಆ ರೀತಿಯಾಗುವುದಿಲ್ಲ ಎಂದೂ ಹೇಳಿದ್ದಾರೆ ಟ್ರಂಪ್‌.

Advertisement

Udayavani is now on Telegram. Click here to join our channel and stay updated with the latest news.

Next