Advertisement

ತಿಂಗಳಲ್ಲೇ ಮೃದುವಾದ ಟ್ರಂಪ್‌! ಟಾರ್ಗೆಟ್‌ ವಲಸಿಗರ ಮೇಲೆ ಮಾತ್ರ

03:45 AM Feb 20, 2017 | |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ ಅಧಿಕಾರ ಸ್ವೀಕರಿಸಿ ಭಾನುವಾರಕ್ಕೆ ತಿಂಗಳು. ಆರಂಭದಲ್ಲಿ ಕಠಿಣ ಯೋಜನೆಗಳನ್ನೇ ಪ್ರಕಟಿಸಿದ ಟ್ರಂಪ್‌ ಸರ್ಕಾರ ಈಗ ಮೃದು ಹೆಜ್ಜೆ ಇಡಲು ಮುಂದಾಗಿದೆ. ಸರ್ಕಾರದ ಟಾರ್ಗೆಟ್‌ ಅಕ್ರಮ ವಲಸಿಗರ ಮೇಲೆ, ಅಮೆರಿಕದಲ್ಲಿ ನೆಲೆಯೂರ ಬಯಸುವವರ ಮೇಲಲ್ಲ ಎನ್ನುವ ಅಂಶವನ್ನು ಪೌರತ್ವ ಮತ್ತು ವಲಸೆ ಸೇವಾ ಇಲಾಖೆ (ಯುಎಸ್‌ಸಿಐಎಸ್‌) ವೆಬ್‌ಸೈಟ್‌ ಪುಷ್ಟೀಕರಿಸಿದೆ.

Advertisement

ಕನ್ನಡಿಗನ ಉದಾಹರಣೆ: ಇಲಾಖೆಯ ಜಾಲತಾಣ, “ಅಕ್ರಮ ವಲಸಿಗರನ್ನಷ್ಟೇ ದೂರವಿಡುತ್ತೇವೆ. ಅಮೆರಿಕದಲ್ಲಿ ನೆಲೆಸಲು ಕನಸು ಕಟ್ಟಿಕೊಳ್ಳುವವರಿಗೆ ಗ್ರೀನ್‌ಕಾರ್ಡ್‌ ಕಡಿತ ನೀತಿಗಳು ಅನ್ವಯ ಆಗದು’ ಎಂದಿದೆ. ಇದಕ್ಕೆ ಪೂರಕವಾಗಿ ಕನ್ನಡಿಗನ ಉದಾಹರಣೆ ನೀಡಲಾಗಿದೆ. “ಕರಣ್‌ ಕುಮಾರ್‌ (ಹೆಸರು ಬದಲಾಯಿಸಲಾಗಿದೆ) ಎಂಬ ಕರ್ನಾಟಕದ ವ್ಯಕ್ತಿ 10 ವರ್ಷದ ಹಿಂದೆ ಕ್ಯಾಲಿಫೋರ್ನಿಯಾಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಬಂದವರು. 

ಕರ್ನಾಟಕದಲ್ಲಿ ಬಿ ಟೆಕ್‌ ಮುಗಿದ ಮೇಲೆ ಇಲ್ಲಿ ಕಂಪ್ಯೂಟರ್‌ ಎಂಜಿನಿಯರಿಂಗ್‌ ಮುಗಿಸಿ, ವಿಶ್ವದ ಅತ್ಯುನ್ನತ ಐಟಿ ಕಂಪನಿಗೆ ಕೆಲಸಕ್ಕೆ ಸೇರಿದ್ದಾರೆ. ಔದ್ಯೋಗಿಕ ಹಿನ್ನೆಲೆಯಲ್ಲಿ ಗ್ರೀನ್‌ಕಾರ್ಡ್‌ ಬಯಸಿ 5 ವರ್ಷದ ಹಿಂದೆಯೇ ಕುಮಾರ್‌ ಅರ್ಜಿ ಸಲ್ಲಿಸಿದ್ದರು. ಆದರೆ, ಅಮೆರಿಕದಲ್ಲಿ ಇವರೊಂದಿಗೆ ನೆಲೆಸಲು ಪತ್ನಿ, ಮಗ ಕಾಯುತ್ತಿದ್ದರು. ಈಗ ಗ್ರೀನ್‌ಕಾರ್ಡ್‌ ಸಿಕ್ಕಿದೆ. ಸದುದ್ದೇಶದಿಂದ ಅಮೆರಿಕಕ್ಕೆ ಬರುವ ಎಲ್ಲರಿಗೂ ಸ್ವಾಗತ’ ಎಂಬ ನಿದರ್ಶನವನ್ನು ಯುಎಸ್‌ಸಿಐಎಸ್‌ ನೀಡಿದೆ. 

ಒಬಾಮ 12ನೇ ದಿ ಬೆಸ್ಟ್‌: “ಸಿ- ಸ್ಪ್ಯಾನ್‌’  ಮಾಧ್ಯಮ ಸಂಸ್ಥೆಯ ಸರ್ವೆಯಲ್ಲಿ ಅಮೆರಿಕದ ಅತ್ಯುತ್ತಮ ಅಧ್ಯಕ್ಷರ ಪಟ್ಟಿಯಲ್ಲಿ ಬರಾಕ್‌ ಒಬಾಮಗೆ 12ನೇ ಸ್ಥಾನ ಸಿಕ್ಕಿದೆ. ಟ್ರಂಪ್‌ ಈ ಪಟ್ಟಿಯಲ್ಲೇ ಇಲ್ಲ!

Advertisement

Udayavani is now on Telegram. Click here to join our channel and stay updated with the latest news.

Next