Advertisement

ಮೋದಿ ಅವರಿಂದ ಅದ್ಭುತ ಕಾರ್ಯಗಳು 

12:31 AM Sep 09, 2022 | Team Udayavani |

ನ್ಯೂಜೆರ್ಸಿ: ಪ್ರಧಾನಿ ನರೇಂದ್ರ ಮೋದಿ ಅದ್ಭುತವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ನನಗಿಂತ ಉತ್ತಮವಾದ ಸ್ನೇಹಿತನನ್ನು ಭಾರತ ಹೊಂದಿಲ್ಲ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರು.

Advertisement

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್‌, 2024ರ ಅಮೆರಿಕ ಚುನಾ ವಣೆಯಲ್ಲಿ ಪುನಃ ಸ್ಪರ್ಧಿಸುವ ಸುಳಿವು ನೀಡಿದರು.

“ಮುಂದಿನ ಅಮೆರಿಕ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ. ಚುನಾವಣೆ ಸಮೀಕ್ಷೆಗಳಲ್ಲಿ ನಾನು ಮುಂದಿದ್ದೇನೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದರು.

“ಭಾರತ ಮತ್ತು ಪ್ರಧಾನಿ  ಮೋದಿ ಜತೆಗೆ ನನಗೆ ಉತ್ತಮ ಬಾಂಧವ್ಯವಿತ್ತು. ನಾವಿಬ್ಬರು ಉತ್ತಮ ಸ್ನೇಹಿ ತರು. ಅದ್ಭುತವಾದ ಕೆಲಸಗಳನ್ನು ಅವರು ಮಾಡು ತ್ತಿದ್ದಾರೆ. ಅವರೊಬ್ಬ ಒಳ್ಳೆಯ ವ್ಯಕ್ತಿ’ ಎಂದು ಮೋದಿ ಅವರನ್ನು ಟ್ರಂಪ್‌ ಶ್ಲಾ ಸಿದರು.

2019ರಲ್ಲಿ ಮೋದಿ ಪ್ರಧಾನಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಸಂದರ್ಭದಲ್ಲಿ ಅಮೆರಿಕದ ಹೂಸ್ಟನ್‌ ಮತ್ತು ಟೆಕ್ಸಾಸ್‌ನಲ್ಲಿ ಹಮ್ಮಿಕೊಂಡಿದ್ದ “ಹೌಡಿ ಮೋದಿ’ ರ್ಯಾಲಿಯಲ್ಲಿ ಮೋದಿ ಮತ್ತು ಟ್ರಂಪ್‌ ಮಾತನಾಡಿದ್ದರು. ಅನಂತರ ಗುಜರಾತ್‌ನಲ್ಲಿ ಆಯೋಜಿಸಿದ್ದ ಮೆಗಾ ಸಮಾವೇಶದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next