Advertisement

ಟ್ರಂಪ್‌ ಟೀಕಾಕಾರ ನಿಧನ

10:05 AM Aug 27, 2018 | |

ನ್ಯೂಯಾರ್ಕ್‌: ಅಮೆರಿಕದ ಪ್ರಭಾವಿ ರಾಜಕಾರಣಿ ಹಾಗೂ ಸಂಸದ ಜಾನ್‌ ಮೆಕೇನ್‌(81) ಮಿದುಳಿನ ಕ್ಯಾನ್ಸರ್‌ನಿಂದ ರವಿವಾರ ನಿಧನರಾಗಿದ್ದಾರೆ. ಅರಿಜೋನಾದ ಸಂಸದರಾಗಿದ್ದ ಮೆಕೇನ್‌ ಅವರು ಅಧ್ಯಕ್ಷ ಟ್ರಂಪ್‌ರ ಕಟು ಟೀಕಾಕಾರರಾಗಿದ್ದರು. ಅಷ್ಟೇ ಅಲ್ಲ, ಭಾರತದತ್ತ ಒಲವು ಹೊಂದಿದವರಾಗಿದ್ದರು.

Advertisement

ಕಳೆದ ವರ್ಷದಿಂದಲೂ ಇವರಿಗೆ ಮಿದುಳು ಕ್ಯಾನ್ಸರ್‌ ಚಿಕಿತ್ಸೆ ನೀಡಲಾಗುತ್ತಿತ್ತು. ನಾಲ್ಕು ಬಾರಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದರು. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳುವ ವೇಳೆ ಅಮೆರಿಕದ ಪತ್ರಿಕೆಗಳಿಗೆ ಲೇಖನ ಬರೆದಿದ್ದ ಮೆಕೇನ್‌, ಭಾರತದ ಅಭಿವೃದ್ಧಿ ಗತಿಯನ್ನು ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲ, ಭಾರತ ಮತ್ತು ಅಮೆರಿಕ ಸಂಬಂಧ ಸುಧಾರಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು. ಟ್ರಂಪ್‌ ನೀಡುತ್ತಿದ್ದ ಪ್ರಚೋದನಕಾರಿ ಹೇಳಿಕೆಗಳನ್ನು ಇವರು ತೀವ್ರವಾಗಿ ಖಂಡಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದ ಅವರು, ಅಂತ್ಯಸಂಸ್ಕಾರದ ತಯಾರಿಗೆ ಸೂಚಿಸಿದ್ದರು. ಅಷ್ಟೇ ಅಲ್ಲ, ಅಂತ್ಯ ಸಂಸ್ಕಾರಕ್ಕೆ ಟ್ರಂಪ್‌ ಆಗಮಿಸಬಾರದು ಎಂದೂ ಸೂಚಿಸಿದ್ದರು.

ಮೆಕೇನ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. “ಸೆನೆಟರ್‌ ಜಾನ್‌ ಮೆಕೇನ್‌ ಅವರ ನಿಧನದಿಂದ ಬಹಳ ದುಃಖವಾಗಿದೆ. ಒಬ್ಬ ಸ್ಥಿರ ಗೆಳೆಯನನ್ನು ನಾವಿಂದು ಕಳೆದುಕೊಂಡಿದ್ದೇವೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next