Advertisement

ಚೀನ ವಿರುದ್ಧ ನೀಡಿದ್ದ ದೂರನ್ನು ಅಮಾನತುಗೊಳಿಸಿದ ಟ್ರಂಪ್‌ ಆಡಳಿತೆ

09:29 AM Jun 18, 2019 | Sathish malya |

ವಾಷಿಂಗ್ಟನ್‌ : ವಿಶ್ವ ವಾಣಿಜ್ಯ ಸಂಘಟನೆಗೆ ಚೀನದ ವಿರುದ್ಧ ಹಿಂದೆ ತಾನು ನೀಡಿರುವ ದೂರನ್ನು ಅಮೆರಿಕದ ಟ್ರಂಪ್‌ ಆಡಳಿತ ಅಮಾನತು ಮಾಡಿದೆ.

Advertisement

ಅಮೆರಿಕದ ಈ ನಿಲುವಿನಲ್ಲಿ ಬೀಜಿಂಗ್‌ ಜತೆಗಿನ ತನ್ನ ವಾಣಿಜ್ಯ ಸಮರವನ್ನು ಮತ್ತೆ ಸಣ್ಣ ರೀತಿಯಲ್ಲಿ ಆರಂಭಿಸುವ ಸುಳಿವು ಇರುವುದು ತೋರಿ ಬಂದಿದೆ ಎನ್ನಲಾಗಿದೆ.

ಟ್ರಂಪ್‌ ಆಡಳಿತೆ ಚೀನದ ವಿರುದ್ಧ ಕೊಟ್ಟಿದ್ದ ವಾಣಿಜ್ಯ ದೂರಿನ ಬಗ್ಗೆ ಡಿಸೆಂಬರ್‌ ವರೆಗೆ ತಾನು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಡಬ್ಲ್ಯುಟಿಓ ಹೇಳಿದೆ.

ಬೀಜಿಂಗ್‌ ಚೀನದಲ್ಲಿನ ಅಮೆರಿಕನ್‌ ಕಂಪೆನಿಗಳ ಬೌದ್ದಿಕ ಆಸ್ತಿಯನ್ನು ಸಂರಕ್ಷಿಸುವಲ್ಲಿ ವಿಫ‌ಲವಾಗಿದೆ ಎಂದು ಟ್ರಂಪ್‌ ಆಡಳಿತೆ ಡಬ್ಲ್ಯುಟಿಓ ಗೆ ನೀಡಿದ್ದ ದೂರಿನಲ್ಲಿ ಹೇಳಿತ್ತು. ಬೀಜಿಂಗ್‌ ಮತ್ತು ವಾಷಿಂಗ್ಟನ್‌ ನಡುವಿನ ವಾಣಿಜ್ಯ ಸಮರದ ಮುಖ್ಯ ವಿಷಯವೇ ಬೌದ್ಧಿಕ ಆಸ್ತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next