Advertisement
ಇವರದ್ದು ಅಂತರ್‌ಜಾತಿ ವಿವಾಹ. ಸ್ವಪ್ನ ಹತ್ತನೇ ತರಗತಿ ಓದುತ್ತಿದ್ದಾಗ ಅದೇ ಗ್ರಾಮದ ಮನು ಜತೆ ಪ್ರೇಮಾಂಕುರವಾಗುತ್ತದೆ. “ಸ್ವಪ್ನ ಮತ್ತು ಮನು’ ಪಿಯುಸಿವರೆಗೂ ವ್ಯಾಸಂಗಮಾಡಿದ್ದು, ಮನು ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಸ್ಪಪ್ನ ದ್ವಿತೀಯ ಪಿಯುಸಿ ಓದು ಮುಗಿಸಿ ಟೈಪಿಂಗ್ ಕ್ಲಾಸ್‌ಗೆ ಹೋಗುತ್ತಿದ್ದಾಗ ಒಂದು ದಿನ ಇದ್ದಕ್ಕಿದ್ದಂತೆ ಕುಸಿದು ಬಿದ್ದು ತನ್ನೆರಡು ಕಾಲುಗಳ ಸ್ವಾ ಧೀನ ಕಳೆದುಕೊಂಡಳು.
Related Articles
Advertisement
ಇದನ್ನೂ ಓದಿ:ಮ್ಯಾನ್ಮಾರ್ ನಿರಾಶ್ರಿತರನ್ನು ವಾಪಸ್ ಕಳುಹಿಸಬೇಡಿ : ಕೇಂದ್ರಕ್ಕೆ ಝೊರಾಮ್ ತಂಗ
ನನಗೆ ಮಗಳು-ಸೊಸೆ ಅವಳೇ ಎಂದಿದ್ದಾರೆ. ಇವರ ಪ್ರೇಮ ವಿವಾಹಕ್ಕೆಇಡೀ ಊರಿನ ಜನರೇ ಬೆನ್ನೆಲು ಬಾಗಿನಿಂತಿದ್ದಾರೆ.ಇತ್ತೀಚೆಗೆ ತಾಲೂಕಿನ ಮಲ್ಲೇನಹಳ್ಳಿಶ್ರೀ ಸುಬ್ರಮಣ್ಯಸ್ವಾಮಿ ಪುಂಗುನಿ ಉತ್ತಿರಿ ಜಾತ್ರಾ ಮಹೋತ್ಸವದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮನು-ಸ್ವಪ್ನದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.ಆರು ವರ್ಷ ಹಿಂದೆ ಹುಟ್ಟಿದ ನಿಷ್ಕಲ್ಮಶ ಪ್ರೀತಿ ಕಾಫಿತೋಟದಲ್ಲಿ ಅರಳಿ ಸಮಾಜಕ್ಕೆ ಮಾದರಿಯಾಗಿದೆ.
ಸ್ಪಪ್ನ ಚೆನ್ನಾಗಿದ್ದಳು. ಇದ್ದಕ್ಕಿದ್ದಂತೆ ಎರಡು ವರ್ಷದ ಹಿಂದೆ ಕಾಲುಸ್ವಾಧೀನ ಕಳೆದುಕೊಂಡಳು. ಕಾಲುಸ್ವಾ ಧೀನ ಕಳೆದುಕೊಂಡಿದ್ದಾಳೆಂದು ಆಕೆಯನ್ನು ಬಿಟ್ಟರೆ ನನ್ನ ಪ್ರೀತಿಗೆ ಬೆಲೆಯೇ ಇಲ್ಲ. ನಾನು ಅವಳನ್ನು ಮನಸಾರೆ ಪ್ರೀತಿಸಿದ್ದೇನೆ. ಅವಳನ್ನೇ ಮದುವೆಯಾಗಿದ್ದೇನೆ. ಮುಂದೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
ಮನು
10ನೇತರಗತಿಯಲ್ಲಿರುವಾಗ ನಮ್ಮಿಬ್ಬರಲ್ಲಿ ಪ್ರೀತಿ ಉಂಟಾಗಿತ್ತು.ಕಾಲು ಸ್ವಾ ಧೀನ ಕಳೆದುಕೊಂಡನನಗೆ ಮನು ಬೇಜಾರಾಗಬೇಡ.ನಾನು ನಿನ್ನ ಜತೆ ಇರ್ತೇನೆ ಎಂದು ಧೈರ್ಯ ತುಂಬಿದ್ದ. ಈಗ ನನ್ನಕೈ ಹಿಡಿದಿದ್ದು, ಇನ್ನು ನನಗ್ಯಾವಭಯವಿಲ್ಲ. ಖುಷಿಯಾಗುತ್ತಿದೆ.
ಸ್ವಪ್ನ