ಒತ್ತಾಯಿಸಿ ದಾವಣಗೆರೆ ಜಿಲ್ಲಾ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನನ್ನು ಸಾಬ್, ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ಸಾಗಾಣಿಕೆಗೆ ಅವಕಾಶ ಇಲ್ಲದೇ ಇರುವುದು ಮತ್ತಿತರ ಕಾರಣಗಳಿಂದ ಲಾರಿ ಮಾಲೀಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಡೀಸೆಲ್, ಯಂತ್ರೋಪಕರಣಗಳ ಬೆಲೆ ಏರಿಕೆಯಿಂದ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿ ಹಮಾಲರಿಗೆ ಲೋಡಿಂಗ್, ಅನ್‌ಲೋಡಿಂಗ್, ಓವರ್ ಲೋಡಿಂಗ್ ನೀಡುವುದು ಕಷ್ಟವಾಗುತ್ತದೆ. ಲೋಡಿಂಗ್, ಅನ್‌ಲೋಡಿಂಗ್ ಸಮಸ್ಯೆ ಬಗೆಹರಿಯುವ ತನಕ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದರು.
Related Articles
Advertisement
ಕೋವಿಡ್ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಹೆಚ್ಚಿನ ಗಮನ ಹರಿಸಲಿಲ್ಲ. ಈಗ ಮತ್ತೆ ಹಿಂದಿನಂತೆಯೇ ಲಾರಿ ಮಾಲಿಕರೇ ಲೋಡಿಂಗ್, ಅನ್ ಲೋಡಿಂಗ್ ಹಮಾಲಿ ಕೊಡಬೇಕಾಗಿದೆ. ಕೋವಿಡ್‌ದಿಂದ ಸಾಕಷ್ಟು ಸಮಸ್ಯೆಯಲ್ಲಿ ಇರುವ ಮಾಲಿಕರು ಚಾಲಕರು, ನಿರ್ವಾಹಕರ ವೇತನ ನೀಡಲೂ ಆಗದ ಸ್ಥಿತಿಯಲ್ಲಿದ್ದಾರೆ. ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೊಡಲಾಗುತ್ತಿಲ್ಲ. ಕೊಡುವುದೂ ಇಲ್ಲ. ಹಾಗಾಗಿ ವರ್ತಕರೇ ಹಿಂದಿನಂತೆ ಲೋಡಿಂಗ್ ಮತ್ತು ಅನ್ ಲೋಡಿಂಗ್ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಎರಡೂ¾ರು ಸಾವಿರ ಲಾರಿಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಪಿಎಂಸಿ ಆವರಣದಲ್ಲಿ ಲಾರಿ ಮಾಲೀಕರ ಸಂಘದ ಪದಾಧಿ ಕಾರಿಗಳು ವರ್ತಕರ ಮನವೊಲಿಸಲು ಯತ್ನಿಸಿದರು. ಸಂಘದ ಶಾಂತಕುಮಾರ್, ಪವನ್ ಕುಮಾರ್, ಬಾಬುಸಾಬ್, ದಿನೇಶ್, ಬಸವರಾಜ್, ಶಿವಕುಮಾರ್, ಈಶ್ವರಪ್ಪ ಇತರರು ಇದ್ದರು.
ಸಮಸ್ಯೆ ಬಗೆಹರಿಯುವರೆಗೂ ಸಂಚಾರ ಸ್ಥಗಿತನಾವು ಪ್ರತಿಭಟನೆ ಮಾಡುತ್ತಿಲ್ಲ. ಲೋಡಿಂಗ್, ಅನ್‌ಲೋಡಿಂಗ್ ಸಮಸ್ಯೆ ಬಗೆಹರಿಯುವವರೆಗೆ ಲಾರಿ ಸಂಚಾರ ನಿಲ್ಲಿಸಿದ್ದೇವೆ. ವರ್ತಕರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತ, ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಚೇಂಬರ್ ಆಫ್ ಕಾಮರ್ಸ್‌ಗೆ ಮನವಿ ಮಾಡಿದ್ದೇವೆ. ಎಲ್ಲರೂ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ವಿಶ್ವಾಸ ಇದೆ. ಸಮಸ್ಯೆ ಬಗೆಹರಿಯುವವರೆಗೆ ಲಾರಿಗಳ ಸಂಚಾರ ನಿಲ್ಲಿಸಲಾಗುವುದು ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನನ್ನು ಸಾಬ್ ತಿಳಿಸಿದರು.