Advertisement

ಸಂಚಾರಿ ನಿಯಮ ಉಲ್ಲಂಘಿಸಿದ ಲಾರಿ ಮಾಲೀಕನಿಗೆ 6.53 ಲಕ್ಷ ರೂಪಾಯಿ ದಂಡ

09:32 AM Sep 15, 2019 | Team Udayavani |

ಸಂಬಾಲ್ ಪುರ್(ಒಡಿಶಾ):ನೂತನ ಮೋಟಾರು ವಾಹನ ಕಾಯ್ದೆಯಡಿ ಭಾರೀ ಪ್ರಮಾಣದ ದಂಡ ವಿಧಿಸುತ್ತಿರುವ ಬಗ್ಗೆ ಈಗಾಗಲೇ ವರದಿಯಾಗಿದೆ. ಇದೀಗ ಹೊಸ ಸಂಚಾರ ನಿಯಮ ಜಾರಿಗೆ ಬರುವ ಮುನ್ನವೇ ಲಾರಿ ಮಾಲಿಕರೊಬ್ಬರಿಗೆ ಬರೋಬ್ಬರಿ 6.53 ಲಕ್ಷ ರೂಪಾಯಿ ದಂಡ ವಿಧಿಸಿರುವ ಘಟನೆ ಒಡಿಶಾದ ಸಂಬಾಲ್ ಪುರ್ ನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಸಂಚಾರ ನಿಯಮ ಉಲ್ಲಂಘಿಸಿದ ವಿವಿಧ ಅಪರಾಧದಡಿಯಲ್ಲಿ ಸಂಬಾಲ್ ಪುರ್ ಆರ್ ಟಿಒ ಅಧಿಕಾರಿ ಲಾರಿ ಮಾಲೀಕನಿಗೆ 6.53 ಲಕ್ಷ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ತಿಳಿಸಿದೆ. ಈ ಪ್ರಕರಣ ನೂತನ ಮೋಟಾರು ವಾಹನ ಕಾಯ್ದೆ ಜಾರಿಯಾಗುವ ಮೊದಲು. ಆಗಸ್ಟ್ 10ರಂದು ಆರ್ ಟಿಓ ಅಧಿಕಾರಿ ಭಾರೀ ಮೊತ್ತದ ದಂಡ ವಿಧಿಸಿರುವುದು ಶನಿವಾರ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.

ಹಿಂದಿನ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಲಾರಿ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಈ ಲಾರಿ ನಾಗಲ್ಯಾಂಡ್ ರಿಜಿಸ್ಟರ್ಡ್ ಹೊಂದಿದೆ. ಈ ಲಾರಿ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಸಾರಿಗೆ ಅಧಿಕಾರಿಗಳು ಭಾರೀ ಪ್ರಮಾಣದ ದಂಡ ವಿಧಿಸಿರುವುದಾಗಿ ವರದಿ ವಿವರಿಸಿದೆ.

ಲಾರಿ ಮಾಲೀಕರನ್ನು ನಾಗಲ್ಯಾಂಡ್  ಫೆಕ್ ನಗರದ ಬೆಥೆಲ್ ಕಾಲೋನಿಯ ಶೈಲೇಶ್ ಶಂಕರ್ ಲಾಲ್ ಗುಪ್ತಾ ಎಂದು ಗುರುತಿಸಲಾಗಿದೆ. ಲಾರಿ ಚಾಲಕ ದಿಲೀಪ್ ಕಾರ್ಟಾ ಒಡಿಶಾದ ಝಾರುಸುಗುಡಾ ನಿವಾಸಿ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next