Advertisement

ಹಳಿ ತಪಾಸಣೆ ಟ್ರಾಲಿಗಳಿಗೆ ಜಿಪಿಎಸ್‌ ಜೋಡಿಸಲು ರೈಲ್ವೇ ನಿರ್ಧಾರ

07:14 PM Sep 08, 2017 | Team Udayavani |

ಹೊಸದಿಲ್ಲಿ : ಹಳಿ ತಪಾಸಣೆಗಾಗಿ ಬಳಸುವ, ಕೈಯಿಂದ ಎಳೆಯುವ ಟ್ರಾಲಿಗಳಿಗೆ ಜಿಪಿಎಸ್‌ ಟ್ರ್ಯಾಕರ್‌ಗಳನ್ನು ಜೋಡಿಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.

Advertisement

ಈ ರೀತಿ ಕೈಯಿಂದ ಎಳೆಯಲ್ಪಡುವ ಟ್ರಾಲಿಗಳಿಗೆ ಜಿಪಿಎಸ್‌ ಜೋಡಿಸುವ ಕಾರ್ಯವನ್ನು ಒಂದು ತಿಂಗಳ ಒಳಗಾಗಿ ಮಾಡಬೇಕು ಎಂದು ರೈಲ್ವೇ ಸಚಿವಾಲಯ ಎಲ್ಲ ವಲಯ ರೈಲ್ವೇಗಳಿಗೆ ಪತ್ರ ಬರೆದು ಆದೇಶಿಸಿದೆ.

ಕಳೆದ ಕೆಲ ಸಮಯದಿಂದ ನಿರಂತರವಾಗಿ ರೈಲು ಹಳಿ ತಪ್ಪುವ ದುರಂತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರೈಲ್ವೇ ಸಚಿವಾಲಯ ಜಿಪಿಎಸ್‌ ಜೋಡಣೆ ನಿರ್ಧಾರ ಕೈಗೊಂಡಿದೆ.  

Advertisement

Udayavani is now on Telegram. Click here to join our channel and stay updated with the latest news.

Next