ವಿಜಯಪುರ: ಭಾರತದ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ವಿಜಯ ಸಾ ಧಿಸಿದ್ದಕ್ಕೆ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಬಿಜೆಪಿ ಎರಡೂ ರಾಜ್ಯಗಳಲ್ಲಿ ವಿಜಯ ಸಾ ಧಿಸಿದ ಸುದ್ದಿ ಹೊರ ಬೀಳುತ್ತಲೇ ನಗರದ ಶಿವಾಜಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ವಿನಿಮಯ ಮಾಡಿಕೊಂಡರು. ಈ ವೇಳೆ ಮಾತನಾಡಿದ
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ, ಭಾರತ ದೇಶದ 3 ರಾಜ್ಯಗಳಲ್ಲಿ ಕಳೆದ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ಪೂರ್ವದ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ಅದ್ಭುತ ವಿಜಯ ಸಾಧಿಸಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹಗಲಿರುಳು ಎನ್ನದೇ ದುಡಿದ ಪರಿಶ್ರಮಕ್ಕೆ ಇದೀಗ ರಾಜಕೀಯ ಬದಲಾವಣೆ ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
20 ವರ್ಷಗಳ ಬಳಿಕ ಬದಲಾವಣೆ ಬಯಸಿದ್ದ ತ್ರಿಪುರಾ ರಾಜ್ಯದ ಜನರು ಪ್ರಚಂಡ ಬಹುಮತದ ಮೂಲಕ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದಾರೆ. ಈ ರಾಜ್ಯಗಳ ಫಲಿತಾಂಶ ಎರಡೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆಯ ದಿಕ್ಸೂಚಿ. ಕರ್ನಾಟಕ ರಾಜ್ಯದಲ್ಲೂ ಬಿಜೆಪಿ ಅಧಿ ಕಾರಕ್ಕೆ ಬರುವುದು ಖಚಿತವಾಗಿದ್ದು, ವಿಜಯಪುರ ಜಿಲ್ಲೆಯಲ್ಲೂ ಭದ್ರ ಕೋಟೆ ಕಟ್ಟಲಿದೆ. ಕಾಂಗ್ರೆಸ್‌ಸರ್ಕಾರದ ದುರಾಡಳಿತದಿಂದ ಬದಲಾವಣೆ ಬಯಸಿರುವ ರಾಜ್ಯದ ಜನರು ಬಿಜೆಪಿಗೆ ಅಧಿ ಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ದೇಶದಲ್ಲಿ ಮೋದಿ ಅವರ ಅಲೆ ಕಡಿಮೆ ಆಗಿದೆ ಎಂದು ಬೊಬ್ಬೆ ಹೊಡೆಯುವವರಿಗೆ ಈ ಫಲಿತಾಂಶಗಳು ತಕ್ಕ ಉತ್ತರ ನೀಡಿವೆ. ಕರ್ನಾಟಕದಲ್ಲೂ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ
ದಿಗ್ವಿಜಯ ಸಾಧಿ ಸಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತೂಮ್ಮೆ ಸಿಎಂ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೂಡಾ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ವಿವೇಕ ಡಬ್ಬಿ, ಚಿದಾನಂದ ಚಲುವಾದಿ, ಈರಣ್ಣ ಚಿಂಚಲಿ, ಆನಂದ ಧೂಮಾಳೆ, ತಾನಾಜಿ ಜಾಧವ, ಗುರುರಾಜ ದೇಶಪಾಂಡೆ, ರಾಮು ಹೊಸಪೇಟ, ಕೃಷ್ಣ ಗುನ್ನಾಳಕರ, ರಾಜೇಶ ತವಸೆ, ಬಾಬು ಯಳಗಂಟಿ, ರಾಜು ವಾಲಿ, ರಾಜು ಹೂನ್ನೂರ, ವಿಠuಲ ನಡುವಿನಕೇರಿ, ಬಸಯ್ಯ ಗೊಳಸಂಗಿಮಠ, ಶ್ರೀಕಾಂತ ರಾಠೊಡ, ಪ್ರಶಾಂತ ಅಗಸರ, ಪರಶುರಾಮ ಹೊಸಪೇಟ, ಗುರುರಾಜ ರಾವ್, ವಿನಾಯಕ ದಹಿಂದೆ, ಆನಂದ ಮುಚ್ಚಂಡಿ, ರಜನಿ ಸಂಬಣ್ಣಿ, ಸುಮಂಗಲಾ ಕೋಟಿ, ಭಾರತಿ ಭುಯ್ನಾರ, ಛಾಯಾ ಮಶಿಯಣ್ಣವರ, ಪದ್ಮಾ
ಸೂರ್ಯವಂಶಿ, ಈರಣ್ಣ ಪಟ್ಟಣಶೆಟ್ಟಿ, ಬಾಬು ಜಗದಾಳೆ, ರಾಕೇಶ ಗರಸಂಗಿ ಇದ್ದರು.