Advertisement
ಪ್ರಕಾಶ ಹುಕ್ಕೇರಿ ಮತ್ತು ಮಗ ಗಣೇಶ ಹುಕ್ಕೇರಿ ತಂದೆ ಮಗ ಜೋಡಿ ಒಂದೆಡೆ ಯಾದರೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಇನ್ನೊಂದೆಡೆ.
ಒಂದೇ ಮನೆಯಲ್ಲಿ ಇಬ್ಬರಿಗೆ ಅದರಲ್ಲೂ ಪತಿ ಪತ್ನಿಗೆ ಟಿಕೆಟ್ ಕೊಡುವ ಸಂಪ್ರದಾಯ ಇರಲಿಲ್ಲ. ಅದೂ ಬಿಜೆಪಿಯಲ್ಲಿ ನಾವು ನೋಡಿಲ್ಲ. ಅಂತಹ ದೊಡ್ಡ ಅವಕಾಶ ನಮಗೆ ಸಿಕ್ಕಿದೆ. ನಾವು ಟಿಕೆಟ್ ಕೇಳಿರಲಿಲ್ಲ. ಆದರೆ ಬಿಜೆಪಿ ವರಿಷ್ಠರು ನಮ್ಮಲ್ಲಿ ಏನೋ ವಿಶೇಷ ನೋಡಿದ್ದಾರೆ. ನಮ್ಮ ಪ್ರಾಮಾಣಿಕ ಕೆಲಸ ಹಾಗೂ ಸಮಾಜ ಸೇವೆ ಅವರಿಗೆ ಮೆಚ್ಚುಗೆಯಾಗಿದೆ. ನಾನು ಶಾಸಕಿಯಾಗುವ ಮೊದಲು 2013ರಿಂದ 2017ರವರೆಗೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಯಾಗಿ ಕೆಲಸ ಮಾಡಿದ್ದೇನೆ. ನನ್ನ ಪತಿ ಅಣ್ಣಾ ಸಾಹೇಬ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿ ದ್ದಾರೆ. ಇದೆಲ್ಲವನ್ನು ಗಮನಿಸಿ ಅಮಿತ್ ಶಾ ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ.
Related Articles
30 ವರ್ಷಗಳಲ್ಲಿ ಚಿಕ್ಕೋಡಿಯಲ್ಲಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಎಂದರೆ ಅದು ಜೊಲ್ಲೆ ಹಾಗೂ ಹುಕ್ಕೇರಿ ಕುಟುಂಬದ ಸೆಣಸಾಟ ಎಂಬ ಮಾತಿದೆ. ಈ ಬಾರಿ ನಾವು ಸೆಣಸಾಟ ದಲ್ಲಿ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಲಿದ್ದೇವೆ. ಚಿಕ್ಕೋಡಿ ಸದಲಗಾದಲ್ಲಿ ತೀವ್ರ ಪೈಪೋಟಿ ನೀಡಲಿ ದ್ದೇವೆ. ಸಹಕಾರ ಕ್ಷೇತ್ರದಲ್ಲಿ ನಾವು ಕಂಡಿರುವ ಯಶಸ್ಸನ್ನು ರಾಜಕಾರಣದಲ್ಲೂ ಕಾಣಲು ಬಯಸಿ ದ್ದೇವೆ. ಇದೇ ನಮ್ಮ ಮುಖ್ಯ ನಿರೀಕ್ಷೆ.
Advertisement
5 ವರ್ಷದಲ್ಲಿ ಏನು ಮಾಡಿದ್ದೀರಿ ನೀವು?ನಾವು ರಾಜಕಾರಣದ ಜೊತೆಗೆ ಸಮಾಜ ಸೇವೆ ಮಾಡುತ್ತಿದ್ದೇವೆ. ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಗಮನ ಹರಿಸಿದ್ದೇವೆ. ಐದು ವರ್ಷಗಳಲ್ಲಿ ಮಹಿಳಾ ಶಾಸಕಿ ಏನು ಮಾಡ ಬಹುದು ಎಂದು ನಾನು ತೋರಿಸಿ ಕೊಟ್ಟಿ ದ್ದೇನೆ. ನಿಪ್ಪಾಣಿ ಕ್ಷೇತ್ರಕ್ಕೆ 750 ಕೋಟಿ ರೂ. ಅನುದಾನ ತಂದು ರಸ್ತೆ, ನೀರು ಮೊದ ಲಾದ ಮೂಲಭೂತ ಸೌಲಭ್ಯ ಕಲ್ಪಿಸಿದ್ದೇನೆ.
– ಶಶಿಕಲಾ ಜೊಲ್ಲೆ ನಿಪ್ಪಾಣಿ ಚಿಕ್ಕೋಡಿ ಕ್ಷೇತ್ರದಲ್ಲಿ ರಾಜಕೀಯ ಒಳಒಪ್ಪಂದ ನಡೆಯಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ನಿಜವೇ ?
ಇದು ಸುಳ್ಳು. ರಾಜಕೀಯ ಒಳ ಒಪ್ಪಂದದ ಮಾತೇ ಇಲ್ಲ. ನಾನು ಬಿಜೆಪಿ ಅಭ್ಯರ್ಥಿ. ಜಯ ನನ್ನ ಗುರಿ. ಈ ಹಿಂದೆ ಜನರು ಈ ರೀತಿ ಮಾತನಾಡುತ್ತಿದ್ದರು. ನಾನು ಎಂದಿಗೂ ಒಳಒಪ್ಪಂದ ಮಾಡಿಕೊಂಡಿಲ್ಲ. ಮುಂದೆಯೂ ಮಾಡಿಕೊಳ್ಳುವುದಿಲ್ಲ. ಒಂದೇ ಮನೆಯ ಇಬ್ಬರಿಗೂ ಟಿಕೆಟ್ ನಿರೀಕ್ಷೆ ಇತ್ತೇ?
ನಿರೀಕ್ಷೆ ಮಾಡಿದ್ದೆ. ಅಧಿಕಾರದಲ್ಲಿ ಇರದೇ ಇದ್ದರೂ ಸಮಾಜ ಸೇವೆ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದೆ. ರಾಜಕಾರಣದ ಜೊತೆಗೆ ಸಮಾಜಸೇವೆಯೂ ನಮ್ಮ ಮುಖ್ಯ ಕಾಯಕ. ರಾಜಕಾರಣ ಮಾಡದೆ ಏನು ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಈ ಎಲ್ಲ ಶ್ರಮದ ಫಲವಾಗಿ ಟಿಕೆಟ್ ಸಿಕ್ಕಿದೆ. ಕಳೆದ ಬಾರಿಗೂ ಈ ಬಾರಿಗೂ ವ್ಯತ್ಯಾಸ?
ಏನೂ ವ್ಯತ್ಯಾಸ ಕಾಣುತ್ತಿಲ್ಲ. 2004ರಲ್ಲಿ ಪ್ರಕಾಶ ಹುಕ್ಕೇರಿ ವಿರುದ್ಧ ಬಿಜೆಪಿ ಯಿಂದ ಸ್ಪರ್ಧೆ ಮಾಡಿ ಸೋತಿದ್ದೆ. ಆದರೆ ಇದರಿಂದ ಹಿಂದೆ ಸರಿಯಲಿಲ್ಲ. ಬದಲಾಗಿ ಸಮಾಜ ಸೇವೆ ಮೂಲಕ ಜನರಿಗೆ ಹತ್ತಿರವಾದೆ. ಜನರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದೆ. ಸಮಾಜಸೇವೆಯ ಜತೆಗೆ ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷನಾಗಿ ರಾಜಕೀಯ ಕಾರ್ಯ ಮಾಡಿದೆ. ಹೀಗಾಗಿ ನನಗೆ ಏನೂ ವ್ಯತ್ಯಾಸ ಕಾಣುವುದಿಲ್ಲ. ಆಗ ಅಪ್ಪನ ವಿರುದ್ಧ ಸ್ಪರ್ಧೆ ಮಾಡಿದ್ದೆ. ಈಗ ಅವರ ಮಗನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಇದೊಂದೇ ವ್ಯತ್ಯಾಸ. ನಮಗೆ ನೂರಕ್ಕೆ ನೂರರಷ್ಟು ಗೆಲುವಿನ ವಿಶ್ವಾಸ ಇದೆ. ನಾವು ಮಾಡಿದ ಕಾರ್ಯ, ಪ್ರಧಾನಿ ಮೋದಿ ಅಲೆ. ಬಿಜೆಪಿ ಜನರ ಒಲವು ನಮ್ಮ ನೆರವಿಗೆ ಬರಲಿದೆ.
– ಅಣ್ಣಾಸಾಹೇಬ ಜೊಲ್ಲೆ ಸಂದರ್ಶನ: ಕೇಶವ ಆದಿ