Advertisement
ಮೊದಲೇ ಹೇಳಿದಂತೆ “ತ್ರಿಬಲ್ ರೈಡಿಂಗ್’ ಔಟ್ ಆ್ಯಂಡ್ ಔಟ್ ಲವ್ ಕಂ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾ. ಒಬ್ಬ ಹುಡುಗನ ಜೀವನದಲ್ಲಿ ಬರುವ ಮೂವರು ಹುಡುಗಿಯರು, ಅವನನ್ನು ಲವ್ ಮಾಡುವ ನೆಪದಲ್ಲಿ ಹೇಗೆಲ್ಲ ಇಕ್ಕಟ್ಟಿಗೆ ಸಿಲುಕಿಸಿ ತಮಾಷೆ ನೋಡುತ್ತಾರೆ ಅನ್ನೋದು ಸಿನಿಮಾದ ಕಥೆಯ ಒಂದು ಎಳೆ.
Related Articles
Advertisement
ಇನ್ನು ನಾಯಕಿಯರಾಗಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ಮೂವರಿಗೂ ನಿರ್ದೇಶಕರು ತೆರೆಮೇಲೆ ಸಮಾನ ಸ್ಕ್ರೀನ್ ಸ್ಪೇಸ್ ನೀಡಿದ್ದು, ಮೂವರು ಕೂಡ ತಮ್ಮ ಅಂದ ಮತ್ತು ಪಾತ್ರ ಪೋಷಣೆಯಲ್ಲಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ.
ಉಳಿದಂತೆ ಸಾಧುಕೋಕಿಲ, ಕುರಿ ಪ್ರತಾಪ್, ರವಿಶಂಕರ್ ಗೌಡ ಕಾಮಿಡಿ ಕಮಾಲ್ ಪ್ರೇಕ್ಷಕರಿಗೆ ನಗು ತರಿಸುತ್ತದೆ. ಇನ್ನು ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಶೋಭರಾಜ್, ಶರತ್ ಲೋಹಿತಾಶ್ವ, ಚಿತ್ಕಲಾ ಬಿರಾದಾರ್ ಹೀಗೆ ಜನಪ್ರಿಯ ಕಲಾವಿದರ ದಂಡೇ ಇಡೀ ಸಿನಿಮಾದಲ್ಲಿ ಕಾಣ ಸಿಗುತ್ತದೆ.
ತಾಂತ್ರಿಕವಾಗಿ ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನದ ಮೂರು ಹಾಡುಗಳು ಥಿಯೇಟರ್ ಹೊರಗೂ ಗುನುಗುವಂತಿದೆ. ಹಿನ್ನೆಲೆ ಸಂಗೀತ, ಸಂಕಲನ ಮತ್ತು ಜೈ ಗಣೇಶ್ ಛಾಯಾಗ್ರಹಣ ತಾಂತ್ರಿಕವಾಗಿ ಸಿನಿಮಾದಲ್ಲಿ ಗಮನ ಸೆಳೆಯುತ್ತದೆ.
ಗಣೇಶ್ ಅವರಿಗೆ ಪಕ್ಕಾ ಹೊಂದುವಂತ ಕಥೆಯೊಂದನ್ನು ಇಟ್ಟುಕೊಂಡು, “ತ್ರಿಬಲ್ ರೈಡಿಂಗ್’ ಅನ್ನು ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾವಾಗಿ ತೆರೆಮೇಲೆ ತರಲು ಚಿತ್ರತಂಡ ಯಶಸ್ವಿಯಾಗಿದೆ.
ಜಿ.ಎಸ್.ಕಾರ್ತಿಕ ಸುಧನ್