ನವದೆಹಲಿ:ಮುಂಬರುವ 2024ರ ಚುನಾವಣೆಯಲ್ಲಿ ತೃತೀಯರಂಗವನ್ನು ಬಲಪಡಿಸುವ ಯತ್ನ ನಡೆಯುತ್ತಿದೆ ಎಂಬ ಊಹಾಪೋಹದ ನಡುವೆಯೇ ಮಂಗಳವಾರ(ಜೂನ್ 22) ಹಿರಿಯ ರಾಜಕಾರಣಿ ಶರತ್ ಪವಾರ್ ಅವರ ನಿವಾಸದಲ್ಲಿ ನಡೆದ ಸಭೆಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್, ಎಡಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೇರಿದಂತೆ ಎಂಟು ರಾಜಕೀಯ ಪಕ್ಷಗಳು ಹಾಜರಾಗಿದ್ದವು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರತ್ಯೇಕ ಗ್ರಾಮಗಳ ಪುರುಷ ಮತ್ತು ಮಹಿಳೆ ಒಂದೇ ಕಡೆ ವಿಷ ಸೇವನೆ: ಮಹಿಳೆ ಸಾವು
ಕೇಂದ್ರ ಮಾಜಿ ಸಚಿವ ಯಶವಂತ್ ಸಿನ್ಹಾ ಕೂಡಾ ಸಭೆಗೆ ಹಾಜರಾಗಿದ್ದರು. ಪ್ರಸ್ತುತ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಶರದ್ ಪವಾರ್ ಅವರ ಬಳಿ ಸಭೆ ಕರೆಯಲು ತಿಳಿಸಿರುವುದಾಗಿ ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ, ಮಜೀದ್ ಮೆಮೊನ್, ಎನ್ ಸಿಪಿಯ ವಂದನಾ ಚೌಹಾಣ್, ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ, ಸಮಾಜವಾದಿ ಪಕ್ಷದ ಘನಶ್ಯಾಮ್ ತಿವಾರಿ ಮತ್ತು ಆಮ್ ಆದ್ಮಿ ಪಕ್ಷದ ಸುಶೀಲ್ ಗುಪ್ತಾ ಅವರು ಶರದ್ ಪವಾರ್ ನಿವಾಸದಲ್ಲಿ ನಡೆದ ಸಭೆಗೆ ಹಾಜರಾಗಿದ್ದರು.
ಅಷ್ಟೇ ಅಲ್ಲ ನಿವೃತ್ತ ನ್ಯಾಯಮೂರ್ತಿ ಎ.ಪಿ.ಶಾ, ಮಾಜಿ ರಾಯಭಾರಿ ಕೆಸಿ ಸಿಂಗ್, ಗೀತರಚನೆಕಾರ ಜಾವೇದ್ ಅಖ್ತರ್ ಸಭೆಯಲ್ಲಿದ್ದು, ಹಿರಿಯ ವಕೀಲ ಕೆಟಿಎಸ್ ತುಳಸಿ, ಮಾಜಿ ಮುಖ್ಯಚುನಾವಣಾ ಆಯುಕ್ತ ಎಸ್.ವೈ.ಖುರೇಷಿ, ಹಿರಿಯ ವಕೀಲ ಗೊನ್ಸಾಲ್ವೆಸ್ ಸಭೆಗೆ ಗೈರು ಹಾಜರಾಗಿದ್ದರು.