Advertisement
ಐದು ವರ್ಷಗಳ ಹಿಂದೆ ದೇಶದ ಅರ್ಥ ವ್ಯವಸ್ಥೆ 1.85 ಶತಕೋಟಿ ಡಾಲರ್ ಆಗಿ, 11ನೇ ಸ್ಥಾನ ದಲ್ಲಿತ್ತು. ಅದು ಈಗ 2.7 ಶತಕೋಟಿ ಡಾಲರ್‌ಗೆ ಏರಿಕೆಯಾಗಿ, ವಿಶ್ವದ ಆರನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿದೆ. ಇದರ ಜತೆಗೆ ಈ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಭಾರಿ ಪ್ರಮಾಣದ ಸುಧಾರ ಣೆಗಳನ್ನು ಕಾಣುತ್ತಾ ಬಂದಿದೆ. 2024-25ನೇ ಸಾಲಿನಲ್ಲಿ ಐದು ಶತಕೋಟಿ ಡಾಲರ್ ಮೌಲ್ಯದ ಅರ್ಥ ವ್ಯವಸ್ಥೆಯನ್ನು ಹೊಂದಬೇಕಾದರೆ ಬಹು ಹಂತದ ಅರ್ಥ ವ್ಯವಸ್ಥೆಯ ಸುಧಾರಣೆಗಳು ಆಗಬೇಕಾಗಿವೆ.
Related Articles
Advertisement
ಕಠಿಣ ದುಡಿಮೆ: ದೇಶದ ಜನರ ಕಠಿಣ ದುಡಿಮೆಯಿಂದ ಐದು ಶತಕೋಟಿ ಡಾಲರ್ ಮೌಲ್ಯದ ಗುರಿ ಸಾಧಿಸುವ ನಿರೀಕ್ಷೆ ಇದೆ. ಏಕೆಂದರೆ ಅವರಿಗೆ ಜೀವನದಲ್ಲಿ ಅಭಿವೃದ್ಧಿಯಾಗಬೇಕು ಎಂಬ ಹಂಬಲವೂ ಇದೆ. ಅದಕ್ಕೆ ಪೂರಕವಾಗಿ ದೇಶದ ಸಂಸತ್‌ನಲ್ಲಿ ಉತ್ತಮ ನಾಯಕತ್ವವೂ ಇರುವುದರಿಂದ ಅದಕ್ಕೆ ಪೂರಕವಾಗಿ ಇರಲಿದೆ.
ಕೊಡುಗೆ ನೀಡಿವೆ: ಖಾಸಗಿ ವಲಯದಲ್ಲಿರುವ ಸಣ್ಣ, ಮಧ್ಯಮ ಅಥವಾ ಭಾರಿ ಉದ್ದಿಮೆಗಳು ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ. ಅಭಿವೃದ್ಧಿ ಮತ್ತು ಬೆಳವಣಿಗೆ ಎನ್ನುವುದು ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಮತ್ತು ನಂತರದ ವರ್ಷಗಳಲ್ಲಿ ಅವಿಭಾಜ್ಯ ಅಂಗವೇ ಆಗಿದೆ. ಹೀಗಾಗಿ ಸ್ವದೇಶಿ ಎನ್ನುವ ನೀತಿ ಕೈಗಾರಿಕೆಗಳಲ್ಲಿ ಹಾಸುಹೊಕ್ಕಾಗಿದೆ. ಜತೆಗೆ ಮೇಕ್ ಇನ್ ಇಂಡಿಯಾ ಎಂಬ ಸರ್ಕಾರದ ಆಶಯವನ್ನು ಅವುಗಳು ಅರ್ಥೈಸಿಕೊಂಡಿವೆ. ನೀತಿ ಗ್ರಹಣ, ಲೈಸನ್ಸ್ ರಾಜ್, ನಿಯಂತ್ರಣಾತ್ಮಕ ದಿನಗಳು ಕಳೆದಿವೆ. ದೇಶದ ಕೈಗಾರಿಕೋದ್ಯಮವೇ ಈಗ ಉದ್ಯೋಗ ಸೃಷ್ಟಿಯ ಪ್ರಧಾನ ಕ್ಷೇತ್ರವಾಗಿದೆ. ಹೀಗಾಗಿ ಅವುಗಳ ಕೊಡುಗೆ ದೇಶದ ಅರ್ಥ ವ್ಯವಸ್ಥೆ ಮತ್ತು ಕೈಗಾರಿಕೋದ್ಯಮಕ್ಕೆ ಭಾರಿ ಮಹತ್ವದ್ದಾಗಿದೆ.
ಆರ್‌ಬಿಐ ನಿಯಂತ್ರಣಕ್ಕೆ: ಗೃಹ ನಿರ್ಮಾಣ ಕ್ಷೇತ್ರದಲ್ಲಿನ ಹಣಕಾಸು ಹರಿವಿನ ಪ್ರಮಾಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಮಹತ್ವದ ಕ್ರಮ ಘೋಷಿಸಲಾಗಿದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್ (ಎನ್‌ಎಚ್‌ಬಿ) ಈ ಕ್ಷೇತ್ರಕ್ಕೆ ಹಣಕಾಸು ನೀಡುತ್ತಿತ್ತು ಮತ್ತು ಈ ಕ್ಷೇತ್ರ ಹಣಕಾಸು ಪ್ರಕ್ರಿಯೆ ನಿಯಂತ್ರಿಸುತ್ತಿತ್ತು. ಇನ್ನು ಮುಂದೆ ಗೃಹ ನಿರ್ಮಾಣ ಕ್ಷೇತ್ರದ ವಿತ್ತೀಯ ನಿಯಂತ್ರಣವನ್ನು ಆರ್‌ಬಿಐಗೆ ವಹಿಸಿಕೊಳ್ಳಲು ನಿರ್ಧರಿಸಲಾಗಿದೆ.