Advertisement

ಲಕ್ಷ ಲಕ್ಷ ಕೋಟಿ ಲೂಟಿ; ಜನರ ನಂಬಿಕೆ ಕಳೆದುಕೊಂಡ ಕಾಂಗ್ರೆಸ್‌; ಹಾಲಪ್ಪ ಆಚಾರ್‌

06:25 PM Dec 04, 2021 | Team Udayavani |

ಕುಷ್ಟಗಿ: ಕಾಂಗ್ರೆಸ್‌ ಪಕ್ಷ ಲಕ್ಷ ಲಕ್ಷ ಕೋಟಿಗಳಲ್ಲಿ ಲೂಟಿ ಮಾಡಿ, ಜನರ ವಿಶ್ವಾಸ, ನಂಬಿಕೆ ಕಳೆದುಕೊಂಡು ಅಧಿ ಕಾರದಿಂದ ಸಾಕಷ್ಟು ದೂರ ಹೋಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ಇಲ್ಲಿನ ಪಿಸಿಎಚ್‌ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ ರಾಯಚೂರು-ಕೊಪ್ಪಳ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ವಿಶ್ವನಾಥ ಬನಹಟ್ಟಿ ಪರ ಮತಯಾಚಿಸಿ ಮಾತನಾಡಿದರು. ದೇಶದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದೆ. ದೇಶ ಹಾಗೂ ರಾಜ್ಯದಲ್ಲಿ ಅಲ್ಲೊಂದು ಕೆಲಸ, ಇಲ್ಲೊಂದು ಕೆಲಸ ಹೇಳಿಕೊಂಡು ಓಡಾಡಿಕೊಂಡಿರುವ ಕಾಂಗ್ರೆಸ್ಸಿಗರು ಜನರ ವಿಶ್ವಾಸ ಕಳೆದುಕೊಂಡು ಅಶಕ್ತ ಮನಸ್ಥಿತಿಯಲ್ಲಿದ್ದಾರೆ.

ದೊಡ್ಡನಗೌಡ ಪಾಟೀಲ ಅವರು ನಮ್ಮೊಂದಿಗೆ ಶಾಸಕರಾಗಬೇಕಿತ್ತು. ಆದರೆ ಯಾವೂದೋ ಕಾರಣಕ್ಕೆ ಏನೋ ತಪ್ಪಾಗಿದ್ದು, ಆ ತಪ್ಪನ್ನು ಈ ವಿಧಾನ ಪರಿಷತ್‌ ಚುನಾವಣೆಯಲ್ಲಿ ವಿಶ್ವನಾಥ ಬನಹಟ್ಟಿ ಅವರನ್ನು ಬೆಂಬಲಿಸುವ ಮೂಲಕ ಸರಿಪಡಿಸಬೇಕಿದೆ. ಆ ಕೆಲಸ ಈಗಿನಿಂದಲೇ ಶುರುವಾಗಿ 2023ರ ವೇಳೆ ಅತ್ಯಂತ ಹೆಚ್ಚು ಮತಗಳ ಅಂತರದಲ್ಲಿ ದೊಡ್ಡನಗೌಡ ಅವರನ್ನು ಗೆಲ್ಲಿಸಬೇಕು ಎಂದರು.

ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು ಆಡಿದ ಮಾತು ಹುಸಿ ಹೋಗದು, ಅವರ ಮಾತಿನಂತೆ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರ ಗೆಲವು ಹುಸಿ ಹೋಗದು. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಮತ ಹಾಕಿಸಬೇಕು. ಕಾಂಗ್ರೆಸ್‌ ಗೆಲ್ಲಿಸಿದರೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ,  ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಸಜ್ಜನ ವ್ಯಕ್ತಿತ್ವದವರು. ಅದೇ ಎದುರಾಳಿ ಅಭ್ಯರ್ಥಿ ಎದುರು ಬಂದರೆ ಗುರಾಯಿಸುತ್ತಾರೆ. ಅವರು ಬೇರೆ ಕ್ಷೇತ್ರಗಳಿಗೆ ಹೊಸಬರಾಗಿದ್ದರೂ ಕುಷ್ಟಗಿ, ಲಿಂಗಸುಗೂರು ಕ್ಷೇತ್ರಕ್ಕೆ ಹಳಬರು. ಅವರ ವರ್ತನೆ, ದರ್ಪ ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.

Advertisement

ದೇವದುರ್ಗ ಶಾಸಕ ಶಿವನಗೌಡ ನಾಯಕ ಮಾತನಾಡಿ, ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕೆಲಸ, ಅನುದಾನ ಲಭಿಸಬೇಕಾದರೆ ಬಿಜೆಪಿಗೆ ಮತ ಹಾಕಿ, ವಿಶ್ವನಾಥ ಬನಹಟ್ಟಿ ಅವರನ್ನು ಗೆಲ್ಲಿಸಬೇಕೆಂದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿàಕೇರಿ ಮಾತನಾಡಿ, ಬುದ್ಧಿವಂತರು, ಸರಳ ಸಜ್ಜನ ವ್ಯಕ್ತಿಯಾದ ವಿಶ್ವನಾಥ ಬನಹಟ್ಟಿ ಅವರನ್ನು ಗೆಲ್ಲಿಸಬೇಕು ಎಂದರು.

ಅಭ್ಯರ್ಥಿ ವಿಶ್ವನಾಥ ಬನ್ನಟ್ಟಿ, ಮಾಜಿ ಶಾಸಕ ಕೆ. ಶರಣಪ್ಪ, ಈಶಪ್ಪ ಹಿರೇಮನಿ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ವಿಠಪ್ಪ ನಾಗೂರು, ಚಂದ್ರಶೇಖರ ಹಲಗೇರಿ, ಮಲ್ಲಣ್ಣ ಪಲ್ಲೇದ, ಪ್ರಕಾಶ ರಾಠೊಡ, ನವೀನ್‌ ಗುಳಗಣ್ಣನವರ್‌, ಉಮೇಶ ನಾಯಕ್‌, ನಾಗರಾಜ ಮೇಲಿನಮನಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ ಇತರರಿದ್ದರು. ಇದೇ ವೇಳೆ ಜಿಪಂ ಮಾಜಿ ಉಪಾಧ್ಯಕ್ಷೆ ಅನ್ನಪೂರ್ಣ ವಾಲ್ಮೀಕಿ, ಕಂದಕೂರಪ್ಪ ವಾಲ್ಮೀಕಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು ಸ್ವಾಗತಿಸಿದರು. ಚಂದ್ರಕಾಂತ ವಡಿಗೇರಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next