Advertisement

Chandrayaan- 3 ಯೋಜನೆಯಲ್ಲಿ ಪಾಲ್ಗೊಂಡಿದ್ದ ಇಸ್ರೋ ವಿಜ್ಞಾನಿಗೆ ಸನ್ಮಾನ

11:42 AM Aug 29, 2023 | Team Udayavani |

ಗಂಗಾವತಿ: ಮಹತ್ವದ ಚಂದ್ರಯಾನ-3 ಯೋಜನೆಯಲ್ಲಿ ಪಾಲ್ಗೊಂಡಿದ್ದ ಬಾದಾಮಿ ಮೂಲದ ರವಿ ಎಸ್. ಕುಲಕರ್ಣಿ ಅವರನ್ನು ಗಂಗಾವತಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಠದ ವತಿಯಿಂದ ಸನ್ಮಾನಿಸಲಾಯಿತು.

Advertisement

ಈ ಸಂದರ್ಭದಲ್ಲಿ ರವಿ ಎನ್ ಕುಲಕರ್ಣಿ ಮಾತನಾಡಿ, ಚಂದ್ರಯಾನ-3 ಯೋಜನೆ ವಿಶ್ವದಲ್ಲಿ ಅತ್ಯಂತ ಮಹತ್ವ ಪಡೆದ ಯೋಜನೆಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಹಲವು ಕೌತುಕಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ ಚಂದ್ರಯಾನ-3 ಯೋಜನೆ ಅನುಷ್ಠಾನ ಮಾಡಲಾಗಿತ್ತು.

ಒಂದು ಬಾರಿ ವಿಫಲವಾದ ನಂತರ ಇಸ್ರೋದ ಸಮಸ್ತ ವಿಜ್ಞಾನಿಗಳು ಮತ್ತು ನೌಕರವರ್ಗದವರು ಸತತ ಹಗಲು ರಾತ್ರಿ ಕಾರ್ಯ ಮಾಡುವ ಮೂಲಕ ಯಶಸ್ವಿಯಾಗಿ ಚಂದ್ರನಲ್ಲಿ ಇಳಿಸಲಾಗಿದೆ.

ಇದೀಗ ಅಲ್ಲಿಂದ ಹಲವು ಮಾಹಿತಿಗಳು ಇಸ್ರೋಗೆ ಲಭ್ಯವಾಗಿದ್ದು, ಇಂತಹ ಪವಿತ್ರ ಕಾರ್ಯದಲ್ಲಿ ತಾನು ಪಾಲ್ಗೊಂಡಿದ್ದು ಪುಣ್ಯದ ಕೆಲಸವಾಗಿದೆ. ಇದನ್ನು ಗಮನಿಸಿ ಗಂಗಾವತಿಯ ಶ್ರೀ ರಾಘವೇಂದ್ರ ಮಠದ ಭಕ್ತರು ತಮ್ಮನ್ನು ಸನ್ಮಾನಿಸಿರುವುದು ಸಂತೋಷ ತಂದಿದೆ ಎಂದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ವಾಸುದೇವ್ ನವಲಿ, ವಾಮನ್ ರಾವ್ ಮುಕ್ತಿದಾರ, ರಾಮಾಚಾರಿ ಅರ್ಚಕರು, ಶ್ರೀ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ಸಾಮವೇದ ಆಚಾರ್, ರಾಮಕೃಷ್ಣ ಮಸರಕಲ್ ಸರ್, ವಿಜಯ ರಾವ್ ಹೇರೂರು, ಮುಂತಾದ ಭಕ್ತಾದಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next