Advertisement

ಪ್ರಯೋಗ ವಸಂತ-22; ಮಾದರಿಗಳ ಪ್ರದರ್ಶನ

10:25 AM Apr 07, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿ-ಲೈಟ್‌ ಗ್ರಂಥಾಲಯ ಕಟ್ಟಡದಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ಪ್ರದರ್ಶನ ಪ್ರಯೋಗ ವಸಂತ-22 ಬುಧವಾರ ನಡೆಯಿತು.

Advertisement

ಇಂಜಿನಿಯರಿಂಗ್‌ ಮೊದಲ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ಸುಮಾರು 130 ಮಾದರಿಗಳು ಪ್ರದರ್ಶನಕ್ಕಿದ್ದವು. ಪ್ರದರ್ಶನಕ್ಕೆ ಕುಲಪತಿ ಡಾ|ಅಶೋಕ ಶೆಟ್ಟರ ಚಾಲನೆ ನೀಡಿದರು.

ಕ್ರಿಮಿನಾಶಕ ಸಿಂಪರಣೆ ಯಂತ್ರ: ಕೃಷಿ ಕಾರ್ಯಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕ್ರಿಮಿನಾಶಕ ಸಿಂಪರಣೆ ಬೋಟ್‌ನ್ನು ವಿದ್ಯಾರ್ಥಿಗಳಾದ ಆದೇಶ ಕೆಣಿ, ಮೊಹಮ್ಮದ್‌ ರೋಶನ್‌, ವರುಣ ನವಲಿ, ಎಂ.ಜಿ. ವೀರೇಶ ಅವರು ಅಭಿವೃದ್ಧಿಪಡಿಸಿದ್ದು, ಕ್ರಿಮಿನಾಶ ಸಿಂಪರಣೆ ನಾಜಲ್‌ ಸುಮಾರು 180 ಡಿಗ್ರಿ ತಿರುಗಲಿದ್ದು, ಮೊಬೈಲ್‌ ಆ್ಯಪ್‌ ಆಧಾರಿತವಾಗಿ ಇದನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಸುಮಾರು 1,500 ರೂ.ವೆಚ್ಚದಲ್ಲಿ ತಯಾರಿಸಲಾಗಿದ್ದು, ವಾಣಿಜ್ಯ ಬಳಕೆಗೆ ಇದನ್ನು ತಯಾರಿಸುವ ಉದ್ದೇಶ ಹೊಂದಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದರು.

ಕಳೆ ಕೀಳುವ ಯಂತ್ರವನ್ನು ವಿದ್ಯಾರ್ಥಿಗಳಾದ ಕಿಶೋರ ಕುಲಕರ್ಣಿ, ಸುದೀಪ ಹೇಮಾದ್ರಿ, ಪುಟ್ಟರಾಜ ಚಕ್ರಸಾಲಿ, ಪ್ರಸನ್ನ ಮಹಾಲಿಂಗಪುರ ಅಭಿವೃದ್ಧಿ ಪಡಿಸಿದ್ದು, ಹೊಲದಲ್ಲಿ ಕಳೆ ತೆಗೆಯಲು ಸುಲಭವಾಗುವ ರೀತಿಯಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೊಂದು ಪ್ರಾಯೋಗಿಕ ಯತ್ನವಾಗಿದ್ದು, ವಾಣಿಜ್ಯ ರೂಪದಲ್ಲಿ ನೀಡಬೇಕಾದರೆ ತಕ್ಕದಾದ ಬ್ಲೇಡ್‌ ಇನ್ನಿತರೆ ಸಾಮಗ್ರಿ ಬಳಕೆ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಸ್ವಯಂ ಚಾಲಿತ ಮಿಕ್ಸಿಂಗ್‌ ಯಂತ್ರವನ್ನು ವಿದ್ಯಾರ್ಥಿಗಳಾದ ಕಿರಣ ಕುಮಾರ, ದರ್ಶನ್‌, ಆಸೀಫ್‌ ಅಭಿವೃದ್ಧಿಪಡಿಸಿದ್ದು, ವಿವಿಧ ಮಸಾಲೆ ಪದಾರ್ಥಗಳನ್ನು ಸುಲಭವಾಗಿ ಕಲಿಸಲು ಇದು ಸಹಕಾರಿ ಆಗಲಿದೆ. ರಕ್ಷತ್‌, ನೇಹಾ, ಪ್ರಜ್ವಲ್‌, ವಿಜೇತಾ, ಶಶಾಂಕ ಅವರು ಗೃಹ ಉಪಯೋಗಿ ಹಾಸ್ಪಿಟಾಲಿಟಿ ಬೋಟ್‌ ತಯಾರಿಸಿದ್ದು, ಇದರಲ್ಲಿ ನಿತ್ಯ ಬಳಕೆ ಔಷಧ, ಮಾತ್ರೆಗಳನ್ನು ಸುಲಭವಾಗಿ ಸಂಗ್ರಹಿಡುವ ಹಾಗೂ ಸೆನ್ಸರ್‌ ಆಧಾರಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಂಚರಿಸಲಿದ್ದು, ವೃದ್ಧರಿಗೆ ಪ್ರಯೋಜನಕಾರಿ ಆಗಲಿದೆ. ಮಾತ್ರೆ, ಟಾನಿಕ್‌, ವೈದ್ಯಕೀಯ ತಪಾಸಣೆ ಕೆಲ ಸಾಮಗ್ರಿ, ನೀರಿನ ಬಾಟಲ್‌ನ್ನು ಇದರಲ್ಲಿ ಇರಿಸಬಹುದಾಗಿದೆ. ಪ್ರಸ್ತುತ 500 ಗ್ರಾಮ ತೂಕದಷ್ಟು ಇದರಲ್ಲಿ ಇರಿಸಬಹುದಾಗಿದ್ದು, ಬರುವ ದಿನಗಳಲ್ಲಿ 2-3 ಕೆ.ಜಿ.ಯಷ್ಟು ತೂಕ ಸಾಮರ್ಥ್ಯದ ಯಂತ್ರ ಸಿದ್ಧತೆ ಯೋಜನೆ ಇದೆ ಎಂಬುದು ವಿದ್ಯಾರ್ಥಿಗಳ ಅನಿಸಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next