Advertisement
ಅಧ್ಯಯನಕ್ಕೊಳಪಡುವವರಲ್ಲಿ ಬ್ರಿಟನಿನವರನ್ನು ಬ್ರೈಟನ್ ಮತ್ತು ಸಸೆಕ್ಸ್ ಯೂನಿವರ್ಸಿಟಿ ಆಸ್ಪತ್ರೆಗಳಲ್ಲಿ ಹಾಗೂ ಜಾನ್ ರಾಡ್‌ಕ್ಲಿಫ್ ಆಸ್ಪತ್ರೆಯಲ್ಲಿ ಗುರುವಾರದಿಂದ ನೋಂದಾಯಿಸಲಾಗುತ್ತಿದೆ. ಅವರಿಗೆ ಮೂರು ತಿಂಗಳ ಕಾಲ ಹೈಡ್ರೋಕ್ಸಿಕ್ಲೋರೋಕ್ವಿನ್ ಅಥವಾ ಪ್ಲೇಸ್‌ಬೊವೊಂದನ್ನು ನೀಡಲಾಗುವುದು. ಏಶ್ಯದ ತಾಣಗಳಲ್ಲಿ ಅಧ್ಯಯನದಲ್ಲಿ ಪಾಲ್ಗೊಳ್ಳುವವರಿಗೆ ಕ್ಲೋರೋಕ್ವಿನ್ ಅಥವಾ ಪ್ಲೇಸ್‌ಬೋವೊಂದನ್ನು ನೀಡಲಾಗುವುದು. ಬ್ರಿಟನಿನ 25 ತಾಣಗಳಲ್ಲಿ ಇಂಥ ಅಧ್ಯಯನಗಳನ್ನು ನಡೆಸಲು ಉದ್ದೇಶಿಸಲಾಗಿದ್ದು ಈ ವರ್ಷಾಂತ್ಯ ವೇಳೆ ಇದರ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ಕೋವಿಡ್ ರೋಗಿಗಳ ನೇರ ಉಪಚಾರದಲ್ಲಿ ತೊಡಗಿರುವ ಯಾರು ಬೇಕಿದ್ದರೂ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ ಅವರಿಗೆ ಕೋವಿಡ್-19 ಸೋಂಕು ತಗಲಿರಬಾರದು. ವೈರಸ್ ಅಪಾಯ ಎದುರಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಈ ಔಷಧಿ ರಕ್ಷಣೆ ಒದಗಿಸಬಲ್ಲುದೇ ಎಂಬುದು ಇದರಿಂದ ಸ್ಪಷ್ಟವಾಗಲಿದೆ.
“ಕ್ಲೋರೋಕ್ವಿನ್ ಅಥವಾ ಹೈಡ್ರೋಕ್ಸಿಕ್ಲೋರೋಕ್ವಿನ್ ಕೋವಿಡ್-19ರ ವಿರುದ್ಧ ಹೋರಾಟದಲ್ಲಿ ಲಾಭದಾಯಕವೇ ಅಥವಾ ಹಾನಿಕಾರಿಯೇ ಎಂಬುದು ನಮಗೆ ಗೊತ್ತಿಲ್ಲ. ಆದರೆ ಈ ಅಧ್ಯಯನ ಅದನ್ನು ಕಂಡುಕೊಳ್ಳುವುದಕ್ಕೆ ಅತ್ಯುತ್ತಮ ವಿಧಾನ’ ಎಂದು ಅಧ್ಯಯನದ ನೇತೃತ್ವ ವಹಿಸಿರುವ ಪ್ರೊ| ನಿಕೋಲಸ್ ವೈಟ್ ಹೇಳುತ್ತಾರೆ.ಅಧ್ಯಯನದಲ್ಲಿ ಬ್ರಿಟನ್ ಅಲ್ಲದೆ ಥಾಯ್‌ಲ್ಯಾಂಡ್, ವಿಯೆಟ್ನಾಂ ,ಲಾವೋಸ್, ಕಾಂಬೋಡಿಯ ಮತ್ತು ಇಟಲಿಯ ಸಂಶೋಧಕರು ಪಾಲ್ಗೊಂಡಿದ್ದಾರೆ. ವ್ಯಾಪಕವಾಗಿ ಲಭ್ಯವಿರುವ ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಸಿದ್ಧಗೊಳ್ಳಲು ಬಹಳಷ್ಟು ಸಮಯ ಕಾಯಬೇಕಾಗಬಹುದು. ಕ್ಲೋರೊಕ್ವಿನ್ ಮತ್ತು ಹೈಡ್ರೋಕ್ಸಿಕ್ಲೋರೋಕ್ವಿನ್‌ನಂಥ ಮಾತ್ರೆ ಕೋವಿಡ್-19 ಸೋಂಕನ್ನು ತಡೆಗಟ್ಟಬಲ್ಲುದಾದರೆ ಅದು ಅತ್ಯಮೂಲ್ಯವೆನಿಸಲಿದೆ ಎಂದು ಬ್ರೈಟನ್ ಆ್ಯಂಡ್ ಸಸೆಕ್ಸ್ ಮೆಡಿಕಲ್ ಸ್ಕೂಲ್‌ನ ಪ್ರೊ| ಮಾರ್ಟಿನ್ ಲ್ಯೂವ್‌ಲಿನ್ ಹೇಳುತ್ತಾರೆ.
Related Articles
ಕೋವಿಡ್ ಚಿಕಿತ್ಸೆಯಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್ ಲಾಭದಾಯಕವಾಗಬಲ್ಲುದೆಂದು ಟ್ರಂಪ್ ಹೇಳಿದ ಬಳಿಕ ವಿಶ್ವದ ಗಮನ ಅದರತ್ತ ಸೆಳೆದಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಸುರಕ್ಷಿತ ಮತ್ತು ಪರಿಣಾಮಕಾರಿಯೆಂದು ಸಾಬೀತಾಗಿಲ್ಲ ಮತ್ತು ಅದರ ಸೇವನೆಯಿಂದ ಹೃದಯಕ್ಕೆ ಅಪಾಯವುಂಟಾಗಬಹುದೆಂದು ಎಚ್ಚರಿಸಿತ್ತು.
Advertisement