Advertisement
ರಾಜ್ಯದಲ್ಲಿ ಪಿವಿಟಿಜಿ- ಮೂಲನಿವಾಸಿ ಬುಡಕಟ್ಟುಗಳಾದ ಜೇನುಕುರುಬರು ಮತ್ತು ಕೊರಗರ ತಾಯಿ ಭಾಷೆಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈ ಎರಡು ಬುಡಕಟ್ಟುಗಳ ಭಾಷೆಗಳನ್ನು ಅಧ್ಯಯನಕ್ಕೆ ಒಳಪಡಿಸಿ, ಸಂಬಂಧಿಸಿದ ಬುಡಕಟ್ಟು ಮುಂದಾಳುಗಳೊಡನೆ ಚರ್ಚಿಸಿ ಪುಸ್ತಕಗಳನ್ನು ಪ್ರಕಟಿಸಿ, ಆದಿವಾಸಿ ಹಾಡಿಗಳ ಶಾಲೆ ಗಳಲ್ಲಿ ಬಳಸುವ ಯೋಜನೆಗಳನ್ನು ವಿವರಿಸಿದರು. ಜೇನುಕುರುಬ ಸಮುದಾಯದ ಕೆಲವು ಮುಂದಾಳುಗಳು ನಮಗೆ ಕನ್ನಡ, ಇಂಗ್ಲಿಷ್ ಚೆನ್ನಾಗಿ ಕಲಿಸಿದರೆ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆದಿವಾಸಿ ತಾಯಿ ಭಾಷೆಗಳ ಪ್ರಾಮುಖ್ಯತೆ, ಅವರ ಅಸ್ಮಿತೆಯ ಗುಣಲಕ್ಷಣಗಳನ್ನು ರಕ್ಷಿಸಿಕೊಳ್ಳವ ಹೊಣೆಗಾರಿಕೆ, ಶಿಶು ಪಾಲನಾ ಕೇಂದ್ರಗಳಲ್ಲಿ ಮಕ್ಕಳು ಖುಷಿಯಿಂದ ಕಲಿಯಲು ಪಾರಂಪರಿಕ ಜ್ಞಾನ ಮತ್ತು ಬುದ್ದಿವಂತಿಕೆಯನ್ನು ಅನುಭವದ ಹಿನ್ನೆಲೆಯಲ್ಲಿ ಸುಲಭವಾಗಿ ಗ್ರಹಿಸಲು ತಾಯಿ ಭಾಷೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಕಿರಿಯ ಪ್ರಾರ್ಥಮಿಕ ಶಾಲೆಗಳಲ್ಲಿ ಕನ್ನಡದ ಜೊತೆ ಆದಿವಾಸಿ ತಾಯಿ ಭಾಷೆಗಳನ್ನು ಜೊತೆಯಾಗಿ ಕಲಿಸಿ ನಂತರ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಸುಲಭವಾಗಿ ತೆರಳಲು ಅವಕಾಶ ಸೃಷ್ಟಿಸಲಾಗುವುದು. ತಾಯಿ ಭಾಷೆಗೆ ಗಮನಹರಿಸುವುದು ಬೇಡ ಎಂಬುದು ಸರಿಯಾದ ನಿರ್ಧಾರವಲ್ಲ. ಇದನ್ನು ವಿಸ್ತೃತವಾಗಿ ಚರ್ಚಿಸಲು ಆಯ್ದ 10 ಜೇನುಕುರುಬರ ಹಿರಿ ಯರು, ಮಹಿಳೆಯರು ಮತ್ತು ಯುವ ಜನರನ್ನು ಕರೆದು ಚರ್ಚಿಸಲು ತೀರ್ಮಾನಿಸಲಾಯಿತು. ಅಂತೆಯೇ ಜೇನುಕುರುಬರ ಕ್ಷೇಮಾಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಸಮಗ್ರ ಚರ್ಚೆಗೆ ಹಾಗೂ ಆದಿವಾಸಿ ಪ್ರದೇಶಗಳನ್ನು ಅನುಸೂಚಿತ ಪ್ರದೇಶಗಳೆಂದು ಘೋಷಿಸಲು ಸೂಕ್ತ ಶಿಫಾರಸ್ಸು ನೀಡಲು ಒಂದು ಕಾರ್ಯಗಾರವನ್ನು ಟಿಆರ್‌ಐ ಮತ್ತು ಡೀಡ್ ಸಂಸ್ಥೆಗಳು ಜಂಟಿಆದಿವಾಸಿ ಹಾಡಿಯಾಗಿ ನಡೆಸಲು ನಿರ್ಧರಿಸಿ ದಿನಾಂಕವನ್ನು ಸದ್ಯದಲ್ಲೆ ಪ್ರಕಟಿಸಲಾಗುವುದು ಎಂದರು.
Advertisement
ಆದಿವಾಸಿ ಹಾಡಿಗೆ ಟಿಆರ್‌ಐ ಮುಖ್ಯಸ್ಥ ಡಾ.ಶ್ರೀನಿವಾಸ್ ಭೇಟಿ
01:09 PM May 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.