ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ರಾಮ್‌ಬಾಗ್ ಪ್ರದೇಶದಲ್ಲಿ ಬುಧವಾರ ನಡೆದ ಶೂಟೌಟ್‌ನಲ್ಲಿ ಟಿಆರ್‌ಎಫ್ (ದಿ ರೆಸಿಸ್ಟೆಂಟ್ ಫ್ರಂಟ್) ಕಮಾಂಡರ್ ಸಹಿತ ಮೂವರು ಉಗ್ರರನ್ನು ಪೊಲೀಸರು ಹತ್ಯೆಗೈದಿದ್ದಾರೆ.
ಈ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಟಿಆರ್‌ಎಫ್ ಕಮಾಂಡರ್‌ನನ್ನು 19 ವರ್ಷದ ಮೆಹ್ರಾನ್ ಯಾಸಿನ್ ಶಾಲಾ ಎಂದು ಗುರುತಿಸಲಾಗಿದೆ.
ಆತ ಕಳೆದ ತಿಂಗಳು ನಾಗರಿಕರನ್ನು ಗುರಿಯಾಗಿಸಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಮತ್ತಿಬ್ಬರನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ನಿವಾಸಿಗಳಾದ ಮನ್ಸೂರ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ
ಶ್ರೀನಗರ ನಿವಾಸಿಯಾಗಿರುವ ಮೆಹ್ರಾನ್ ಈ ವರ್ಷದ ಜೂನ್ ನಲ್ಲಿ ಟಿಆರ್‌ಎಫ್ ಗೆ ಸೇರ್ಪಡೆಯಾಗಿದ್ದ. ಕಳೆದ ತಿಂಗಳು ಫಾರ್ಮಾಸಿಸ್ಟ್ ಮಖನ್ ಲಾಲ್ ಬಿಂದ್ರೂ ಮತ್ತು ಇಬ್ಬರು ಶಾಲಾ ಶಿಕ್ಷಕರ ಕೊಲೆಯಲ್ಲಿ ಈತನ ಪಾತ್ರವಿತ್ತು ಎಂದು ಕಾಶ್ಮೀರ ಐಜಿಪಿ ವಿಜಯ್‌ಕುಮಾರ್ ಅವರು ಹೇಳಿದ್ದಾರೆ.