Advertisement
ಅವುಗಳಲ್ಲಿ ಮೊದಲನೆಯದಾಗಿ ಶೂಗಳು. ಶೂಗಳು ಬಹಳ ಹಿಂದಿನಿಂದ ಬಳಕೆಯಲ್ಲಿದ್ದು ಈಗಲೂ ನವ ವಿನೂತನ ಮಾದರಿಗಳೊಂದಿಗೆ ಎವರ್‌ಗ್ರೀನ್ ಸ್ಟೈಲ್ ಆಗಿದೆ.
ಹೆಸರೇ ಹೇಳುವಂತೆ ಇವು ಲೇಸ್ ಫ್ಯಾಬ್ರಿಕ್‌ನಿಂದ ತಯಾರಿಸಲ್ಪಡುತ್ತವೆ. ಲೇಸುಗಳಲ್ಲಿ ಹಲವು ಟೆಕ್ಷರಿನ ಡಿಸೈನಗಳು ದೊರೆಯುತ್ತಿದ್ದು ಹಲವು ಕಲರ್ ಆಯ್ಕೆಗಳಿರುತ್ತವೆ. ಇವುಗಳಲ್ಲಿ ಹೀಲ್ಸ್ ಶೂಗಳು ಮತ್ತು ಫ್ಲಾ$Âಟ… ಶೂಗಳೂ ದೊರೆಯುತ್ತವೆ. ಕೆನ್ವಾಸ್ ಶೂಗಳು
ಇವುಗಳೂ ಎವರ್‌ಗ್ರೀನ್ ಟ್ರೆಂಡಿ ಶೂಗಳು. ಇವುಗಳ ಡೆನಿಮ… ಬಟ್ಟೆಗಳಿಗೆ ಹೋಲುವಂತಹ ಬಟ್ಟೆಯಿಂದ ತಯಾರಿಸಲ್ಪಡುತ್ತವೆ. ಬಾಳಿಕೆ ಬರುವಂತಹ ಶೂಗಳಾಗಿದ್ದು ನೀರು ಮತ್ತು ಧೂಳುಗಳಿಂದ ಹೆಚ್ಚು ಮಾಸದೆ ತನ್ನ ಹೊಸತನವನ್ನು ಕಾಪಾಡಿಕೊಳ್ಳುವಂತದ್ದಾಗಿದೆ. ಇವುಗಳಲ್ಲಿ ಹಲವು ಬಣ್ಣಗಳು ಮತ್ತು ಪ್ರಿಂಟೆಡ್ ಶೂಗಳು ಲಭ್ಯವಿರುತ್ತವೆ. ಟೀನೇಜರ್ಸ್ ಹೆಚ್ಚು ಇಷ್ಟಪಡುವಂತದ್ದಾಗಿದೆ.
Related Articles
ಇವುಗಳು ಸಾಮಾನ್ಯವಾಗಿ ಆ್ಯಂಕಲ್‌ಗಿಂತ ಮೇಲೆ ಬರುವಂತಹ ಮಾದರಿಗಳು. ಹಾಗಾಗಿ ಚಳಿಗೆ ಹೆಚ್ಚು ಸೂಕ್ತ. ಇವುಗಳು ಸ್ವಲ್ಪ$ ದಪ್ಪವಾದ ಮೆಟೀರಿಯಲ್ಲುಗಳಿಂದ ತಯಾರಿಸಲ್ಪಟ್ಟಿರುತ್ತವೆ. ಇದೇ ಶೈಲಿಯಲ್ಲಿ ಫರ್ ಕ್ಲಾತ್‌ನಿಂದ ತಯಾರಿಸಿದ ಬೂಟುಗಳೂ ದೊರೆಯುತ್ತವೆ. ಹೆಚ್ಚಾಗಿ ಮಿನಿ ಸ್ಕರ್ಟುಗಳು ಅಥವಾ ತ್ರೀ ಫೋರ್ತುಗಳಿಗೆ ಹೊಂದುತ್ತವೆ. ಬಹಳ ಸ್ಟೈಲಿಶ್ ಆಗಿ ಕಾಣುವಂತಹ ಶೂಗಳಿವಾಗಿವೆ.
Advertisement
ಕಿಟ್ಟನ್ ಹೀಲ್ಸುಗಳುಇವು ಸೆಮಿ ಫಾರ್ಮಲ್ ಮತ್ತು ಸೆಮಿ ಪಾರ್ಟಿವೇರ್ ಶೂಗಳಾಗಿವೆ. ಇವುಗಳು ಪಾದಕ್ಕೆ ಒಳ್ಳೆಯ ಶೇಪನ್ನು ನೀಡುವಂತಹವುಗಳಾಗಿವೆ. ಇವು ಸಾಮಾನ್ಯವಾಗಿ ಹೀಲ್ಸುಗಳಾಗಿದ್ದು ಬಹಳ ಸ್ಟೈಲಿಶ್ ಆದ ಬಗೆಯಾಗಿವೆ. ಟಿಪ್‌ಟೊ ಸ್ಯಾಂಡಲ್‌ಗಳು
ಈ ಬಗೆಯ ಶೂಗಳು ತುದಿಯಲ್ಲಿ ಶಾರ್ಪ್ ಆಗಿರುತ್ತವೆ. ಇವು ಸಾಮಾನ್ಯವಾಗಿ ಮ್ಯಾಟ್ ಫಿನಿಷಿಂಗ್ ಇರುವಂತಹ ಮೆಟೀರಿಯಲ್ಲುಗಳಿಂದ ತಯಾರಾಗಿರುತ್ತವೆ. ಕ್ಯಾಷುವಲ್ ವೇರಾಗಿ ಚೆಂದವಾಗಿ ಕಾಣುತ್ತವೆ. ಗ್ಲ್ಯಾಡಯೇಟರ್‌ಗಳು
ಇವುಗಳು ಉದ್ದವಾದ ಶೂಗಳು. ಇವು ಎಲ್ಲಾ ಸೀಸನ್ನುಗಳಿಗೆ ಎಲ್ಲಾ ಸಂದರ್ಭಗಳಿಗೂ ಹೊಂದುವಂತಹ ಬಗೆಗಳಾಗಿವೆ. ಇವುಗಳು ಶಾರ್ಟ್ ಡ್ರೆಸ್ಸುಗಳಿಗೆ ಅಥವಾ ತ್ರಿಫೋರ್ತುಗಳಿಗೆ ಹೊಂದುತ್ತವೆ. ಇವುಗಳಲ್ಲಿ ಹೀಲ್ಡ್ ಅಥವಾ ಫ್ಲಾ$Âಟ… ಆಯ್ಕೆಗಳು ದೊರೆಯುತ್ತವೆ. ಇವುಗಳು ಹಲವು ಡಿಸೈನುಗಳಲ್ಲೂ, ಹಲವು ಬಣ್ಣಗಳಲ್ಲಿಯೂ ದೊರೆಯುತ್ತವೆ. ಬ್ಯಾಲಿ ಶೂಗಳು: ಇವು ಹೀಲ್ಡ್ ಶೂಗಳು. ಸದ್ಯದ ಫ್ಯಾಷನ್ ರೇಸಿನಲ್ಲಿ ಮುಂಚೂಣಿಯಲ್ಲಿರುವ ಇವುಗಳು ನೋಡಲು ಬಹಳ ಸುಂದರವಾಗಿರುತ್ತವೆ. ಆದರೆ ಪಾಯಿಂಟೆಡ್ ಹೀಲ್ಸುಗಳಾಗಿರುವುದರಿಂದ ಧರಿಸಿ ಅಭ್ಯಾಸವಿರುವುದು ಮುಖ್ಯವಾಗಿರುತ್ತದೆ. ಬೇಕಾದ ಬಣ್ಣಗಳಲ್ಲಿ ದೊರೆಯುತ್ತವೆ. ಇನ್ನು ಎರಡನೆಯ ಬಗೆಯಾದ ಹೀಲ್ಸುಗಳು. ಇವುಗಳು ಬಹಳ ಮಂದಿ ಇಷ್ಟಪಡುವಂತಹ ಸ್ಯಾಂಡಲ್ಲುಗಳಾಗಿವೆ. ಆದರೆ ದೇಹದ ಆರೋಗ್ಯವನ್ನು ಪರಿಗಣಿಸುವುದಾದರೆ ಇವು ಅಷ್ಟೊಂದು ಸೂಕ್ತವಾದುದಲ್ಲ. ಆದರೆ ಫ್ಯಾಷನ್ ಲೋಕದಲ್ಲಿ ಟ್ರೆಂಡಿಯಾಗಿ ಕಾಣಲು ಅಪರೂಪಕ್ಕೆ ಧರಿಸಲು ಸೂಕ್ತ. ಇವುಗಳು ಹೈಹೀಲ್ಡ…, ಮಿಡಲ್ ಮತ್ತು ಲೋ ಹೀಲ್ಡ್ ಗಳೆಂಬ ಮೂರು ಬಗೆಗಳಲ್ಲಿ ದೊರೆಯುತ್ತವೆ. ಅವರವರ ಅನುಕೂಲಕ್ಕೆ ತಕ್ಕಂತಹ ಆಯ್ಕೆಗೆ ಅವಕಾಶಗಳಿವೆ. ಹೀಲ್ಡ… ಶೂಗಳು: ಕಿಟ್ಟನ್ ಶೂಗಳು, ಪಂಪ್ ಶೂಗಳು, ಆ್ಯಂಕಲ್ ಬೂಟ್‌ಗಳು ಇತ್ಯಾದಿಗಳು ಹೀಲ್ಸ್ ಶೂಗಳಾಗಿ ಕಾಣಸಿಗುತ್ತವೆ. ಇವುಗಳಲ್ಲಿ ಮತ್ತೆ ಬೇರೆ ಬೇರೆ ಹೈಟ್ ಆಯ್ಕೆಗಳು ಲಭಿಸುತ್ತವೆ. ಆ್ಯಂಕಲ್ ಸ್ಟ್ರಾಪ್ ಹೀಲ್ಸ್: ಇವುಗಳು ಹೆಸರಿಗೆ ತಕ್ಕಂತೆ ಆ್ಯಂಕಲ್‌ನಲ್ಲಿ ಪಟ್ಟಿಬಂದು ಹೀಲ್ಸಿಗೆ ಒಳ್ಳೆಯ ಗ್ರಿಪ್ಪನ್ನು ಕೊಡುತ್ತವೆ. ನೋಡಲು ಬಹಳ ಸ್ಟೈಲಿಶ್ ಆಗಿರುತ್ತವೆ. ಮತ್ತು ಎಲ್ಲಾ ಬಗೆಯ ದಿರಿಸುಗಳಿಗೂ ಸರಿಹೊಂದುವಂಥವುಗಳಾಗಿವೆ. ವೆvj… ಹೀಲ್ಸ್: ಇವುಗಳು ವೆvj… ಸ್ಯಾಂಡಲ್ ಮತ್ತು ವೆvj… ಶೂ ಗಳೆಂಬ ಎರಡು ಬಗೆಗಳಲ್ಲಿ ದೊರೆಯುತ್ತವೆ. ಹೆಸರೇ ಹೇಳುವಂತೆ ಅಗಲವಾದ ಹೀಲ್ಡ… ತಳವಿದ್ದು ಧರಿಸಲು ಆರಾಮದಾಯಕವಾಗಿರುತ್ತವೆ. ತಳಭಾಗವು ಒಳ್ಳೆಯ ಗ್ರಿಪ್ ನೀಡುವುದರಿಂದ ಇವುಗಳನ್ನು ಧರಿಸಲು ವಿಶೇಷವಾದ ಅಭ್ಯಾಸ ಬೇಕಾಗಿರುವುದಿಲ್ಲ. ವೆvj… ಶೂಗಳು ಕವರ್ಡ್ ಆಗಿದ್ದರೆ, ವೆvj… ಸ್ಯಾಂಡಲ್ಸ್ ಮೇಲ್ಭಾಗ ಸ್ಲಿಪ್ಪರಿನ ಮಾದರಿಯಲ್ಲಿರುತ್ತವೆ. ಕೋನ್ ಹೀಲ್ಸ್: ತಳಭಾಗದ ಹೀಲ್ಸ್ ಕೋನ್ ಆಕೃತಿಯಲ್ಲಿರುತ್ತವೆ. ಪಾಯಿಂಟೆಡ್ ಹೀಲ್ಸಿನಂತಿರುತ್ತವೆ. ವಿಧವಾದ ಬಣ್ಣಗಳ ಆಯ್ಕೆ ಮತ್ತು ವಿಧ ವಿಧವಾದ ಮಾದರಿಗಳಲ್ಲಿ ದೊರೆಯುತ್ತವೆ. ಉದಾಹರಣೆಗೆ ಬ್ಯಾಕ್‌ಸ್ಲಿಂಗ್ ಮಾದರಿ. ಎಂದರೆ ಹಿಮ್ಮಡಿಯ ಬಳಿ ಗ್ರಿಪ್ಪಿಗೆ ಪಟ್ಟಿ ಬಂದಿರುವ ಕೋನ್ ಹೀಲ್ಸ್‌ಗಳು ಕೂಡ ದೊರೆಯುತ್ತವೆ. ಫ್ಯಾಂಟಸಿ ಹೀಲ್ಸ್: ಇತ್ತೀಚೆಗೆ ಟ್ರೆಂಡಿ ಹೀಲ್ಸ್ ಎನಿಸಿರುವಂಥವು ಗಳಿವು. ಚಿತ್ರ ವಿಚಿತ್ರವಾದ ಆಕೃತಿಗಳಲ್ಲಿ ಬರುವ ಇವುಗಳು ಕ್ರೇಸಿ ಲುಕ್ಕನ್ನು ಕೊಡುತ್ತವೆ. ಕೆಲವು ವಸ್ತುಗಳನ್ನು ಹೋಲುವ ಕೆಲವು ಕ್ಯಾರೆಕ್ಟರ್‌ಗಳನ್ನು ಹೋಲುವಂತಹ ಕ್ರೇಸಿ ಡಿಸೈನುಗಳಿಂದ ತಯಾರಿಸಲ್ಪಡುವ ಇವುಗಳು ಆಕರ್ಷಕ ಮತ್ತು ಹೊಸ ಬಗೆಯ ಸ್ಟೈಲ… ಸ್ಟೇಟೆಟನ್ನು ಸೃಷ್ಟಿಸಬಲ್ಲವಾಗಿವೆ.
ಇಷ್ಟೇ ಅಲ್ಲದೆ ಇನ್ನು ಹಲವು ಬಗೆಯ ಶೂಗಳು ಮಾರ್ಕೆಟ್ಟಿಗೆ ಬಂದಿರುತ್ತವೆ. ಉದಾಹರಣೆಗೆ ಚಂಕಿ ಹೀಲ್ಸ್, ಫ್ರೆಂಚ್ ಹೀಲ್ಸ್, ಕಾರ್ಸೆಟ್ ಹೀಲ್ಸ್, ಕಟ್ ಔಟ್ ಹೀಲ್ಸ್ ಇತ್ಯಾದಿಗಳು. ಇನ್ನು ಮೂರನೆಯ ಬಗೆಯಾದ ಸ್ಲಿಪ್ಪರುಗಳು, ಇವುಗಳಲ್ಲಿ ಹೆಚ್ಚಿನ ವಿಶೇಷತೆಯಿರುವುದಿಲ್ಲವಾದರೂ ಕ್ಯಾಷುವಲ್ ವೇರ್‌ಗೆ ಹೆಚ್ಚು ಸೂಕ್ತವೆನಿಸುವ ಬಗೆಗಳಿವಾಗಿವೆ. ಸರಳತೆಯನ್ನು ಇಷ್ಟಪಡುವಂತವರು ಇವನ್ನು ಬಳಸಬಹುದಾಗಿದೆ. ಇವುಗಳೂ ಸಹ ಇಂದು ಒಂದಕ್ಕಿಂತ ಒಂದು ಚಂದ ಎಂಬ ರೀತಿಯಲ್ಲಿ ಬಣ್ಣ ಬಣ್ಣಗಳಲ್ಲಿ ಮತ್ತು ಮಾದರಿಗಳಲ್ಲಿ ದೊರೆಯುತ್ತವೆ. ಇವುಗಳಲ್ಲೂ ಪ್ಲಾಟ್ ಹೀಲ್ಸ್, ಸ್ವಲ್ಪವೇ ಹೀಲ್ಸ್ ಇರುವಂತವು, ಲೈಟ್ ವೈಟ್ ಮೊದಲಾದವುಗಳು ದೊರೆಯುತ್ತವೆ.ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಬಗೆಗಳನ್ನು ನೀವು ಪ್ರಯೋಗಿಸಿ ನೋಡಿ ಮತ್ತು ನಿಮ್ಮದೇ ಆದ ಸ್ಟೈಲ್ ಟ್ರೆಂಡನ್ನು ರಚಿಸಿಕೊಳ್ಳಿ. ಪ್ರಭಾ ಭಟ್