Advertisement

ಕಡಿಯಬೇಕಾಗಿದ್ದ ಮರ ಬುಡ ಸಮೇತ ಸ್ಥಳಾಂತರ

02:44 PM Aug 07, 2018 | Team Udayavani |

ಮಂಗಳೂರು: ನಗರದ ಲೇಡಿಹಿಲ್‌ನ ರಸ್ತೆ ತಿರುವಿನಲ್ಲಿದ್ದ ಮರವೊಂದನ್ನು ಬುಡಸಮೇತ ಬೇರೆಡೆಗೆ ಸ್ಥಳಾಂತರಗೊಳಿಸಿ ಪರಿಸರ ಪ್ರೀತಿ ಮೆರೆಯಲಾಗಿದೆ. ಲೇಡಿಹಿಲ್‌ ಬಳಿ ಚಿಲಿಂಬಿಗೆ ತಿರುಗುವ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ “ಪೆಲ್ಟೋಫೋರಂ’ ಜಾತಿಗೆ ಸೇರಿದ ಮರವನ್ನು ಕಡಿಯಲು ಮಹಾನಗರ ಪಾಲಿಕೆ ನಿರ್ಧರಿಸಿತ್ತು.
ಆದರೆ ಇದಕ್ಕೆ ಸ್ಥಳೀಯರಿಂದ ಹಾಗೂ ಎನ್‌ಇಸಿಎಫ್‌ ಪರಿಸರ ಪರ ಸಂಘಟನೆ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಮರ ಕಡಿಯುವ ನಿರ್ಧಾರವನ್ನು ಕೈಬಿಟ್ಟು ಅದನ್ನು ಬುಡಸಮೇತ ಜೀವಂತವಾಗಿ ಇನ್ನೊಂದಡೆಗೆ ಸ್ಥಳಾಂತರಿಸಲು ನಿರ್ಧರಿಸಿತು.

Advertisement

ಸೋಮವಾರ ಪಾಲಿಕೆ ಸಿಬಂದಿ ಕಾರ್ಯಾಚರಣೆ ನಡೆಸಿ ಕ್ರೇನ್‌ ಮೂಲಕ ಮರವನ್ನು ಪಕ್ಕದ ಖಾಲಿ ಜಾಗಕ್ಕೆ ಸ್ಥಳಾಂತರಿಸಿ ನೆಡಲಾಯಿತು. ಪಾಲಿಕೆಯ ಅಧಿಕಾರಿಗಳು, ಎನ್‌ಇಸಿಎಫ್‌ನ ಕಾರ್ಯಕರ್ತರಾದ ಶಶಿಧರ ಶೆಟ್ಟಿ , ಜೀತ್‌ ಮಿಲನ್‌, ರೋಹನ್‌ ಸಿರಿ ಮತ್ತಿತರರು ಈ ವೇಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next