Advertisement

ವಿದ್ಯುತ್‌ ಪರಿವರ್ತಕ ಸ್ಥಾಪನೆಗೆ ಮರ ಅಡ್ಡಿ

02:00 AM Sep 18, 2018 | Team Udayavani |

ಕಾರ್ಕಳ : ತಾಲೂಕಿನ ಹಾಳೆಕಟ್ಟೆಗೆ 62 ಕಿ.ವಾ. ಸಾಮರ್ಥ್ಯದ ಹೊಸ ವಿದ್ಯುತ್‌ ಪರಿವರ್ತಕ ಮಂಜೂರಾಗಿದ್ದರೂ ಅದನ್ನು ಸ್ಥಾಪಿಸಲು ಸರಿಯಾದ ಸ್ಥಳವಕಾಶ ಇಲ್ಲದೆ ಸಮಸ್ಯೆಯಾಗಿದೆ. ಪಂಚಾಯತ್‌ ಕಚೇರಿ, ಗ್ರಾಮ ಕರಣಿಕರ ಕಚೇರಿ, ಹಾಲಿನ ಡಿಪೊ, ಬ್ಯಾಂಕ್‌, ಶಾಲೆಗಳು, ಶಿಶು ಮಂದಿರ, ಪ್ರಾಥಮಿಕ ಚಿಕಿತ್ಸಾ ಕೇಂದ್ರ , ಪಡಿತರ ಅಂಗಡಿ ಸೇರಿದಂತೆ ಹಲವು ಸರಕಾರಿ ಸಂಸ್ಥಾಪನೆಗಳು ಇರುವ ಹಾಳೆಕಟ್ಟೆಗೆ ಹೆಚ್ಚು ಸಾಮರ್ಥ್ಯದ ವಿದ್ಯುತ್‌  ಪರಿವರ್ತಕದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ಪ್ರತಿಸ್ಪಂದಿಸಿ ವಿದ್ಯುತ್‌ ಮಂಡಳಿ ಹೊಸ ಪರಿವರ್ತಕವನ್ನು ಮಂಜೂರು ಮಾಡಿದೆ. 

Advertisement

ಪ್ರಸ್ತುತ ಹಾಲಿನ ಡಿಪೊದ ಪಕ್ಕದಲ್ಲಿರುವ ಓಣಿಯಲ್ಲಿ ಚಿಕ್ಕ ಪರಿವರ್ತಕ ಇದೆ. ಹೊಸ ಪರಿವರ್ತಕ ಸ್ಥಾಪಿಸಲು ಡಿಪೊದ ಎದುರು ಜಾಗ ಇದ್ದರೂ ಇಲ್ಲಿರುವ ಎರಡು ಮರಗಳು ಅಡ್ಡಿಯಾಗಿವೆ. ಈ ಮರಗಳನ್ನು ತೆರವುಗೊಳಿಸಿದರೆ ವಿದ್ಯುತ್‌ ಪರಿವರ್ತಕ ಸ್ಥಾಪಿಸಲು ಯಾವುದೇ ಸಮಸ್ಯೆಯಿಲ್ಲ. ಈ ಕುರಿತು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರತಿಸ್ಪಂದನ ವ್ಯಕ್ತವಾಗದ ಕಾರಣ ಪರಿವರ್ತಕ ಅಳವಡಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಅರಣ್ಯ ಇಲಾಖೆ ಶೀಘ್ರವಾಗಿ ಈ ಮರಗಳನ್ನು ಕಡಿಯಲು ಅನುಮತಿ ಕೊಡಬೇಕೆಂದು ಪಂಚಾಯತ್‌ ಸದಸ್ಯರೂ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next