ಆದರೆ ಇಲ್ಲೊಬ್ಬರು ತಾನೆ ಬೆಳೆಸಿದ ಕಾಡಿನ ನಡುವೆ ಮರದ ಮೇಲೆಯೇ ಮನೆಯ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಪರಿಸರ ವೀಕ್ಷಣೆಯಲ್ಲಿ ಸಂಭ್ರಮ ಪಡುತ್ತಿದ್ದಾರೆ.
Advertisement
ಅವರು ಬೇರಾರೂ ಅಲ್ಲ…ಉಪನ್ಯಾಸಕ ,ಸಂಶೋಧಕ,ಕೃಷಿಕರಿಗಾಗಿಯೇ ಕೃಷಿ ಡೈರಿ ರೂಪಿಸಿದ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ನಡುಮನೆಯ ವಿವೇಕ್ ಆಳ್ವ ಅವರು.
Related Articles
Advertisement
ಇದು ಸಾಮಾಜಿಕ ದೂರ ಮತ್ತು ಬಹಳಷ್ಟು ಜೊತೆಗೆ ಅದ್ಭುತ ಅನುಭವವನ್ನು ನೀಡುತ್ತದೆ ಎನ್ನುತ್ತಾರೆ ವಿವೇಕ್ ಆಳ್ವ.ಈ ಮರದ ಮೇಲಿನ ಗುಡಿಸಲಿನಲ್ಲಿ ಹಾಯಾಗಿ ಹಕ್ಕಿಗಳ ಚಿಲಿಪಿಲಿ,ಪುಸ್ತಕ ಓದುವುದು.ಏಕಾಂತದಲ್ಲಿ ಸಂಗೀತ ಕೇಳುವುದು, ತಂಪಾದ ಗಾಳಿಯೊಂದಿಗೆ ಪ್ರಕೃತಿ ವೀಕ್ಷಣೆ ಮಾಡಬಹುದು. ಈ ಗುಡಿಸಲಿನ ಸುತ್ತ ಬಿಸಿಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಶಾಡೋ ನೆಟ್ ಹಾಕಲಾಗಿದೆ.ನಿಮಗೂ ಇವರ ಈ ಕಾರ್ಯವನ್ನು ನೋಡಬೇಕಾದರೆ ಲಾಕ್‌ಡೌನ್ ಅವಧಿ ಮುಗಿಯಲೇ ಬೇಕು. – ಪ್ರವೀಣ್ ಚೆನ್ನಾವರ