Advertisement

ಮಿಂಟೋದಲ್ಲಿ 500 ಮಂದಿಗೆ ಚಿಕಿತ್ಸೆ

11:43 AM Oct 21, 2017 | Team Udayavani |

ಬೆಂಗಳೂರು: ಕಳೆದ ಹತ್ತುವರ್ಷಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡವರ ಸಂಖ್ಯೆ ಶುಕ್ರವಾರಕ್ಕೆ ಬರೋಬ್ಬರಿ 502ಕ್ಕೇರಿದೆ. ಇದಲ್ಲದೆ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿಯೂ ನೂರಾರು ಮಂದಿ  ಚಿಕಿತ್ಸೆ ಪಡೆದುಕೊಂಡಿದ್ದಾರೆ. 

Advertisement

ಹತ್ತುವರ್ಷಗಳ ಅವಧಿಯಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಅವಘಡಗಳಿಂದ ಗಾಯಗೊಂಡ ಮಕ್ಕಳು, ವಯಸ್ಕರ ಪೈಕಿ ಹಲವು ಮಂದಿ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡವರಿದ್ದಾರೆ. ಪಟಾಕಿ ದುರಂತಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದರೂ ಈ ವರ್ಷವೂ 17 ಮಂದಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪಟಾಕಿ ಸಿಡಿಸಿದವರಷ್ಟೇ ಅಲ್ಲದೆ ಅಕ್ಕ-ಪಕ್ಕ ನಿಂತವರು, ರಸ್ತೆಯಲ್ಲಿ ನಡೆದು ಹೋಗುವವರು ಸಹ ದೊಡ್ಡ ಪ್ರಮಾಣದಲ್ಲಿ ಗಾಯಾಳುಗಳಾಗುತ್ತಿದ್ದಾರೆ. ಹೀಗಾಗಿ ಸಾಧ್ಯವಾದಷ್ಟು ಪಟಾಕಿ ಹೊಡೆಯುವುದು ಕಡಿಮೆ ಮಾಡಬೇಕು. ಮಕ್ಕಳ ಕೈಗೆ ಪಟಾಕಿ ನೀಡಬಾರದು. ಪಟಾಕಿ ಸಿಡಿತ ಸಂದರ್ಭದಲ್ಲಿ ದೊಡ್ಡವರು ಜೊತೆಯಲ್ಲಿರಬೇಕು. ಪೋಷಕರು ಎಚ್ಚರಿಕೆ ವಹಿಸಿದರೇ ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಕಡಿಮೆಯಾಗಲಿದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕ ಸತೀಶ್‌ ತಿಳಿಸಿದರು.

(2008ರಿಂದ ಚಿಕಿತ್ಸೆ ಪಡೆದವರ ಅಂಕಿ ಸಂಖ್ಯೆ)
ವರ್ಷ  ಗಂಡುಮಕ್ಕಳು  ಹೆಣ್ಣು ಮಕ್ಕಳು  ಪುರುಷರು ಮಹಿಳೆಯರು  ಒಟ್ಟು 
-2008    23                  6                 23             5             57 
-2009     28                  4                24             1              57 
-2010    25                    9                24             3               61 
-2011     27                   7               26            3               63 
-2012     14                   6                25            2              47 
-2013     23                   1                29            8               61
-2014    25                   6                29            5               65 
-2015     17                 2                  12             1              32 
-2016      15               3                   12            3              33 
-2017 (ಅ.20)   ವಯಸ್ಕರು ಮಕ್ಕಳು ಸೇರಿ 7 ಮಂದಿಗೆ  ಗಂಭೀರ ಗಾಯ, 10 ಮಂದಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ  ಪಡೆದುಕೊಂಡಿದ್ದಾರೆ. 
-ಬಾಲಕಿಯರು 53 
-ಬಾಲಕರು 197 
-ಒಟ್ಟು 250 
-ಪುರುಷರು 204
-ಮಹಿಳೆಯರು 31 
-ವಯಸ್ಕರು 235

Advertisement

Udayavani is now on Telegram. Click here to join our channel and stay updated with the latest news.

Next