Advertisement

ದನಗಳಿಗೆ ಎಪಿಎಂಸಿ ಪಶು ಆಸ್ಪತ್ರೆ ಚಿಕಿತ್ಸೆ ಕೊಡಿಸಿ

05:44 PM Jul 13, 2022 | Shwetha M |

ವಿಜಯಪುರ: ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ವಾರಕ್ಕೊಮ್ಮೆ ಜಾನುವಾರು ಸಂತೆ ನಡೆಯಲಿದೆ. ಈ ಸಂತೆಗೆ ಆಗಮಿಸುವ ರೈತರರು ತಮ್ಮ ಜಾನುವಾರುಗಳ ರೋಗ ಪರೀಕ್ಷೆ, ಚಿಕಿತ್ಸೆ ಕೊಡಿಸುವ ಮೂಲಕ ಪಶು ಆಸ್ಪತ್ರೆಯ ಅನುಕೂಲ ಪಡೆಯಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ವಿಜಯಪುರ ನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಪಶು ಆಸ್ಪತ್ರೆ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ತಮ್ಮ ರೋಗಪೀಡಿ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಎಪಿಎಂಸಿ ಪಶು ಆಸ್ಪತ್ರೆ ಸಹಕಾರಿ ಆಗಲಿದೆ ಎಂದರು.

ಬಳಿಕ ಶಾಸಕರು ಎಪಿಎಂಸಿ ಕಚೇರಿಗೆ ತೆರಳಿ, ಎಪಿಎಂಸಿ ಆಡಳಿತಾಧಿ ಕಾರಿಗಳು ಆಗಿರುವ ವಿಜಯಪುರ ತಹಶೀಲ್ದಾರ್‌ ಸಿದ್ಧರಾಮ ಬೋಸಗಿ, ಎಪಿಎಂಸಿ ಕಾರ್ಯದರ್ಶಿಗಳಾದ ಎಚ್‌.ಸಿ.ಎಂ. ರಾಣಿ, ಸಹಾಯಕ ಕಾರ್ಯದರ್ಶಿ ಔರಂಗಬಾದ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಇನ್ನಿತರರೊಂದಿಗೆ ಸಭೆ ನಡೆಸಿ, ಎಪಿಎಂಸಿಯು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಕೆಲವು ಮಹತ್ವದ ಸಲಹೆಗಳನ್ನು ನೀಡಿದರು.

ವಿಜಯಪುರ ಎಪಿಎಂಸಿ ಆಡಳಿತಾ ಧಿಕಾರಿಗಳಾದ ವಿಜಯಪುರ ತಹಸೀಲ್ದಾರ ಸಿದ್ಧರಾಮ ಬೋಸಗಿ, ಎಪಿಎಂಸಿ ಕಾರ್ಯದರ್ಶಿ ಎಚ್‌.ಸಿ.ಎಂ. ರಾಣಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next