1. ಓರಲ್ ರಿಹೈಡ್ರೇಶನ್ ಚಿಕಿತ್ಸೆ
– ಪ್ರಯಾಣಿಕ ಭೇದಿಯುಂಟಾದ ಸಂದರ್ಭದಲ್ಲಿ ದೇಹದಿಂದ ದ್ರವಾಂಶ ಮತ್ತು ಎಲೆಕ್ಟ್ರೊಲೈಟ್‌ಗಳು ನಷ್ಟವಾಗುತ್ತವೆ, ಹೀಗಾಗಿ ಪ್ರಯಾಣಿಕ ಭೇದಿಗೆ ತುತ್ತಾದವರಿಗೆ ಅದರಲ್ಲೂ ವಿಶೇಷವಾಗಿ, ಎಳೆಯರು ಮತ್ತು ದೀರ್ಘಕಾಲದ ಅನಾರೋಗ್ಯಗಳುಳ್ಳ ಹಿರಿಯರಲ್ಲಿ ಇವುಗಳ ಮರುಪೂರಣ ಅತ್ಯಂತ ಪ್ರಾಮುಖ್ಯವಾಗಿರುತ್ತದೆ.
Advertisement
– ಆರೋಗ್ಯಯುತ ಪ್ರವಾಸಿಗರಲ್ಲಿ ವಾಂತಿ ದೀರ್ಘಕಾಲ ಮುಂದು ವರಿಯದೆ ಇದ್ದಲ್ಲಿ ಪ್ರಯಾಣಿಕ ಭೇದಿಯಿಂದ ತೀವ್ರ ನಿರ್ಜಲೀಕರಣ ಸಮಸ್ಯೆ ಉಂಟಾಗುವುದು ಅಪರೂಪ, ಅಸಹಜ.
Related Articles
Advertisement
– ಒಆರ್‌ಎಸ್ ಬಹುತೇಕ ಎಲ್ಲ ಅಭಿವೃದ್ಧಿಶೀಲ ದೇಶಗಳಲ್ಲಿ ಅಂಗಡಿಗಳು ಮತ್ತು ಔಷಧಾಲಯಗಳಲ್ಲಿ ಲಭ್ಯವಿರುತ್ತದೆ.
– ಒಂದು ಪ್ಯಾಕೆಟ್ ಒಆರ್‌ಎಸ್ ಪುಡಿಯನ್ನು ಸೂಚಿಸಿದ ಪ್ರಮಾಣದ ಕುದಿಸಿದ ಅಥವಾ ಶುದ್ಧೀಕರಿಸಿದ ನೀರಿಗೆ – ಸಾಮಾನ್ಯವಾಗಿ ಒಂದು ಲೀಟರ್- ಸೇರಿಸಿ ಒಆರ್‌ಎಸ್ ದ್ರಾವಣವನ್ನು ತಯಾರಿಸಲಾಗುತ್ತದೆ.
2. ವೈದ್ಯರ ಸಲಹೆ ಪಡೆದ ಬಳಿಕ ಮಾತ್ರ ನಿರ್ದಿಷ್ಟ ಆ್ಯಂಟಿ ಬಯಾಟಿಕ್‌ಗಳನ್ನು ತೆಗೆದುಕೊಳ್ಳಬೇಕು.ಪ್ರಯಾಣ ಸಂದರ್ಭ ಅಪಘಾತ ಮತ್ತು ಗಾಯಗಳ ಅಪಾಯ ವಿದೇಶ ಪ್ರವಾಸ ಕೈಗೊಳ್ಳುವ ಪ್ರಯಾಣಿಕರಲ್ಲಿ ಅಂದಾಜು ಶೇ.18ರಿಂದ ಶೇ.24ರಷ್ಟು ಮರಣಗಳು ಗಾಯಗಳಿಂದ ಉಂಟಾಗುತ್ತವೆ; ಸೋಂಕು ರೋಗಗಳಿಂದ ಉಂಟಾಗುವ ಮೃತ್ಯುಗಳು ಕೇವಲ ಶೇ.2 ಮಾತ್ರ. ಗಾಯಗಳಿಂದ ಉಂಟಾಗುವ ಮರಣಗಳಿಗೆ ಕಾರಣವಾಗುವ ಅಂಶಗಳೆಂದರೆ ಅಪರಿಚಿತ ಹಾಗೂ ಅಪಾಯಕಾರಿ ಪರಿಸರಗಳು, ಭಾಷೆ ಮತ್ತು ಸಂವಹನದಲ್ಲಿ ಭಿನ್ನತೆ, ಉತ್ಪನ್ನಗಳು ಮತ್ತು ವಾಹನ ಗುಣಮಟ್ಟ ಸಂಬಂಧ ಸಡಿಲು ನಿರ್ಬಂಧಗಳು, ಅಪರಿಚಿತ ನಿಯಮಗಳು ಮತ್ತು ನಿಬಂಧನೆಗಳು ಹಾಗೂ ಅಪಾಯವನ್ನು ಆಹ್ವಾನಿಸುವ ನಡವಳಿಕೆಗೆ ಕಾರಣವಾ ಗುವ ರಜಾ ಅಥವಾ ಪ್ರವಾಸೀ ಉತ್ಸಾಹ. ಸುರಕ್ಷೆಯ ಕ್ರಮಗಳು
– ಅಗತ್ಯ ಬಿದ್ದರೆ ಉತ್ತಮ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತೆ ಪ್ರವಾಸಿಗರು ವಿಶೇಷ ಪ್ರವಾಸ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳುವುದು ವಿಹಿತ.
– ಪರ್ವತಾರೋಹಣ, ಸ್ಕೈಡೈವಿಂಗ್, ವೈಟ್ ವಾಟರ್ ರ್ಯಾಫ್ಟಿಂಗ್, ಕಯಾಕಿಂಗ್, ಸ್ಕೀಯಿಂಗ್‌ನಂತಹ ಸಾಹಸ ಪ್ರವಾಸಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಸುರಕ್ಷಾ ಸಲಕರಣೆಗಳು, ತಜ್ಞ ವೃತ್ತಿಪರರ ಸಹಾಯ, ಉತ್ತಮ ಆರೋಗ್ಯ ಸ್ಥಿತಿ ಕಾಯ್ದುಕೊಳ್ಳುವುದು, ಕ್ಷಿಪ್ರ ಅಪಾಯ ಮತ್ತು ತುರ್ತು ಆರೋಗ್ಯ ಸೇವೆ ಒದಗುವುದನ್ನು ಖಚಿತ ಪಡಿಸಿಕೊಳ್ಳುವುದು ಅಗತ್ಯ
– ಪ್ರವಾಸಿಗರು ಪ್ರಾಥಮಿಕ ಚಿಕಿತ್ಸೆಯ ಅರಿವನ್ನು ಹೊಂದಿರುವುದು ಅಗತ್ಯ.
– ಪ್ರವಾಸಿಗರು ನಿರೀಕ್ಷಿತ ಪ್ರವಾಸ ಸಂದರ್ಭ ಹಾಗೂ ಪ್ರವಾಸ ಕಾಲದ ಚಟುವಟಿಕೆಗಳಿಗೆ ನಿರ್ದಿಷ್ಟವಾದ ಔಷಧ – ಸಲಕರಣೆಗಳನ್ನು ಹೊಂದಿರುವ ಒಂದು ಪ್ರವಾಸೀ ಆರೋಗ್ಯ ಕಿಟ್ ತಮ್ಮ ಬಳಿ ಇರಿಸಿಕೊಳ್ಳುವುದು ಅತ್ಯಗತ್ಯ. ಪ್ರವಾಸಿಗರಿಗೆ ಪ್ರಯಾಣ
ವಿಮೆಯ ಪ್ರಾಮುಖ್ಯ
ವಿದೇಶ ಪ್ರವಾಸ ಸಂದರ್ಭದಲ್ಲಿ ವಿಮಾನ ತಪ್ಪಿಹೋಗುವುದು, ಪ್ರಯಾಣ ವಿಳಂಬ ಅಥವಾ ರದ್ದತಿ, ಲಗೇಜು ಕಳೆದುಹೋಗುವುದು, ಪಾಸ್‌ಪೋರ್ಟ್ ಕಳೆದುಹೋಗುವುದು, ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಹಾಗೂ ಹಠಾತ್ ಅನಾರೋಗ್ಯ ಅಥವಾ ಗಾಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗುವಂತಹ ನಿರ್ದಿಷ್ಟ ಘಟನೆಗಳ ವಿರುದ್ಧ ಪ್ರವಾಸಿಗರಿಗೆ ರಕ್ಷಣೆ/ ಪರಿಹಾರ ಒದಗಿಸುವುದೇ ಪ್ರಯಾಣ ವಿಮೆ ಅಥವಾ ಟ್ರಾವೆಲ್ ಇನ್ಶೂರೆನ್ಸ್. ಸಂಪೂರ್ಣ ಪ್ರವಾಸಕ್ಕೆ ವಿಮೆ ಅನ್ವಯವಾಗುವಂತೆ ವಿದೇಶ ಪ್ರವಾಸದ ಟ್ರಿಪ್ ಕಾಯ್ದಿರಿಸುವ ಸಂದರ್ಭದಲ್ಲಿಯೇ ವಿಮೆ ಮಾಡಿಸಿಕೊಳ್ಳುವುದು ವಿಹಿತ. ಪ್ರವಾಸ ಆರೋಗ್ಯ ವಿಮೆಯು ಆಸ್ಪತ್ರೆ ದಾಖಲೀಕರಣಕ್ಕೆ ಮುನ್ನ ಮತ್ತು ಬಳಿಕದ ಎರಡೂ ವೆಚ್ಚಗಳನ್ನು ಭರಿಸುತ್ತದೆ. ಟ್ರಾವೆಲ್ ಕಿಟ್
ಟ್ರಾವೆಲ್ ಕಿಟ್‌ನಲ್ಲಿ ಇರಬೇಕಾದಂಥವು: ಬ್ಯಾಂಡೇಜ್‌ಗಳು, ಆ್ಯಂಟಿ ಸೆಪ್ಟಿಕ್ ದ್ರಾವಣಗಳು, ಸನ್‌ಸ್ಕ್ರೀನ್, ಮಾಯಿಶ್ಚರೈಸರ್‌ಗಳು, ಥರ್ಮೊಮೀಟರ್, ಒಆರ್‌ಎಸ್ ಪುಡಿಯ ಪೊಟ್ಟಣಗಳು, ಕ್ರಿಮಿಕೀಟ ವಿಕರ್ಷಕಗಳು ಮತ್ತು ಶಿಫಾರಸು ಮಾಡಲ್ಪಟ್ಟ ಔಷಧಗಳು. ಪ್ರವಾಸ ಚಿಕಿತ್ಸಾ ವಿಭಾಗದಲ್ಲಿ ಪರಿಣತ ತಜ್ಞ ವೈದ್ಯರು ಪ್ರವಾಸಿಗರಿಗೆ ಆರೋಗ್ಯಪೂರ್ಣ ಪ್ರವಾಸ ಕೈಗೊಳ್ಳುವುದಕ್ಕೆ ಬೇಕಾದ ಎಲ್ಲ ಅಗತ್ಯ ಸಲಹೆ – ಸೂಚನೆಗಳನ್ನು ಒದಗಿಸುತ್ತಾರೆ.