Advertisement
ಉದ್ಯಮಿಯೊಬ್ಬರು ಈ ಕುರಿತು ಭರವಸೆ ಹುಟ್ಟಿಸಿದ್ದರು. ಅವರೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇನ್ನು ಜಿಲ್ಲಾಕೇಂದ್ರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಗಿರುವುದರಿಂದಕನಿಷ್ಠ ಸಂಖ್ಯೆಯಲ್ಲಿ ವಿಶೇಷ ತಜ್ಞರು ಲಭ್ಯವಿದ್ದರೆ ಅಲ್ಲಿ ಟ್ರೋಮಾ ಸೆಂಟರ್ ವ್ಯವಸ್ಥೆ ತಕ್ಕಮಟ್ಟಿಗೆ ಮಾಡಬಹುದು. ಹೊಸದಾಗಿ ಆರಂಭವಾದ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯರ ಕೊರತೆ ಇದೆ. ಕಾರವಾರ ಜಿಲ್ಲಾ ಕೇಂದ್ರವಾದರೂಒಂದು ಮೂಲೆಯಲ್ಲಿದೆ. ಹಳಿಯಾಳ, ದಾಂಡೇಲಿ, ಮುಂಡಗೋಡ, ಶಿರಸಿ, ಸಿದ್ದಾಪುರಭಾಗದ ಜನರಿಗೆ ಕಾರವಾರಕ್ಕಿಂತ ಹುಬ್ಬಳ್ಳಿಹತ್ತಿರವಾಗುತ್ತದೆ. ಭಟ್ಕಳ, ಹೊನ್ನಾವರದ ಜನಕ್ಕೆಉಡುಪಿ ಹತ್ತಿರವಾಗುತ್ತದೆ. ಕಾರವಾರದಲ್ಲಿ ಟ್ರೋಮಾ ಸೆಂಟರ್ ಆದರೆ ಜಿಲ್ಲೆಯಲ್ಲಿ ಟ್ರೋಮಾ ಸೆಂಟರ್ ಇದೆ ಎಂದು ಹೇಳಿಕೊಳ್ಳಬಹುದು ಅಷ್ಟೇ.
Related Articles
Advertisement
ಎಲ್ಲದಕ್ಕೂ ರಾಜಕೀಯ ಬೇಡ : ಮಣಿಪಾಲ ಸಂಸ್ಥೆಗಳಲ್ಲಿ 200ಕ್ಕೂ ಹೆಚ್ಚು ವೈದ್ಯರಿದ್ದಾರೆ, ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ನೂರಾರು ವೈದ್ಯರ ಸೇವೆ ಲಭ್ಯವಿರುತ್ತದೆ. ತುರ್ತು ಸಂದರ್ಭಗಳಲ್ಲಿ ಒಬ್ಬರಲ್ಲ ಒಬ್ಬರು ವೈದ್ಯರು ಸಿದ್ಧರಾಗಿ ಬರುತ್ತಾರೆ. ಆದ್ದರಿಂದ ಅಲ್ಲಿ ಟ್ರೋಮಾ ಸೆಂಟರ್ ನಡೆಸುವುದುಸುಲಭ. ಉತ್ತರ ಕನ್ನಡಕ್ಕೆ ಟ್ರೋಮಾ ಸೆಂಟರ್ ಬೇಕೆಂದಾದರೆದಕ್ಷಿಣದ ದೊಡ್ಡ ಮೆಡಿಕಲ್ ಕಾಲೇಜುಗಳ ಶಾಖೆಯನ್ನು ಕುಮಟಾದಲ್ಲಿ ತೆರೆಯುವಂತೆ ಅಲ್ಲಿಯ ಆಡಳಿತ ಮಂಡಳಿಯ ಮನವೊಲಿಸಬೇಕು, ಜನ ಸ್ವಾಗತಿಸಬೇಕು. ಎಲ್ಲದಕ್ಕೂ ಬರೀ ರಾಜಕೀಯ ಮಾಡಿದರೆ ಏನೂ ಆಗುವುದಿಲ್ಲ ಅಥವಾ ದಕ್ಷಿಣಕನ್ನಡದ ದೊಡ್ಡ ಆಸ್ಪತ್ರೆಗಳಿಂದ ಎರ್ ಅಂಬುಲೆನ್ಸ್ ಸೇವೆ ದೊರೆಯುವಂತೆ ಮಾಡಬೇಕು. ಅದರ ಲಾಭ ಬಡವರಿಗೆ ಸಿಗಬೇಕಾದರೆ ಕೇಂದ್ರ ಸರ್ಕಾರ ಆಯುಷ್ಮಾನ್ ಹೊಂದಿದವರಿಗೆ ಈ ಸೌಲಭ್ಯವನ್ನು ವಿಸ್ತರಿಸಬೇಕು. ರಾಜಕೀಯ ಇಚ್ಛಾಶಕ್ತಿಯಿದ್ದರೆ ಎಲ್ಲವೂ ಸಾಧ್ಯ. ಜಿಲ್ಲೆಯಲ್ಲಿರುವ ನರ್ಸಿಂಗ್ ಹೋಂಗಳ ವೈದ್ಯರು, ಸರ್ಕಾರಿ ವೈದ್ಯರು ಮನಸ್ಸು ಮಾಡಿದರೆ ಟ್ರೋಮಾಸೆಂಟರ್‌ಸ್ಥಾಪಿಸಬಹುದು. ಇತ್ತೀಚೆಗೆ ಉನ್ನತ ವೈದ್ಯಕೀಯ ಶಿಕ್ಷಣ ಪಡೆದ ಜಿಲ್ಲೆಯ 50ಕ್ಕೂ ಹೆಚ್ಚು ಪರಿಣಿತ ವೈದ್ಯರು ಜಿಲ್ಲೆಯ ಹೊರಗೆ ಕೆಲಸ ಮಾಡುತ್ತಿದ್ದಾರೆ, ಎಲ್ಲ ಕ್ಷೇತ್ರವನ್ನೂ ರಾಜಕೀಯ ಹಾಳುಮಾಡುತ್ತಿದೆ. “ಸದ್ಯಕ್ಕಂತೂ ಉತ್ತರ ಕನ್ನಡಕ್ಕೆ ಸ್ವಾಗತ, ಇಲ್ಲಿ ಯಾವುದೇ ಸುಸಜ್ಜಿತ ಆಸ್ಪತ್ರೆ ಇಲ್ಲಾ, ನಿಧಾನವಾಗಿ ಚಲಾಯಿಸಿ’ ಎಂಬ ಬೋರ್ಡ್ ಎಲ್ಲೆಡೆ ರಾರಾಜಿಸಲಿ ಎಂದು ವಾಟ್ಸ್‌ಆ್ಯಪ್‌ನಲ್ಲಿ ಹಲವರು ಸಲಹೆ ನೀಡಿದ್ದಾರೆ.
ಏನಿದು ಟ್ರೋಮಾ ಸೆಂಟರ್? : ಅಪಘಾತಗಳಿಂದ ಮೆದುಳು, ಎದೆ ಸಹಿತ ದೇಹದ ಯಾವುದೇ ಭಾಗಕ್ಕೆ ಆಗುವ ಗಂಭೀರ ಗಾಯ, ಹೃದಯಾಘಾತ, ಆತ್ಮಹತ್ಯೆಯ ಯತ್ನ, ವಿಷಕಾರಿ ಹಾವು ಕಡಿತ, ಪಾರ್ಶ್ವವಾಯು, ಮರದಿಂದ ಬಿದ್ದು ಕೈಕಾಲು,ಬೆನ್ನುಹುರಿಗೆ ಗಂಭೀರ ಗಾಯವಾಗುವುದಕ್ಕೆ ತುರ್ತುಚಿಕಿತ್ಸೆ ನೀಡುವ ಘಟಕಕ್ಕೆ ಟ್ರೋಮಾ ಸೆಂಟರ್ ಎಂದು ಕರೆಯಲಾಗುತ್ತದೆ.
-ಜೀಯು