Advertisement
ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್ ಹಾಗೂ ಬೈಂದೂರು ತಹಶೀಲ್ದಾರ ಪುರಂದರ ಹೆಗಡೆ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಜೆಸಿಬಿ ಯಂತ್ರದ ಮೂಲಕ ಗೂಡಂಗಡಿಗಳನ್ನು ನೆಲಸಮಗೊಳಿಸಲು ಮುಂದಾದಾಗ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಪೊಲೀಸ್ ಸರ್ಪಗಾವಲಿನ ನಡುವೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ವ್ಯಾಪಾರಸ್ಥರು ಕಕ್ಕಾಬಿಕ್ಕಿಯಾಗಿದ್ದರು. ಈಗ ಬಂದು ಹೋಗಿ ಎಂದರೆ ಎಲ್ಲಿ ಹೋಗುವುದು ಆದರಿಂದ 15ದಿನಗಳ ಕಾಲಾವಕಾಶ ನೀಡಬೇಕು ಎಂದು ವಿನಂತಿಸಿದರು ಕೇಳಲಿಲ್ಲ, ಈ ನಡುವೆ ಕಾರ್ಯಾಚರಣೆಗೆ ಮುಂದಾದಾಗ ಕೆಲ ವ್ಯಾಪಾರಸ್ಥರು ಸಮುದ್ರಕ್ಕೆ ಹಾರಿ ಜೀವ ಕಳೆದುಕೊಳ್ಳಲು ಯತ್ನಿಸಿದರು. ಬಳಿಕ ಅಧಿಕಾರಿಗಳು ಸಂಜೆಯ ವರೆಗೆ ತೆರವುಗೊಳಿಸಲು ಸಮಯ ನೀಡಿದರು. ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಹಿಂದಿನ ಭರವಸೆ ಠುಸ್
ಈ ಹಿಂದೆ ಅಧಿಕಾರಿಗಳು ತ್ರಾಸಿ ಪ್ರವಾಸಿ ಮಂದಿರದಲ್ಲಿ ವ್ಯಾಪಾರಸ್ಥರೊಂದಿಗೆ ಮಾತುಕತೆ ನೆಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಭರವಸೆ ನೀಡಿದರು. ಪರ್ಯಾಯ ಜಾಗವನ್ನು ನೀಡದೆ ನಿಮ್ಮನ್ನು ತೆರವುಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅದರೆ ಈಗ ಏಕಾಏಕಿ ಬಂದು ನಮ್ಮ ಹೊಟ್ಟೆ ಮೇಲೆ ಹೊಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ವ್ಯಾಪಾರಸ್ಥರು.
Related Articles
Advertisement
ಊಟ ಕಸಿದುಕೊಂಡರು13ವರ್ಷಗಳಿಂದ ಇಲ್ಲಿನ ದಿನಿತ್ಯದ ವ್ಯಾಪಾರ ನಂಬಿಕೊಂಡು ನನ್ನ ಹಾಗೂ ಕುಟುಂಬದವರ ಜೀವನ ನಡೆಯುತಿತ್ತು. ಇದೇ ಬದುಕಿನ ಆಧಾರ ಸ್ತಂಭವಾಗಿತು. ಬೇರೆ ವ್ಯವಸ್ಥೆ ಮಾಡದೇ ಜಾಗ ಬಿಡಲು ಹೇಳಿದಾಗ ಕೈಕಾಲುಗಳು ನಡುಗಲು ಶುರುವಾಗಿದೆ. ಒಂದು ತಿಂಗಳ ಬಳಿಕ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ. ಅಲ್ಲಿಯ ವರೆಗೇ ದಿನ ದೂಡುವುದಾದರು ಹೇಗೆ ಬದುಕೇ ದುಸ್ಥರವಾಗಿ ಪರಿಣಮಿಸಿದೆ ಎಂದು ಕಣ್ಣೀರಿಡುತ್ತಾರೆ ರಾಜಶೇಖರ್ ಕುಂದರ್. ಜೀವಗಳನ್ನು ಉಳಿಸಿದ್ದೇನೆ..!
ಪ್ಯಾಪಾರದಲ್ಲಿ ಸಿಗುವ ಒಂದಿಷ್ಟು ಲಾಭಾಂಶದಿಂದಲ್ಲೇ ಜೀವನ ಸಾಗುತಿತ್ತು. ನಮಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಸಾಕಿತ್ತು. ಅಲ್ಲಿಗೆ ಹೋಗಬಹುದಿತ್ತು. ಇಷ್ಟೊಂದು ಪೊಲೀಸ್ ಬಂದೋಬಸ್ತ್ ಮಾಡುವುದು ಬೇಕಿರಲಿಲ್ಲ, ನಾವು ಹೊಟ್ಟೆಪಾಡಿಗಾಗಿ ಇಲ್ಲಿರೋದೋ, 20ವರ್ಷಗಳಿಂದ ಇಲ್ಲಿದ್ದು, ನಾಲ್ಕು ಜೀವಗಳನ್ನು ಉಳಿಸಿದ್ದೇನೆ. ಸ್ವಲ್ಪ ದಿನಗಳ ಸಮಯವನ್ನು ನೀಡುವ ಮಾನವೀಯತೆಯು ತೋರಲಿಲ್ಲ.
– ನಿತ್ಯಾನಂದ ವ್ಯಾಪಾರಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು
ಕೆಲವು ಸಮಯದಿಂದ ತೆರವು ಮಾಡುವಂತೆ ತಿಳಿಸುತ್ತಿದ್ದು ಇದುವರೆಗೂ ತೆರವುಗೊಳಿಸದೇ ಇರುವುದರಿಂದ ಈಗ ಕಾರ್ಯಾಚರಣೆ ಮೂಲಕ ತೆರವುಗೊಳಿಸುವುದು ಅನಿವಾರ್ಯವಾಗಿದೆ. ವ್ಯಾಪಾರಿಗಳಿಗೆ ಒಂದು ತಿಂಗಳ ಬಳಿಕ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
– ಭೂಬಾಲನ್, ಕುಂದಾಪುರ ಸಹಾಯಕ ಕಮೀಷನರ್