Advertisement

ಅಗತ್ಯ ವಸ್ತುಗಳ ಸಾಗಾಟ ಕೊಂಕಣ ರೈಲ್ವೇಯಿಂದ ಇನ್ನೊಂದು ವಿಶೇಷ ರೈಲು

02:04 AM Apr 23, 2020 | Sriram |

ಉಡುಪಿ: ಸಾರ್ವಜನಿಕರಿಗೆ ಅಗತ್ಯವಿರುವ ವಸ್ತುಗಳ ಪೂರೈಕೆಗೆ ಓಖಾ-ತಿರುವನಂತಪುರ ನಡುವೆ ಕೊಂಕಣ ರೈಲ್ವೇ ಇನ್ನೊಂದು ವಿಶೇಷ ರೈಲನ್ನು ಓಡಿಸಲಿದೆ.

Advertisement

ಎ. 27ರ ಮಧ್ಯಾಹ್ನ 1.10ಕ್ಕೆ ಓಖಾದಿಂದ ಹೊರಟ (00933) ರೈಲು ಎ. 29ರ ಮಧ್ಯಾಹ್ನ 12ಕ್ಕೆ ತಿರುವನಂತಪುರಕ್ಕೆ ತಲುಪಲಿದೆ. ಎ. 29ರ ರಾತ್ರಿ 11ಕ್ಕೆ ತಿರುವನಂತಪುರದಿಂದ ಹೊರಡುವ (00934) ರೈಲು ಮೇ 1ರ ರಾತ್ರಿ 9.40ಕ್ಕೆ ಓಖಾ ಜಂಕ್ಷನ್‌ ತಲುಪಲಿದೆ.

ಓಖಾದಿಂದ ಹೊರಟ ರೈಲು ಎ. 28ರ ರಾತ್ರಿ 9.10ಕ್ಕೆ ಹಾಗೂ ತಿರುವನಂತಪುರದಿಂದ ಹೊರಟ ರೈಲು ಎ. 30ರ ಮಧ್ಯಾಹ್ನ 1.20 ಉಡುಪಿ ನಿಲ್ದಾಣಕ್ಕೆ ಬರಲಿದೆ. ವಿವಿಧ ಸ್ಥಳಗಳಿಗೆ ವಸ್ತುಗಳನ್ನು ಕಳುಹಿಸಲಿಚ್ಛಿಸುವರು ರೈಲು ನಿಲ್ದಾಣಗಳಲ್ಲಿ ಬುಕ್‌ ಮಾಡಬಹುದು.

ರೈಲು ಜಾಮ್‌ನಗರ್‌, ರಾಜ್‌ಕೋಟ್‌, ಸುರೇಂದ್ರನಗರ್‌, ಅಹ್ಮದಾಬಾದ್‌, ಆನಂದ್‌, ವಡೋದರ, ಭರೂಚ್‌, ಸೂರತ್‌, ವಸಾೖ ರೋಡ್‌, ಪನ್ವೇಲ್‌, ರೋಹಾ, ರತ್ನಾಗಿರಿ, ಕಂಕಾವಿÛ, ಮಡ್ಗಾಂವ್‌, ಉಡುಪಿ, ಮಂಗಳೂರು ಜಂಕ್ಷನ್‌, ಕಣ್ಣೂರು, ಕೋಯಿಕ್ಕೋಡ್‌, ಶೋರ್ನೂರ್‌, ತೃಶ್ಶೂರ್‌, ಎರ್ನಾಕುಲಂ ಟೌನ್‌, ಕೊಟ್ಟಾಯಂ ಮತ್ತು ಕೊಲ್ಲಂ ಜಂಕ್ಷನ್‌ನಲ್ಲಿ ನಿಲುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next