Advertisement

5 ದಿನ ಪೂರೈಸಿದ ಸಾರಿಗೆ ನೌಕರರ ಮುಷ್ಕರ

04:07 PM Apr 12, 2021 | Team Udayavani |

ಕಾರಟಗಿ: ಆರನೇ ವೇತನ ಆಯೋಗ ಜಾರಿಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆಒತ್ತಾಯಿಸಿ ಸಾರಿಗೆ ನೌಕರರ ಕೂಟ ಕರೆನೀಡಿದ ಅನಿರ್ದಿಷ್ಟಾವಧಿ  ಮುಷ್ಕರ ರವಿವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾಡಳಿತಮಾತ್ರ ಈ ಭಾಗದಲ್ಲಿ ಪರ್ಯಾಯ ಸಾರಿಗೆವ್ಯವಸ್ಥೆ ಮಾಡದ ಕಾರಣ ಪ್ರಯಾಣಿಕರುಆಟೊ, ಟಾಟಾ ಏಸ್‌ಗಳಿಗೆ ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ.

Advertisement

ಮಾ. 7ರಂದು ಬುಧವಾರ ಬೆಳಗ್ಗೆಯಿಂದ ಆರಂಭಗೊಂಡ ಈ ಸಾರಿಗೆ ಮುಷ್ಕರಐದನೇ ದಿನಕ್ಕೆ ಕಾಲಿಟ್ಟಿದ್ದು, ರಸ್ತೆ ಸಾರಿಗೆಸಂಸ್ಥೆಯ ವಾಹನಗಳ ಓಡಾಟವಿಲ್ಲದೇ 5ದಿನಗಳಿಂದ ಗ್ರಾಮೀಣ ಭಾಗದ ಜನತೆಖಾಸಗಿ ವಾಹನಗಳಿಗೆ ಬಸ್‌ ಟಿಕೆಟ್‌ ದರಕ್ಕಿಂತಹೆಚ್ಚಿನ ಹಣ ನೀಡಿ ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿದೆ.

ಮುಷ್ಕರಕ್ಕೆ ತೆರೆ ಬೀಳಬಹುದು, ಬಸ್‌ಗಳು ಸಂಚರಿಸಬಹುದು ಎಂಬಭರವಸೆ ಮೇಲೆ ಸಾರ್ವಜನಿಕರು ತಮ್ಮ ಪ್ರಯಾಣ ನಿಗದಿ ಪಡೆಸಿಕೊಂಡು ಬಸ್‌ ನಿಲ್ದಾಣಗಳಲ್ಲಿ ಬಂದು ನಿಂತ ದೃಶ್ಯಗಳುಕೂಡ ಕಂಡುಬಂದವು. ಅಲ್ಲದೇ ಖಾಸಗಿವಾಹನಗಳಾದ ಟಾಟಾ ಏಸ್‌, ಟಾಂಟಾಂ,ಆಟೋ ಕೆಲವು 30-40 ಕಿ.ಮೀ. ದೂರದಊರುಗಳಿಗೆ ಮಾತ್ರ ಸೀಮಿತವಾಗಿದ್ದರಿಂದದೂರದ ಊರುಗಳಿಗೆ ತೆರಳಲು ಜನತೆತೊಂ ದರೆ ಅನುಭವಿಸುತ್ತಿದ್ದಾರೆ. ಹೆಚ್ಚಿನ ಹಣನೀಡಲು ಪ್ರಯಾಣಿಕರು ತಯಾರಿದ್ದರೂ ಪ್ರಯಾಣಿಸಲು ವಾಹನಗಳ ವ್ಯವಸ್ಥೆ ಇಲ್ಲ.ಮುಷ್ಕರದಿಂದ ಖಾಸಗಿ ವಾಹನಗಳಿಗೆ ಭಾರಿ ಬೇಡಿಕೆ ಬಂದಿದ್ದು, ಸರಕುಗಳನ್ನುಸಾಗಾಣಿಕೆ ಮಾಡುವ ವಾಹನಗಳು ಕೂಡ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ.

ಸಾರಿಗೆ ಸಂಸ್ಥೆಯ ಬಸ್‌ಗಳ ಓಡಾಟವಿಲ್ಲದ ಕಾರಣಕ್ಕೆ ಖಾಸಗಿ ವಾಹನಗಳ ಭರಾಟೆ ಜೋರಾಗಿದ್ದು ಕನಕದಾಸ ವೃತ್ತ, ನವಲಿ ರಸ್ತೆಯ ಕರೆಯಪ್ಪ ತಾತನದೇವಸ್ಥಾನದ ಬಳಿ, ಹಳೆ ಬಸ್‌ ನಿಲ್ದಾಣದಬಳಿ ನವಲಿ, ಬೂದಗುಂಪಾ, ಕನಕಗಿರಿ, ಸಿಂಧನೂರ ಸೇರಿದಂತೆ ಇತರೆ ಗ್ರಾಮಗಳಿಗೆತೆರಳಲು ಟ್ರಾಕ್ಸ್‌, ಟಾಟಾ ಏಸ್‌, ಆಟೋಗಳುಸರ ದಿಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದಾರೆ.ದೂರದ ಊರುಗಳಿಗೆ ತೆರಳುವಪ್ರಯಾಣಿಕರಿಗಿಂತ ಸಿಂಧನೂರ, ಗಂಗಾವತಿ,ಕಾರಟಗಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಖಾಸಗಿವಾಹನಗಳನ್ನೆ ಅವಲಂಬಿಸಿದ್ದು ಹೀಗಾಗಿ ಬಸ್‌ ಗಳ ಅವಲಂಬಿತರು ಕಡಿಮೆ.

Advertisement

Udayavani is now on Telegram. Click here to join our channel and stay updated with the latest news.

Next